ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ – ನಾಲ್ವರ ಬಂಧನ
ಮಂಗಳೂರು: ನಗರದಲ್ಲಿ ನಿಷೇಧಿತ ಮದಕ ವಸ್ತುಗಳಾದ ಎಲ್.ಎಸ್.ಡಿ.(Lysergic Acid diethylamide) ಎಂ.ಡಿ.ಎಂ.ಎ. (Methylene Dioxy Meth Amphetami) ಮತ್ತು ಎಂ.ಡಿ.ಎಂ. (Methylene Dioxy Methamthetami) ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ, ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಬೇಧಿಸಿ ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿರುತ್ತಾರೆ.
ಬಂಧಿತರನ್ನು ಕಾಞಂಗಾಡ್, ಕಾಸರಗೋಡು ಜಿಲ್ಲೆ ನಿವಾಸಿ ನಿಖಿಲ್ ಕೆ.ಬಿ. (24), ಕುಲಶೇಖರ ನಿಡ್ಡೇಲ್ ನಿವಾಸಿ ಶ್ರವಣ ಪೂಜಾರಿ (23), ಕಣ್ಣೂರು ನಿವಾಸಿ ರೋಶನ್ ವೇಗಸ್ (22), ತ್ರೀಶೂರ್ ನಿವಾಸಿ ಬಾಶಿಂ ಬಸೀರ್ (22) ಎಂದು ಗುರುತಿಸಲಾಗಿದೆ.
ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ದಸ್ತಗಿರಿ ಮಾಡಿ ಎಂ.ಡಿ.ಎಂ.ಎ. ಪೌಡರ್ 9.00 ಗ್ರಾಂ, ಎಲ್.ಎಸ್.ಡಿ ಸ್ಟಾಂಪ್ -185, ಎಂ.ಡಿ.ಎಂ. ಪಿಲ್ಸ್ (ಪಿಲ್ಸ್ – 25), ಇಲೆಕ್ಟ್ರಾನಿಕ್ ತೂಕದ ಯಂತ್ರ -1, ಮೊಬೈಲ್ – 4, ಮೋಟಾರ್ ಸೈಕಲ್ (ಯಮಹಾ) -1, ಮೋಟಾರ್ ಸೈಕಲ್(ಬುಲೆಟ್)-1, ಹುಕ್ಕ – 2 ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಲ್ಲಿ 1 ನೇ ಆರೋಪಿ ನಿಖಿಲ್ ಎಂಬವನು ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ 8 ನೇ ಸೆಮಿಸ್ಟರ್ ಓದಿದ್ದು, 2 ವಿಷಯಗಳಲ್ಲಿ ಫೈಲ್ ಆಗಿರುತ್ತಾನೆ. ಶ್ರವಣ್ ಪೂಜಾರಿ ಈತನು 2015 ರಲ್ಲಿ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಪಾಸ್ ಆಗಿರುತ್ತಾನೆ. ರೋಷನ್ ಸುರೇಶ್ ಮತ್ತು ಬಾಸಿಂ ಬಶೀರ್ ಇಬ್ಬರೂ ನಗರದ ವೈಧ್ಯಕೀಯ ಕಾಲೇಜಿನಲ್ಲಿ 3 ನೇ ವರ್ಷದ ದಂತ ವೈಧ್ಯಕೀಯ ವಿಧ್ಯಾರ್ಥಿಗಳಾಗಿರುತ್ತಾರೆ.
ಈ ಮೇಲ್ಕಂಡ ಮಾದಕ ದ್ರವ್ಯಗಳನ್ನು ತೂಕ ಮಾಡಿಕೊಡಲು ಒಬ್ಬರು ಸ್ವತಹ ಒಂದು ತೂಕದ ಯಂತ್ರವನ್ನು ಬಳಸುತ್ತಿದ್ದು, ಅದನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮತ್ತು ಆರೋಪಿ ನಿಖಿಲ್ ಎಂವವನು ಈ ಮಾದಕ ದ್ರವ್ಯವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿರುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.ಈ ಪ್ರಕರಣದ ಜಾಲದಲ್ಲಿ ಇನ್ನೂ ಕೆಲವು ಪ್ರಮುಖ ಆರೋಪಿಗಳನ್ನು ಬಂಧಿಸುವುದು ಬಾಕಿ ಇರುತ್ತದೆ. ಹೆಚ್ಚಿನ ತನಿಖೆ ಮುಂದುವರಿದಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 5,30,500/- ಅಂದಾಜಿಸಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ.ಆರ್.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಹನುಮಂತರಾಯ (ಐಪಿಎಸ್) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಯವರು ಮತ್ತು ಸಿಬ್ಬಂದಿಯವರಾದ ಎ.ಎಸ್.ಐ ಸುಂದರ್ ಆಚಾರ್, ಹೆಚ್ ಸಿ ಗಳಾದ ಮೋಹನ್ ಕೆ ವಿ, ಗಿರೀಶ್ ಬೆಂಗ್ರೆ, ರವಿನಾಥ್ ಮುಲ್ಕಿ, ಸುನೀಲ್ ಕುಮಾರ್, ರೆಜಿ ವಿ ಎಂ, ರವಿಚಂದ್ರ ಪಡ್ರೆ, ದಾಮೋದರ ,ರಾಜರಾಮ್ ಕೂಟತ್ತಜೆ, ಮಹಮ್ಮದ್ ಶರೀಪ್ ,ದಯಾನಂದ , ಸುಧೀರ್ ಶೆಟ್ಟಿ ,ಮಹೇಶ್ ಕುಮಾರ್, ಮತ್ತು ಮಹಮ್ಮದ್ ಇಕ್ಬಾಲ್ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.