ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ – ಕಾಂಗ್ರೆಸ್ ವಿರುದ್ದ ಮೋದಿ ವಾಗ್ದಾಳಿ

Spread the love

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ – ಕಾಂಗ್ರೆಸ್ ವಿರುದ್ದ ಮೋದಿ ವಾಗ್ದಾಳಿ

ಮೈಸೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಿದ್ದು ಬೃಹತ್ ಸಮಾವೇಶವನ್ನುದ್ದೇಶಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ನ ಗ್ಯಾರಂಟಿ ಹಾಗೂ ಬೆಂಗಳೂರಿನ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ಲೋಕಸಭೆಗೆ ರಣಕಹಳೆಯನ್ನ ಮೊಳಗಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಮುಂದಿನ 5 ವರ್ಷ ಬಹಳ ಮಹತ್ವದ್ದಾಗಿದೆ. ಕರ್ನಾಟಕ ಐಟಿ ಮತ್ತು ತಂತ್ರಜ್ಞಾನದ ಹಬ್ ಆಗಿದೆ. 10 ವರ್ಷಗಳ ಹಿಂದೆ ಭಾರತ ಬೇರೆ ದೇಶಗಳ ಮೇಲೆ ಅವಲಂಬನೆ ಹೊಂದಿತ್ತು. ಈಗ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದರು. ಮುಂದಿನ 5 ವರ್ಷಗಳವರೆಗೆ ಉಚಿತ ರೇಷನ್ ನೀಡುತ್ತೇವೆ. 75 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ. ಬಡವರಿಗೆ ಮೂರು ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಭಾರತದ ಅಭಿವೃದ್ಧಿ ಜಗತ್ತನ್ನು ಚಕಿತಗೊಳಿಸುತ್ತಿದೆ. ಚಂದ್ರಯಾನ, ಸೆಮಿಕಂಡಕ್ಟರ್ ಮೂಲಕ ಸಾಧನೆ ಮಾಡುತ್ತಿದೆ ಎಂದರು.

ಡಿಜಿಟಲ್ ಇಂಡಿಯಾ ನಮ್ಮ ಜೀವನ ಮುಂದೆ ತಂದಿದೆ. 3 ಕೋಟಿ ಮಹಿಳೆಯರನ್ನು ನಾವು ಲಕ್ಷಾದೀಶೆಯನ್ನಾಗಿ ಮಾಡುತ್ತೇವೆ. ಕರ್ನಾಟಕ ವಿಕಾಸಕ್ಕೆ ಸಾಕಷ್ಟು ಕೆಲಸದ ಅವಶ್ಯಕತೆ ಇದೆ. ಅನುಭವಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ಪ್ರಗತಿ ಹೊಂದಲಿದೆ ಎಂದರು.

ಹಿಂದಿನ ಭಾರತದಲ್ಲಿ ಹಳ್ಳ ಬಿದ್ದ ರಸ್ತೆಗಳಿದ್ದವು. ಆದರೆ ಇಂದಿನ ಭಾರತ ಬದಲಾಗಿದೆ. ಪೂರ್ಣ ಪ್ರಮಾಣದಲ್ಲಿ ಹೈವೆ ರಸ್ತೆಗಳು ನಿರ್ಮಾಣವಾಗಿವೆ. ಭಾರತ ಪ್ರಪಂಚದ RND ಹಬ್ಬ ಮುಂದಿನ ದಿನದಲ್ಲಿ ನಿರ್ಮಾಣ ಆಗಲಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತೇವೆ. 10 ವರ್ಷಗಳ ಹಿಂದೆ ಭಾರತ ಬೇರೆ ದೇಶದ ಮೇಲೆ ಅವಲಂಬಿತವಾಗಿತ್ತು. ಟೆಕ್ನಾಲಜಿ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆ ಮಾಡಿದ್ದೇವೆ. ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತೇವೆ. ಕನ್ನಡ ದೇಶದ ಸಮೃದ್ಧಿ ಭಾಷೆವಾಗಿದೆ. ಎನ್​ಡಿಎ ಏನು ಹೇಳುತ್ತೋ ಅದನ್ನು ಮಾಡಿ ತೋರಿಸುತ್ತದೆ ಎಂದರು.


Spread the love