ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ಶಂಕಿತರ ಗಲಾಟೆ: ಕ್ವಾರಂಟೈನ್ ಗೆ ಬನ್ನಿ ಅಂದ್ರೆ ಪೊಲೀಸರ ಮೇಲೇ ದಾಳಿ..!

Spread the love

ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ಶಂಕಿತರ ಗಲಾಟೆ: ಕ್ವಾರಂಟೈನ್ ಗೆ ಬನ್ನಿ ಅಂದ್ರೆ ಪೊಲೀಸರ ಮೇಲೇ ದಾಳಿ..!

ಬೆಂಗಳೂರು: ಬೆಂಗಳೂರಿನ ಪಾದಾರಾಯನಪುರ ಕೊರೋನಾ ಹಾಟ್ ಸ್ಪಾಟ್ ಆಗಿದ್ದು ಸೀಲ್ ಡೌನ್ ಮಾಡಲಾಗಿತ್ತು. ಆದರೆ ಇದೀಗ ಅಲ್ಲಿನ ಜನರು ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿ ರಸ್ತೆಗಿಳಿದು ಸಿಕ್ಕ ಸಿಕ್ಕಿದ್ದನ್ನೆಲ್ಲಾ ಹೊಡೆದು ದಾಂಧಲೆ ನಡೆಸಿದ್ದಾರೆ.

ಪಾದರಾಯನಪುರದ 58 ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನೂರಾರು ಮಂದಿ ಬೀದಿಗಿಳಿದು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾರೆ.

ಕರ್ತವ್ಯ ನಿರತ ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇರುವುದನ್ನು ಗಮನಿಸಿದ ಕೆಲ ಪುಂಡರು ದಾಂಧಲೆ ನಡೆಸಿದ್ದಾರೆ. ಏಕಾಏಕಿ ವಾಹನಗಳ ಸಮೇತ ಗುಂಪು ಕಟ್ಟಿಕೊಂಡು ಬಂದು ಗಲಾಟೆ ನಡೆಸಿದರು. ಈ ವೇಳೆ ವಿಧಿಯಿಲ್ಲದೆ ಪೊಲೀಸರು ಅಲ್ಲಿಂದ ಕಾಲ್ಕಿಳಬೇಕಾಯಿತು.

ನಂತರ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದು ಸದ್ಯ ಪಾದರಾಯನಪುರದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದ 58 ಜನರನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು. 58 ಜನರನ್ನು ಕ್ವಾರಂಟೈನ್ ಮಾಡಲು ತೆರಳಿದಾಗ ಘರ್ಷಣೆ ನಡೆದಿದೆ. 15 ಜನ ಆಸ್ಪತ್ರೆಗೆ ಬರಲು ಒಪ್ಪಿದ್ದರೆ, ಉಳಿದವರಿಂದ ಗಲಾಟೆ ಸೃಷ್ಟಿಯಾಗಿದೆ. ಶಾಸಕರು ಬರಲಿ ನೋಡೋಣ ಎಂದು 100ಕ್ಕೂ ಹೆಚ್ಚು ಮಂದಿ ಗಲಾಟೆ ನಡೆಸಿದ್ದು, ಪೊಲೀಸ್ ಬ್ಯಾರಿಕೇಡ್ಗಳನ್ನು ಕಿತ್ತಿ ಬಿಸಾಡಿದ್ದಾರೆ.

ಇನ್ನು, ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಮಾಹಿತಿ ನೀಡಿದ್ದು, ಪಾದರಾಯನಪುರದಲ್ಲಿ ಸೆಕೆಂಡರಿ ಸಂಪರ್ಕಿತರ ಪಟ್ಟಿ ಸಿದ್ಧವಾಗಿತ್ತು. ಒಟ್ಟಾರೆ 58 ಜನರರನ್ನು ಕ್ವಾರಂಟೈನ್ ಮಾಡಲು ಸ್ಥಳೀಯ ಹೊಟೇಲ್ ರೆಡಿ ಮಾಡಲಾಗಿತ್ತು. ಈ ಹಿನ್ನೆಲೆ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ತೆರಳಿದ್ದರು, 15 ಜನ ತಾವಾಗಿಯೇ ಕ್ವಾರಂಟೈನ್ ಇರುವುದಾಗಿ ಸಿಬ್ನಂದಿ ಜತೆಗೆ ಬಂದಿದ್ದಾರೆ. ಉಳಿದವರು ಸ್ಥಳೀಯ ಶಾಸಕರು ಬಂದ ನಂತ್ರ ಅವರೊಂದಿಗೆ ಚರ್ಚಿಸಿ ಕ್ವಾರಂಟೈನ್ ತೆರಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.


Spread the love