ಬೆಂಗಳೂರು: ಬೆಂಗಳೂರಿನ ಜೆ.ಪಿ.ನಗರದದುಗಾಪರಮೇಶ್ವರಿ ಮೈದಾನದಲ್ಲಿ ನಡೆದ 12 ಗಂಟೆಗಳ ನಿರಂತರ ನಾಟ್ಯೋತ್ಸವ ನಗರದಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದನ್ನು ಸೃಷ್ಟಿಸಿತು.
ನಗರದ ನಾಟ್ಯಾಲಯ ಸಂಸ್ಥೆಯಮುಖ್ಯಸ್ಥರಾದ ಬಿ.ಕೆ.ದಿನಕರ್ ಹಾಗೂ ಎನ್.ಸವಿತಾಅವರು ವಾರಾಂತ್ಯಕ್ಕೆ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮಇದಾಗಿತ್ತು. “ನಾನ್‍ಸ್ಟಾಪ್ ನಾಟ್ಯೋತ್ಸವ” ಎಂದೇಇದಕ್ಕೆ ಹೆಸರುಇಡಲಾಗಿತ್ತು. ಹೆಸರಿಗೆತಕ್ಕಂತೆಯೇ ಬೆಳಿಗ್ಗೆ 10 ಗಂಟೆಯಿಂದರಾತ್ರಿ 10 ಗಂಟೆಯವರೆಗೆ ಸುಮಾರುಒಂದು ಸಾವಿರಕಲಾವಿದರು ಪ್ರೇಕ್ಷಕರನ್ನು ನಿರಂತರರಂಜಿಸುವಲ್ಲಿ ಸಫಲರಾದರು.
ಭರತನಾಟ್ಯ, ಕಥಕ್, ಮೋಹಿನಿ ಅಟ್ಟಂ, ಗಿಟಾರ್, ಚಲನಚಿತ್ರ ಹಾಗೂ ಪಾಶ್ಚಾತ್ಯ ನೃತ್ಯ ವೈಭವ, ಶಾಸ್ತ್ರೀಯ ಸಂಗೀತ, ಯೋಗ, ಕರಾಟೆ ವೈವಿಧ್ಯಗಳೆಲ್ಲ ತೆರೆತೆರೆಯಾಗಿ ಮೂಡಿ ಬಂದವು. ಕಲಾವಿದರ ಪ್ರಸ್ತುತಿಯೂಒಂದಕ್ಕಿಂತಒಂದು ಮಿಗಿಲು ಎಂಬಂತ್ತಿತ್ತು.
ಸಿನಿಮಾ ಹಾಡಿಗೆ ಮತ್ತು ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರೇಕ್ಷಕರು, ಶಾಸ್ತ್ರೀಯ ಗಾನ, ನೃತ್ಯಗಳಿಗೂ ತಲೆದೂಗಿದರು. 12 ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟದ ಕೆಲಸ.
ಆದರೆಇಲ್ಲಿ ವೇದಿಕೆಯಿಂದ ಪ್ರಸ್ತುತಗೊಂಡ ಕಾರ್ಯಕ್ರಮಗಳು ಪರಸ್ಪರ ಸ್ಪರ್ಧೆಗಿಳಿದಂತೆ ಅತ್ಯುತ್ತಮವಾಗಿದ್ದವು. ಹೀಗಾಗಿ ಜೆ.ಪಿ. ನಗರ ಮಾತ್ರವಲ್ಲ, ಸುತ್ತಮುತ್ತಲಿನ ಹಲವು ಭಾಗಗಳಿಂದ ಬಂದ ಕಲಾರಸಿಕರಿಗೆ ಉಚಿತವಾಗಿ ದಿನವಿಡೀ ಮನರಂಜನೆಯ ರಸದೌತಣ ಉಂಡಂತಾಯಿತು.