Home Mangalorean News Kannada News ಬೆಂಗಳೂರು: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಮೂವರು ಕಾರ್ಮಿಕರು ಸಜೀವದಹನ

ಬೆಂಗಳೂರು: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಮೂವರು ಕಾರ್ಮಿಕರು ಸಜೀವದಹನ

Spread the love

ಬೆಂಗಳೂರು: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಮೂವರು ಕಾರ್ಮಿಕರು ಸಜೀವದಹನ

ರಾಮನಗರ: ಪರ್ಫ್ಯೂಮ್ ಫ್ಯಾಕ್ಟರಿ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ದುರಂತ ಸಂಭವಿಸಿದೆ.

ಬೆಂಕಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಜೀವದಹನವಾಗಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಪರ್ಫ್ಯೂಮ್ ಕೆಮಿಕಲ್‌ ಸ್ಫೋಟಗೊಂಡ ಪರಿಣಾಮ ಆಕಸ್ಮಿಕ ಬೆಂಕಿಯಿಂದ ಪರ್ಫ್ಯೂಮ್ ಫ್ಯಾಕ್ಟರಿ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಅಲ್ಲಾಭಕ್ಷ, ಅಫ್ರೋಜ್, ರಿಯಾಜ್, ಸಾಧಿಕ್, ಇಮ್ರಾನ್​ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೂವರ ಮೃತದೇಹಗಳು ಆರ್​.ಆರ್​.ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


Spread the love

Exit mobile version