Home Mangalorean News Kannada News ಬೆಂಗಳೂರು –ಮಣಿಪಾಲ ಕೆ.ಎಸ್.ಆರ್.ಟಿ.ಸಿ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸ್ಲ್ ವೋಲ್ವೋ ಬಸ್ ಪ್ರಾರಂಭ

ಬೆಂಗಳೂರು –ಮಣಿಪಾಲ ಕೆ.ಎಸ್.ಆರ್.ಟಿ.ಸಿ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸ್ಲ್ ವೋಲ್ವೋ ಬಸ್ ಪ್ರಾರಂಭ

Spread the love

ಬೆಂಗಳೂರು –ಮಣಿಪಾಲ ಕೆ.ಎಸ್.ಆರ್.ಟಿ.ಸಿ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸ್ಲ್ ವೋಲ್ವೋ ಬಸ್ ಪ್ರಾರಂಭ

ಮಂಗಳೂರು : ಕೆಎಸ್ಆರ್ಟಿಸಿ ನಿಗಮವು ಬೆಂಗಳೂರಿನಿಂದ ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ಹಾಗೂ ಮಣಿಪಾಲದಿಂದ ಅದೇ ಮಾರ್ಗವಾಗಿ ಬೆಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಕ್ಲಬ್ ಕ್ಲಾಸ್ ಮಲ್ಟಿ ಆಕ್ಸ್ಲ್ ವೋಲ್ವೋ ಬಸ್ ಸಾರಿಗೆಯನ್ನು ಮಾರ್ಚ್ 6 ರಿಂದ ಬೆಂಗಳೂರಿನಿಂದ ಪ್ರಾರಂಭಿಸಲು ಯೋಜಿಸಲಾಗಿರುತ್ತದೆ.

ಸದರಿ ಬಸ್ ಬೆಂಗಳೂರು ಬಸ್ಸು ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟು ಮಂಗಳೂರು ಬೆಳಗ್ಗೆ 4.15 ಗಂಟೆ, ಉಡುಪಿ 5.15 ಗಂಟೆ ಮಾರ್ಗವಾಗಿ ಮಣಿಪಾಲಕ್ಕೆ ಬೆಳಿಗ್ಗೆ 5. 30 ಗಂಟೆಗೆ ತಲುಪುವುದು ಹಾಗೂ ಮರು ಪ್ರಯಾಣದಲ್ಲಿ ಮಣಿಪಾಲದಿಂದ ಮಧ್ಯಾಹ್ನ 3.30 ಗಂಟೆಗೆ ಹೊರಟು ಮಂಗಳೂರಿಗೆ ಸಂಜೆ 5 ಗಂಟೆಗೆ ಬಂದು ಬೆಂಗಳೂರಿಗೆ ರಾತ್ರಿ 1 ಗಂಟೆಗೆ ತಲುಪುವುದು.

ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love

Exit mobile version