Home Mangalorean News Kannada News ಬೆಂಗಳೂರು : ಮನೆಗಳ್ಳನ ಬಂಧನ, 54 ಲಕ್ಷ ಮೌಲ್ಯದ ಚಿನ್ನಾಭರಣಗಳು ಬೆಳ್ಳಿಯ ಆಭರಣಗಳ...

ಬೆಂಗಳೂರು : ಮನೆಗಳ್ಳನ ಬಂಧನ, 54 ಲಕ್ಷ ಮೌಲ್ಯದ ಚಿನ್ನಾಭರಣಗಳು ಬೆಳ್ಳಿಯ ಆಭರಣಗಳ ವಶ

Spread the love

ಬೆಂಗಳೂರು : ಮನೆಗಳ್ಳನ ಬಂಧನ, 54 ಲಕ್ಷ ಮೌಲ್ಯದ ಚಿನ್ನಾಭರಣಗಳು ಬೆಳ್ಳಿಯ ಆಭರಣಗಳ ವಶ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ಉಪವಿಭಾಗ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಮನೆಗಳ್ಳನನ್ನು ಬಂಧಿಸಿ ಸುಮಾರು 54 ಲಕ್ಷ ಮೌಲ್ಯದ 01 ಕೆಜಿ 127 ಗ್ರಾಂ ತೂಕದ ಚಿನ್ನಾಭರಣ ಮತ್ತು 400 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಸುಮಾರು 10 ತಿಂಗಳ ಹಿಂದಿನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಬೆಂಗಳೂರು ದೊಡ್ಡಬಿದರಕಲ್ಲು ನಿವಾಸಿ ಮಂಜು ಕೆ.ಹೆಚ್ @ ಮಂಜುನಾಥ ಬಿನ್ ಹನುಮಂತನಾಯ್ಕ, ಎಂದು ಗುರುತಿಸಲಾಗಿದೆ.

ಬೆಂಗಳೂರು ಜಿಲ್ಲೆ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಚಿಕ್ಕಬಿದರಕಲ್ಲು ಗ್ರಾಮದ ಗೋದ್ರೇಜ್ಗೋಲ್ಡ್ ಕೌಂಟಿಯ ನಂ 65 ವಿಲ್ಲಾದಲ್ಲಿ ವಾಸವಿರುವ ಯುವ ಉದ್ಯಮಿಯಾದ ಶ್ರೀ,ಚೇತನ್ರವರು ದಿನಾಂಕ:29/09/2019 ರಂದು ಕುಟುಂಬ ಸಮೇತ ಪ್ರವಾಸಕ್ಕೆಂದು ಸಿಂಗಾಪುರಕ್ಕೆ ಹೋಗಿ ಪ್ರವಾಸ ಮುಗಿಸಿಕೊಂಡುವಾಪಸ್ಸು ದಿನಾಂಕ: 05/10/2019 ರಂದು ಮನೆಗೆ ಬಂದಾಗ ಮನೆಯಲ್ಲಿ ಚಿನ್ನಾಭರಣಗಳಿದ್ದ ಲಾಕರ್ ಮತ್ತುನಗದು ಹಣ ಕಳ್ಳತನವಾಗಿರುವುದನ್ನು ನೋಡಿಕೊಂಡು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿತಮ್ಮ ಮನೆಯಲ್ಲಿ ಚಿನ್ನಾಭರಣಗಳು ಮತ್ತು ನಗದು ಕಳ್ಳತನವಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಠಾಣಾಮೊ.ನಂ:487/2019 ಕಲಂ 454, 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ. ಈ ಬಗ್ಗೆಸ್ಥಳ ಪರಿಶೀಲನೆಗಾಗಿ ಬಂದ ಹಿರಿಯ ಅಧಿಕಾರಿಗಳು ಘೋರ ಕೃತ್ಯವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ಇನ್ಸ್ಪೆಕ್ಟರ್ ರವರಾದ ಕೆ.ಪಿ.ಸತ್ಯನಾರಾಯಣ್ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ನಿಗಧಿತಕಾಲಾವಧಿಯಲ್ಲಿ ಪ್ರಕರಣದ ಪತ್ತೆ ಮಾಡುವಂತೆ ಆದೇಶಿಸಿರುತ್ತಾರೆ.

ಅದರಂತೆ ಕಾರ್ಯ ಪ್ರವೃತ್ತರಾದ ತಂಡವು ಬೆರಳಚ್ಚು ತಜ್ಞರು, ಶ್ವಾನದಳ, ತಾಂತ್ರಿಕ ದಳದವರನ್ನುಕರೆಯಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿ ಉಪಯುಕ್ತ ಮಾಹಿತಿ ಸಿಕ್ಕಿರುವುದಿಲ್ಲ. ನಂತರ ಗೋದ್ರೇಜ್ ಗೋಲ್ಡ್ಕೌಂಟಿ ವಿಲ್ಲಾದಲ್ಲಿ ಕೆಲಸ ಮಾಡುವ ಸೆಕ್ಯೂರಿಟಿಗಳು, ಗಾರ್ಡನರ್ಗಳು, ಹೌಸ್ಕೀಪಿಂಗ್ ಕೆಲಸದವರು,ಎಲೆಕ್ಟ್ರೀಷಿಯನ್ಗಳು, ಗಾರ್ಡನರ್ಗಳು, ಡ್ರೈವರ್ಗಳು, ಹಾಲು ಮತ್ತು ಪೇಪರ್ ಹಾಕುವವರು ಹಾಗೂ ಅವರಸಂಬಂಧಿಕರು ಸೇರಿದಂತೆ 150 ಕ್ಕೂ ಹೆಚ್ಚು ಜನರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ್ದುಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಗದೆ ಇರುವಾಗ ಠಾಣಾ ಸರಹದ್ದಿನ ಮತ್ತು ಪರಸ್ಥಳೀಯಎಂಒಬಿಗಳನ್ನು ವಿಚಾರಣೆ ಮಾಡಿದ್ದು ಯಾವುದೇ ಮಾಹಿತಿ ಸಿಗದಾಗ್ಯೂ ಪ್ರಕರಣ ದಾಖಲಾಗಿ ಸುಮಾರು ಹತ್ತುತಿಂಗಳ ನಿರಂತರ ತನಿಖೆಯ ಪ್ರಯತ್ನವಾಗಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಿಕೂಲಂಕುಷವಾಗಿ ವಿಚಾರಣೆ ಮಾಡಿದಾಗವಿಲ್ಲಾ ನಂ:71 ರ ವಾಸಿ ರವಿಲಿಂಗನೂರಿ ಎಂಬುವರ ಬಳಿ ಡ್ರೈವರ್ಕೆಲಸ ಮಾಡಿಕೊಂಡಿದ್ದ ಆರೋಪಿ ಮಂಜು.ಕೆ.ಹೆಚ್ @ ಮಂಜುನಾಥ ಆಗಾಗ ತಮ್ಮ ಮಾಲೀಕರ ಜೊತೆ ವಿಲ್ಲಾನಂ:65ರ ವಾಸಿ ಚೇತನ್ರವರ ಮನೆಗೆ ಹೋಗುವಾಗ ಸಂಚು ರೂಪಿಸಿಕೊಂಡು ಪಿರ್ಯಾದಿಯವರುಹೊರದೇಶಕ್ಕೆ ಹೋದ ಬಗ್ಗೆ ಮಾಹಿತಿ ಖಚಿತಪಡಿಸಿಕೊಂಡು ರಾತ್ರಿ ವೇಳೆಯಲ್ಲಿ ಮನೆಯ ಸ್ಲೈಡಿಂಗ್ ಕಿಟಕಿಯನ್ನುತೆಗೆದು ಆರೋಪಿ ಮನೆಯ ಒಳಗೆ ಪ್ರವೇಶಿಸಿ ಕಬೋರ್ಡ್ ಬಾಗಿಲನ್ನು ತೆಗೆದು ಅದರಲ್ಲಿದ್ದ ಚಿನ್ನಾಭರಣಗಳುಮತ್ತು ನಗದು ಹಣವಿದ್ದ ಲಾಕರನ್ನು ಕಳ್ಳತನ ಮಾಡಿಕೊಂಡು ಹೋಗಿ ಚಿನ್ನಾಭರಣಗಳನ್ನು ಬೆಂಗಳೂರುನಗರದಲ್ಲಿರುವ ಅಕ್ಷಯ ಗೋಲ್ಡ್ ಕಂಪನಿ, ಅಟ್ಟಿಕಾ ಗೋಲ್ಡ್ ಕಂಪನಿ, ಮಣಪುರಂ ಪೈನಾನ್ಸ್ ಲಿಮಿಟೆಡ್ಹಾಗೂ ಇತರೆ ಕಡೆಗಳಲ್ಲಿ ಮಾರಾಟ/ಅಡಮಾನವಿಟ್ಟಿರುವುದಾಗಿಯೂ ಇದರಿಂದ ಬಂದ ಹಣ ಹಾಗೂ ಕಳವುಮಾಡಿದ ಹಣವನ್ನು ತನ್ನ ಸ್ವಂತ ಗ್ರಾಮದಲ್ಲಿ ಮನೆಕಟ್ಟಿಸಿಕೊಳ್ಳಲು ಹಾಗೂ ತನ್ನ ಮೋಜು ಮಸ್ತಿಗೆ ಬಳಕೆಮಾಡಿಕೊಂಡಿರುವುದಾಗಿ ನೀಡಿದ ಮಾಹಿತಿಯಂತೆ ಆರೋಪಿಯೊಂದಿಗೆ ಹೋಗಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸದರಿ ಪ್ರಕರಣವು ಪ್ರತಿಷ್ಠಿತ ಗೋದ್ರೇಜ್ ವಿಲ್ಲಾ ಕಮ್ಯೂನಿಟಿ ಲೇಔಟ್ನಲ್ಲಿ ಜರುಗಿದ್ದು, ಸದರಿ ವಿಲ್ಲಾಗಳಸುತ್ತಲೂ ಕಾಂಪೌಂಡ್ ಇದ್ದು, ಸೆಕ್ಯೂರಿಟಿಗಳ ಬಿಗಿ ಭದ್ರತೆ ಇದ್ದು, ವಿಲ್ಲಾಗಳಿಗೆ ಕೇವಲ ವಿಲ್ಲಾಗಳ ಕುಟುಂಬವರ್ಗಹಾಗೂ ಮನೆ ಕೆಲಸ ಮಾಡುವ ನೌಕರರು ಮಾತ್ರ ಹೋಗಿ ಬರಲು ಅವಕಾಶವಿದ್ದು ಪಿರ್ಯಾದುದಾರರ ಮನೆಯಲ್ಲಿನಆಭರಣಗಳನ್ನು ಇಟ್ಟಿದ್ದಕೋಣೆಯಲ್ಲಿ ಸ್ನಾನಗೃಹದ ಪೈಪ್ ಸೋರಿಕೆಯಾಗಿದ್ದು ಇದನ್ನು ಸರಿಪಡಿಸಲು ಸುಮಾರು 50ಜನರು ಗೋದ್ರೇಜ್ ಸಂಸ್ಥೆಯ ಉತ್ತರ ಭಾರತೀಯ ನೌಕರರು ಒಂದು ತಿಂಗಳುಗಳ ಕಾಲ ಓಡಾಡಿಕೊಂಡಿದ್ದು ಈಸಂಧರ್ಭವನ್ನು ಬಳಸಿಕೊಂಡ ಆರೋಪಿ ತಾನು ಕಳ್ಳತನ ಮಾಡಿದರೆ ಮನೆ ಮಾಲಿಕರಿಗೆ ಮತ್ತು ಪೊಲೀಸರಿಗೆ ತನ್ನಮೇಲೆ ಸಂಶಯ ಬರುವುದಿಲ್ಲವೆಂದು ನಂಬಿ, ವಿದ್ಯುತ್ ಪೂರೈಕೆ ಕಡಿತಗೊಂಡ ಸಮಯದಲ್ಲಿ ಸಿ.ಸಿ ಕ್ಯಾಮೆರಾಗಳುಸ್ಥಗಿತಗೊಂಡಿದ್ದನ್ನು ಗಮನಿಸಿಕೊಂಡು ಹೊಂಚುಹಾಕಿ ಕೃತ್ಯ ಜರುಗಿಸಿ ಬೆರಳುಮುದ್ರೆಯಂತಹ ಯಾವುದೇ ಕುರುಹುಸಿಗದಂತೆ ಕೃತ್ಯವನ್ನು ಮಾಡಿದ್ದರೂ ಸಹ ಸದರಿ ಕೃತ್ಯವನ್ನು ತನಿಖಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರುಅತ್ಯುನ್ನತ ತನಿಖಾ ಕೌಶಲ್ಯತೆಗಳನ್ನು ಬಳಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. -3-

ಸದರಿ ಕಾರ್ಯಾಚರಣೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದಶ್ರೀ,ರವಿ.ಡಿ.ಚನ್ನಣ್ಣನವರ್. ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ  ಲಕ್ಷ್ಮಿಗಣೇಶ್.ಕೆ.ಕೆ.ಎಸ್.ಪಿ.ಎಸ್ ಹಾಗೂ ನೆಲಮಂಗಲ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ  ಬಿ.ಎಸ್.ಮೋಹನ್ಕುಮಾರ್ ಕೆ.ಎಸ್.ಪಿ.ಎಸ್ರವರ ಮಾರ್ಗದರ್ಶನದಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ಇನ್ಸ್ಪೆಕ್ಟರ್  ಕೆ.ಪಿ.ಸತ್ಯನಾರಾಯಣ್, ಪಿಎಸ್ಐ  ಎಂ.ಎನ್.ಮುರುಳಿ, ಮತ್ತು ಸಿಬ್ಬಂದಿಯವರಾದನಿಂಗರಾಜೇಗೌಡ.ಪಿ. ಎಎಸ್ಐ, ಪೊಲೀಸ್ ಹೆಡ್ಕಾನ್ಸ್ಟೇಬಲ್ಗಳಾದ ನಾರಾಯಣಸ್ವಾಮಿ, ಮಲ್ಲಗೊಂಡಿ,ಗಂಗಾಧರ್, ಉಮೇಶ್, ಪೊಲೀಸ್ ಕಾನ್ಸ್ಟೇಬಲ್ಗಳಾದ ಲಕ್ಷ್ಮಣ್.ಹೆಚ್. ಪರ್ವೀಜ್ ಪಾಷಾ,ಇಮ್ರಾನ್ಖಾನ್.ಎಸ್, ರವಿಕುಮಾರ್.ಹೆಚ್. ಶಿವಪ್ಪಎಸ್ಗೌಡರ್ ಹಾಗೂ ಚಾಲಕರಾದ ಶಿವಕುಮಾರ್. ಸಂಜಯ್.ರವರನ್ನು ಒಳಗೊಂಡ ತಂಡ ಆರೋಪಿಯನ್ನು ದಸ್ತಗಿರಿ ಮಾಡಿ ಕಳವಾದ ಎಲ್ಲಾ ಚಿನ್ನಾಭರಣಗಳನ್ನುವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಕಾರ್ಯಾಚರಣೆಯನ್ನು ಮಾನ್ಯ ಹಿರಿಯ ಪೊಲೀಸ್ಅಧಿಕಾರಿಗಳು ಶ್ಲಾಘಿಸಿರುತ್ತಾರೆ.


Spread the love

Exit mobile version