ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾವಣೆಗೆ ನೈರುತ್ಯ ರೈಲ್ವೆ ವಿರೋಧ

Spread the love

ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾವಣೆಗೆ ನೈರುತ್ಯ ರೈಲ್ವೆ ವಿರೋಧ

ಬೆಂಗಳೂರು- ಮೈಸೂರು- ಮಂಗಳೂರು ಸೆಂಟ್ರಲ್ ಮೂಲಕ ಮುರುಡೇಶ್ವರಕ್ಕೆ ಸಂಚರಿಸುತ್ತಿರುವ ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾಯಿಸುವಂತೆ ರೈಲ್ವೆ ಮಂಡಳಿಯು ನೈರುತ್ಯ ರೈಲ್ವೆಗೆ ಸೂಚಿಸಿದ್ದ ಪ್ರಸ್ತಾವನೆಗೆ ನೈರುತ್ಯ ರೈಲ್ವೆ ಅಸಮ್ಮತಿ ಸೂಚಿಸಿದೆ. ಈ ರೈಲು ಬೆಂಗಳೂರಿನಿಂದ ರಾತ್ರಿ 7.45ಕ್ಕೆ ನಿರ್ಗಮಿಸಿ ಮರುದಿನ ಮಧ್ಯಾಹ್ನ 12.50ಕ್ಕೆ ಮುರುಡೇಶ್ವರ ಬಂದು, ಮಧ್ಯಾಹ್ನ 2.10ಕ್ಕೆ ಮುರುಡೇಶ್ವರದಿಂದ ನಿರ್ಗಮಿಸಿ ಮಾರನೇ ದಿನ ಬೆಳಿಗ್ಗೆ 7.15ಕ್ಕೆ ಬೆಂಗಳೂರು ತಲುಪುತ್ತದೆ. ಈ ರೈಲು ಮುರುಡೇಶ್ವರ ತಲುಪಿ ಪುನಃ ಬೆಂಗಳೂರಿನ ಕಡೆ ಮರು ಪ್ರಯಾಣ ಆರಂಭಿಸುವ ನಡುವೆ 1 ಗಂಟೆ 20 ನಿಮಿಷಗಳಷ್ಟು ಹೊತ್ತು ಮಾತ್ರ ಮುರುಡೇಶ್ವರದಲ್ಲಿ ತಂಗುತ್ತಿದೆ.

ಪ್ರಯಾಣಿಕರ ರೈಲು ತನ್ನ ಗಮ್ಯಸ್ಥಾನ ತಲುಪಿದ ಬಳಿಕ, ನೀರು ತುಂಬಿಸಲು, ಮರು ಇಂಧನ ತುಂಬಲು ಹಾಗೂ ಶುಚಿಗೊಳಿಸುವ ವ್ಯವಸ್ಥೆಗೆ ಹೆಚ್ಚಿನ ಸಮಯದ ಅಗತ್ಯಕ್ಕೆ ಒತ್ತು ನೀಡಿ, ವೇಳಾಪಟ್ಟಿ ಬದಲಾವಣೆಗೆ ರೈಲ್ವೆ ಮಂಡಳಿ ಸೂಚಿಸಿತ್ತು. ಈ ಸೂಚನೆ ಮೇರೆಗೆ, ಆರಂಭದಲ್ಲಿ ಈ ರೈಲಿನ ಈಗಿನ ಮಂಗಳೂರು ಸೆಂಟ್ರಲ್ವರೆಗಿನ ಸಂಚಾರ ಮೊಟಕುಗೊಳಸಿ, ಮಂಗಳೂರು ಜಂಕ್ಷನ್‌ನಿಂದಲೇ ತೋಕೂರು ಮೂಲಕ ಮುರುಡೇಶ್ವರಕ್ಕೆ ಸಾಗಿದರೆ, ಸಂಚಾರ ಅವಧಿಯಲ್ಲಿ ಒಂದು ಗಂಟೆ ಕಡಿಮೆ ಆಗಬಹುದು ಎಂಬ ಲೆಕ್ಕಾಚಾರ ಇತ್ತು. ಆದರೇ, ಹೀಗೆ ಮಾಡಿದರೆ ಕೇವಲ 30 ನಿಮಿಷ ಸಮಯ ಉಳಿತಾಯ ಮಾಡಬಹುದು ಎಂಬುದು ಪರಿಶೀಲನೆ ಮಾಡಿದ ನಂತರ ರೈಲ್ವೆ ಅಧಿಕಾರಿಗಳಿಗೆ ಮನದಟ್ಟು ಆಯಿತು. ಹೀಗಾಗಿ ಈ ಪ್ರಸ್ತಾವನೆ ಕಾರ್ಯಗತ ಮಾಡದೇ ಹೊಸ ವೇಳಾಪಟ್ಟಿ ಅಳವಡಿಸಲು ಚಿಂತನೆ ನೆಡಲಾಯಿತು.

ಪ್ರಸ್ತಾವಿತ ವೇಳಾಪಟ್ಟಿ
ಬೆಂಗಳೂರಿನಿಂದ ರಾತ್ರಿ 7.45ಕ್ಕೆ ಹೊರಡುವ ಈ ರೈಲು ಬೆಳಗ್ಗೆ 10.45ಕ್ಕೆ ಬೆಂಗಳೂರಿನಿಂದ ನಿರ್ಗಮಿಸಿ ರಾತ್ರಿ 12.10ಕ್ಕೆ ಪಡೀಲ್ ತಲುಪಿ ಅಲ್ಲಿಂದ ಮುಂದೆ ತೋಕೂರಿನಿಂದ ರಾತ್ರಿ 1.45ಕ್ಕೆ ನಿರ್ಗಮಿಸಿ ಮುಂಜಾನೆ 5.15ಕ್ಕೆ ಮುರುಡೇಶ್ವರ ತಲುಪಲಿದೆ. ಮರುಪ್ರಯಾಣದಲ್ಲಿ ಈ ರೈಲು ಮುರುಡೇಶ್ವರದಿಂದ ಬೆಳಗ್ಗೆ 10.30ಕ್ಕೆ ಹೊರಟು ಮಾರನೇ ದಿನ ಬೆಳಿಗ್ಗೆ 7.15ಕ್ಕೆ ಬೆಂಗಳೂರು ತಲುಪಲಿದೆ. ಈ ವೇಳಾಪಟ್ಟಿ ಪ್ರಕಾರ ಈಗ ರಾತ್ರಿ ರೈಲು ಆಗಿ ಸಂಚರಿಸುವ ಈ ರೈಲು ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಇದು ಹಗಲು ರೈಲು ಆಗಿ ಸಂಚಾರ ನಡೆಸಲಿದೆ, ಇದು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇದಕ್ಕೆ ನೈರುತ್ಯ ರೈಲ್ವೆ ಈ ಪ್ರಸ್ತಾವನೆಗೆ ತನ್ನ ಅಸಮ್ಮತಿ ವ್ಯಕ್ತಪಡಿಸಿ ರೈಲ್ವೆ ಮಂಡಳಿಗೆ 2024 ನ.28ರಂದು ಪತ್ರ ಬರೆಯಲಾಗಿದೆ. ಪ್ರಸ್ತುತ 21 ಬೋಗಿಗಳಿರುವ ಈ ರೈಲು ಸಂಪೂರ್ಣ ಜನ ಭರ್ತಿಯಾಗಿ ರಾತ್ರಿ ಸಂಚಾರ ನಡೆಸುತ್ತಿದ್ದು, ಈ ಜನಪ್ರಿಯ ರೈಲಿನ ಸಮಯ ಬದಲಾವಣೆ ಮಾಡಿದರೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ಬರಬಹುದು. ಹೀಗಾಗಿ ಸಮಯ ಬದಲಾವಣೆ ಅಪೇಕ್ಷೆಣೀಯವಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿ ಈಗಾಗಲೇ ಈ ಪ್ರಸ್ತಾವನೆ ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸಂಸದರಿಗೆ, ರೈಲ್ವೆ ಮಂತ್ರಿಗಳಿಗೆ ಪತ್ರ ಬರೆದು ಸದರಿ ಪ್ರಸ್ತಾವನೆ ಕಾರ್ಯಗತ ಮಾಡದಂತೆ ಮನವಿ ಮಾಡಿದೆ. ಮುರುಡೇಶ್ವರ ನಿಲ್ದಾಣಗಳಲ್ಲಿ ನೀರು ತುಂಬಿಸಲು, ಇಂಧನ ತುಂಬಿಸಲು ಹಾಗೂ ಶುಚಿಗೊಳಿಸಿಲು ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿ ಈ ರೈಲು 3 ಗಂಟೆ ತಂಗಲು ಅವಕಾಶ ಮಾಡಿದರೆ ಏನು ಪ್ರಯೋಜನ ಇಲ್ಲ ಎಂದು ನೈರುತ್ಯ ರೈಲ್ವೆ ತನ್ನ ಪತ್ರದಲ್ಲಿ ಸ್ಪಷ್ಟ ಪಡಿಸಿತ್ತು.


Spread the love
Subscribe
Notify of

0 Comments
Inline Feedbacks
View all comments