ಬೆಕ್ಕಿನ ಮರಿಗೆ ಆಹಾರ ನೀಡಿದ ಯಡಿಯೂರಪ್ಪ: ಪ್ರಾಣಿ, ಪಕ್ಷಿಗಳಿಗೆ ಉಣಿಸಲು ಮುಖ್ಯಮಂತ್ರಿ ಮನವಿ
ಬೆಂಗಳೂರು: ನಾಡಿನಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಸಂಕಲ್ಪತೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ಪ್ರಾಣಿ, ಪಕ್ಷಿಗಳ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಟ್ವೀಟ್ ಮಾಡಿ, ಬಿಸಿಲ ಬೇಗೆ ಮತ್ತು ಲಾಕ್ ಡೌನ್ ಪರಿಣಾಮಗಳಿಂದ ಬೆಕ್ಕುಗಳು, ನಾಯಿಗಳು ಹಾಗೂ ಪಕ್ಷಿಗಳು ನೀರು ಮತ್ತು ಆಹಾರ ಸಿಗದೆ ತತ್ತರಿಸುತ್ತಿವೆ. ನಗರಗಳಲ್ಲಿ ಇದರ ಪರಿಣಾಮ ಇನ್ನೂ ಗಂಭೀರವಾಗಿದೆ. ಹಾಗಾಗಿ, ನಾಯಿಗಳಿಗೆ ಮತ್ತು ಪಕ್ಷಿಗಳಿಗೆ ನೀರು, ಆಹಾರ ಸಿಗುವಂತೆ ನೋಡಿಕೊಳ್ಳಬೇಕೆಂದು ಸಮಸ್ತ ನಾಗರಿಕರಲ್ಲಿ ಮನವಿ ಮಾಡುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.
ಮಾತ್ರವಲ್ಲ ಸ್ವತಃ ಯಡಿಯೂರಪ್ಪ ಅವರೇ ಬೆಕ್ಕಿನ ಮರಿಯೊಂದಕ್ಕೆ ಆಹಾರ ಉಣಿಸುವ ಮೂಲಕ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ಬೆಕ್ಕಿನ ಮರಿಗೆ ಆಹಾರ ನೀಡುವ ಚಿತ್ರವನ್ನು ಅವರು ಟ್ವೀಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬಿಸಿಲ ಬೇಗೆ ಮತ್ತು ಲಾಕ್ ಡೌನ್ ಪರಿಣಾಮಗಳಿಂದ ಬೆಕ್ಕುಗಳು, ನಾಯಿಗಳು ಹಾಗೂ ಪಕ್ಷಿಗಳು ನೀರು ಮತ್ತು ಆಹಾರ ಸಿಗದೆ ತತ್ತರಿಸುತ್ತಿವೆ.
ನಗರಗಳಲ್ಲಿ ಇದರ ಪರಿಣಾಮ ಇನ್ನೂ ಗಂಭೀರವಾಗಿದೆ. ಹಾಗಾಗಿ, ನಾಯಿಗಳಿಗೆ ಮತ್ತು ಪಕ್ಷಿಗಳಿಗೆ ನೀರು, ಆಹಾರ ಸಿಗುವಂತೆ ನೋಡಿಕೊಳ್ಳಬೇಕೆಂದು ಸಮಸ್ತ ನಾಗರಿಕರಲ್ಲಿ ಮನವಿ ಮಾಡುತ್ತೇನೆ.#feedthehungers pic.twitter.com/k7r8NQQrPD
— B.S.Yediyurappa (Modi Ka Parivar) (@BSYBJP) April 10, 2020