Home Mangalorean News Kannada News ಬೆಚ್ಚಿ ಬಿದ್ದ ಕರ್ನಾಟಕ: ದಾಖಲೆ 388 ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆ!

ಬೆಚ್ಚಿ ಬಿದ್ದ ಕರ್ನಾಟಕ: ದಾಖಲೆ 388 ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆ!

Spread the love
RedditLinkedinYoutubeEmailFacebook MessengerTelegramWhatsapp

ಬೆಚ್ಚಿ ಬಿದ್ದ ಕರ್ನಾಟಕ: ದಾಖಲೆ 388 ಕೊರೋನಾ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆ!

ಬೆಂಗಳೂರು: ಕೊರೋನಾ ಮಹಾಮಾರಿಗೆ ಮಂಗಳವಾರ ಉಡುಪಿ ಮತ್ತು ಕಲಬುರಗಿ ತತ್ತರಿಸಿದ್ದು ಇಂದು ಒಂದೇ ದಿನ ಬರೋಬ್ಬರಿ 250 ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಇಂದು ದಾಖಲೆ 388 ಪ್ರಕರಣಗಳು ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು ಪತ್ತೆಯಾಗಿರುವ 388 ಪ್ರಕರಣಗಳ ಪೈಕಿ 363 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಿಂದಲೇ ಪತ್ತೆಯಾಗಿದೆ. ಉಡುಪಿಯಲ್ಲಿ 150 ಪ್ರಕರಣ ಮತ್ತು ಕಲಬುರಗಿಯಲ್ಲಿ 100 ಪತ್ತೆಯಾಗಿದ್ದು ಅಕ್ಷರಶಃ ತತ್ತರಿಸಿ ಹೋಗಿವೆ.

ಉಡುಪಿ 150, ಕಲಬುರಗಿ 100, ಬೆಳಗಾವಿ 51, ರಾಯಚೂರು 16, ಬೆಂಗಳೂರು ನಗರ 12, ಬೀದರ್ 10, ಬಾಗಲಕೋಟೆ ಹಾಸನ 9, ದಾವಣಗೆರೆ 7, ಯಾದಗಿರಿ 5, ಮಂಡ್ಯ, ವಿಜಯಪುರದಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ, ಧಾರವಾಡ, ಚಿಕ್ಕಮಗಳೂರಿನಲ್ಲಿ ತಲಾ 2, ಕೋಲಾರ, ಹಾವೇರಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ. 3,796 ಪ್ರಕರಣಗಳ ಪೈಕಿ 1403 ಮಂದಿ ಗುಣಮುಖರಾಗಿದ್ದಾರೆ. ಇನ್ನು 2339 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟಾರೆ 52 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version