Home Mangalorean News Kannada News ಬೆಳಪು : ಮನೆಗೆ ಆಕಸ್ಮಿಕ ಬೆಂಕಿ- ಅಪಾರ ನಷ್ಟ

ಬೆಳಪು : ಮನೆಗೆ ಆಕಸ್ಮಿಕ ಬೆಂಕಿ- ಅಪಾರ ನಷ್ಟ

Spread the love

ಬೆಳಪು : ಮನೆಗೆ ಆಕಸ್ಮಿಕ ಬೆಂಕಿ- ಅಪಾರ ನಷ್ಟ

ಕಾಪು : ಅಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಶಿರ್ವಾ ಠಾಣಾ ವ್ಯಾಪ್ತಿಯ ಬೆಳಪುವಿನಲ್ಲಿ ಸಂಭವಿಸಿದೆ.

ಬೆಳಪು ದ್ವರಕಲ ಗುತ್ತು ಸುಭಾಷ್ ಶೆಟ್ಟಿ ಎಂಬವರ ಮನೆಯೇ ಬೆಂಕಿಗಾಹುತಿಯಾಗಿದ್ದು,ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಹೊರಬರಲಾರಂಭಿಸಿದೆ. ತಕ್ಷಣ ಪಕ್ಕದ ಮೆನೆಯವರು ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳ ಚುರುಕು ಕಾರ್ಯಚರಣೆಯಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಇತ್ತೀಚೆಗಷ್ಟ ಮನೆ ನವೀಕರಣಗೊಳಿಸಿದ್ದು ಮನೆ ಮಂದಿ ಕಾಪುವಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.ಅಗ್ನಿ ಅವಘಡದಿಂದ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹಾಗು ಶಿರ್ವ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಸಹಕರಿಸಿದ್ದಾರೆ.


Spread the love

Exit mobile version