ಬೆಳ್ತಂಗಡಿ: ಆನೆ ದಂತ ಚೋರರ ಸೆರೆ; 51 ಕೆ.ಜಿ. ತೂಕದ 10 ದಂತ ವಶ

Spread the love

ಬೆಳ್ತಂಗಡಿ: ಆನೆ ದಂತ ಚೋರರ ಸೆರೆ; 51 ಕೆ.ಜಿ. ತೂಕದ 10 ದಂತ ವಶ

ಬೆಳ್ತಂಗಡಿ: ತಾಲೂಕಿನ ಸುರ್ಯ ರಸ್ತೆಯ ಮನೆಯೊಂದರಲ್ಲಿ ದಾಸ್ತಾನಿರಿಸಿದ್ದ ಆನೆ ದಂತವನ್ನು ಬುಧವಾರ ಮಂಗಳೂರು ಸಂಚಾರಿ ಅರಣ್ಯ ತಂಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 51ಕೆ.ಜಿ. ಆನೆ ದಂತ ವಶಕ್ಕೆ ಪಡೆದ ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಸುರ್ಯ ಸಮೀಪದ ಮನೆಯೊಂದಕ್ಕೆ ದಾಳಿ ನಡೆಸಿ 51 ಕೆ.ಜಿ.ಯ 10 ಆನೆ ದಂತ ವಶಕ್ಕೆ ಪಡೆದಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕಳೆದು ಮೂರು ತಿಂಗಳಿಂದ ಆನೆ ದಂತ ದಾಸ್ತಾನು ಇರಿಸಿದ್ದು ಮಾತ್ರವಲ್ಲದೆ ಮಾರಾಟ ಜಾಲದ ಕುರಿತು ಇಲಾಖೆಗೆ ಮಾಹಿತಿ ಲಭಿಸಿತ್ತು.

ಈ ಕುರಿತು ಪ್ರಕರಣ ಭೇದಿಸಿದ ತಂಡ ಸತತ ಕಾರ್ಯಾಚರಣೆ ಬಳಿಕ ಸುರ್ಯ ದೇವಸ್ಥಾನ ರಸ್ತೆಯ ಅಬ್ರಾಹಂ, ಅನ್ವರ್, ಸುರೇಶ್ ಬಾಬು ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಿದೆ.

ವಿಚಾರಣೆಯ ವೇಳೆ ಕೇರಳದಿಂದ ಆನೆ ದಂತ ತಂದಿರುವ ಕುರಿತಾಗಿ ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದ್ದು, ಇವರ ದಾಸ್ತಾನಿನಲ್ಲಿ 8ವರ್ಷಗಳ ಹಳೇಯ ದಂತವೂ ಸೇರಿದೆ ಎನ್ನಲಾಗಿದೆ.ಈ ನಾಲ್ವರು ಹಲವಾರು ವರ್ಷಗಳಿಂದ ಇದೇ ಕೃತ್ಯದಲ್ಲಿ ತೊಡಗಿದ್ದರು ಎನ್ನಲಾಗುತಿದೆ.

ಪ್ರಕರಣದ ಹಿಂದೆ ದೊಡ್ಡ ಜಾಲವೊಂದು ಇರುವ ಕುರಿತು ಇಲಾಖೆ ಅನುಮಾನ ವ್ಯಕ್ತಪಡಿಸಿದೆ.ಬೆಳ್ತಂಗಡಿ ಅರಣ್ಯ ಇಲಾಖೆಗೆ ಪ್ರಕರಣದ ಮುಂದಿನ ತನಿಖೆಗೆ ಹಸ್ತಾಂತರಿಸಲಾಗಿದೆ.ಆರೋಪಿಗಳನ್ನು ಬಂಧಿಸಿ ‌ವಿಚಾರಣೆ ನಡೆಸುತ್ತಿದ್ದಾರೆ.


Spread the love