Spread the love
ಬೆಳ್ತಂಗಡಿ: ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬಂದಿಗಳು ಮೃಗ ಬೇಟೆ ಮತ್ತು ಕಡವೆಯನ್ನು ಕೊಂದ ಆರೋಪದ ಮೇಲೆ ಒರ್ವನನ್ನು ಬಂಧಿಸಿದ ಘಟನೆ ಬೆಳ್ತಂಗಡಿ ಮಿತ್ತಬೈಲು ಬಳಿ ಶುಕ್ರವಾರ ನಡೆದಿದೆ
ಬಂಧಿತ ಆರೋಪಿಯನ್ನು ಜಗದೀಶ ಯಾನೆ ಸಹದೇವೆ ಎಂದು ಗುರುತಿಸಿದ್ದು, ಇತ ತನ್ನ ಇತರ ಮೂವರು ಸಹಚರರೊಂದಿಗೆ ಬೇಟೆಯಾಡಿ ವಾಪಾಸು ಬರುತ್ತಿದ್ದ ವೇಳೆಯಲ್ಲಿ ಬಂಧಿಸಿದ್ದು, ಇತರ ಮೂವರು ಸಹಚರರು ಕಾಡಿನಲ್ಲಿ ತಪ್ಪಿಸಿಕೊಂಡು ಒಡಿದ್ದಾರೆ.
ಬಲ್ಲ ಮೂಲಗಳಿಂದ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬಂದಿಗಳು, ಆರೋಪಿಗಳು ಬರುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿ ವಿಚಾರಣೆ ನೆಡಸಿದಾಗ ಬೇಟೆಯಾಡಿದ ಪ್ರಾಣಿ ಸಿಕ್ಕಿದ್ದು, ಜಗದೀಶನನ್ನು ಬಂಧಿಸಲಾಗಿದೆ. ಅಲ್ಲದೆ ಬಂಧಿತನಿಂದ ಬೇಟೆಗೆ ಉಪಯೋಗಿಸಿದ ಕಾರು ಹಾಗೂ ಪಿಸ್ತೂಲನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಬೇಟೆಯಾಡಿರುವ ಕಡವೆಯು ಸುಮಾರು 2 ವರ್ಷ ಪ್ರಾಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ.
Spread the love