ಬೆಳ್ತಂಗಡಿ: ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ ಯತ್ನ
ಬೆಳ್ತಂಗಡಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವಿನ ವಾಕ್ಸಮರ ಓರ್ವನನ್ನು ಚೂರಿದು ಕೊಲೆ ಯತ್ನದವರೆಗೆ ಮುಂದುವರಿದ ಘಟನೆ ಅಳದಂಗಡಿ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಡೆನ್ನಿಸ್ ಪಿಂಟೋ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ಶೀನ ಆರೋಪಿಯಾಗಿದ್ದಾನೆ.
ಅಳದಂಗಡಿ ಸಂತೆ ಮಾರುಕಟ್ಟೆಯ ಒಳಗೆ ಎ.26ರಂದು ರಾತ್ರಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ಶೀನ ಹಾಗೂ ಡೆನ್ನಿಸ್ ಪಿಂಟೋ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಡೆನ್ನಿಸ್ ರನ್ನು ನೆಲಕ್ಕೆ ದೂಡಿ ಹಾಕಿದ ಆರೋಪಿ ಶೀನ ಕುತ್ತಿಗೆಗೆ ಹಾಗೂ ಎಡಗೈಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.