ಬೆಳ್ತಂಗಡಿ ಬಳಿ ಗ್ಯಾಸ್ ಟ್ಯಾಂಕರಿನಿಂದ ಅನಿಲ ಸೋರಿಕೆ

Spread the love

ಬೆಳ್ತಂಗಡಿ ಬಳಿ ಗ್ಯಾಸ್ ಟ್ಯಾಂಕರಿನಿಂದ ಅನಿಲ ಸೋರಿಕೆ

ಮಂಗಳೂರು: ಗ್ಯಾಸ್ ಟ್ಯಾಂಕರ್ ವೊಂದರಿಂದ ಅನಿಲ ಸೋರಿಕೆಯಾದ ಘಟನೆ ಬೆಳ್ತಂಗಡಿಯ ಮಡಂತ್ಯಾರು ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ

ಉಜಿರೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆ ಉಂಟಾಗಿದ್ದು, ಮುಂಜಾಗೃತಾ ಕ್ರಮವಾಗಿ ಸ್ಥಳೀಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಅಲ್ಲದೆ ಮಂಗಳೂರು -ಚಾರ್ಮಾಡಿ ರಸ್ತೆ ಸಂಚಾ ಕೂಡ ಸ್ಥಗಿತಗೊಳಿಸಲಾಗಿದೆ.

ಘಟನೆಯಿಂದ ಸುಮಾರು ಒಂದು ಕಿಲೋ ಮೀಟರ್ ವಾಹನಗಳು ಸಾಲುಗಟ್ಟಿ ನಿಂತಿದ್ದು, ಅಗ್ನಿಶಾಮಕದಳದಿಂದ ಅನಿಲ ಸೋರಿಕೆಯ ತಡೆಗೆ ಯತ್ನ ನಡೆಯುತ್ತಿದೆ.


Spread the love