Spread the love
ಬೆಳ್ತಂಗಡಿ: ಮರದ ಗೆಲ್ಲು ಮುರಿದು ಬಿದ್ದು ಬೈಕ್ ಸವಾರ ಮೃತ್ಯು
ಬೆಳ್ತಂಗಡಿ: ಗೇರುಕಟ್ಟೆ ಜಾರಿಗೆಬೈಲು ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿಯ ವೇಳೆ ಸಂಭವಿಸಿದೆ.
ಮೃತ ಯುವಕ ಬೆಳಾಲು ಗ್ರಾಮದ ನಿವಾಸಿ ಪ್ರವೀಣ್ (25) ಎಂದು ಗುರುತಿಸಲಾಗಿದೆ.
ಮಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಲೋನ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಅವರು ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಜಾರಿಗೆ ಬೈಲು ಎಂಬಲ್ಲಿ ರಸ್ತೆಬದಿಯ ಮರದ ಗೆಲ್ಲು ಮುರಿದು ಅವರ ಬೈಕ್ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Spread the love