Home Mangalorean News Kannada News ಬೆಳ್ತಂಗಡಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಗೆ ದಾಳಿ – ಮೂವರ ಬಂಧನ

ಬೆಳ್ತಂಗಡಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಗೆ ದಾಳಿ – ಮೂವರ ಬಂಧನ

Spread the love

ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಗೆ ದಾಳಿ – ಮೂವರ ಬಂಧನ

ಮಂಗಳೂರು: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ಒರ್ವ ಮಹಿಳೆಯನ್ನು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕು ಉಜಿರೆಯಲ್ಲಿ ನಡೆದಿದೆ.

ಬಂಧಿತರನ್ನು ತುಮಕೂರು ಅರಳೇಪೇಟೆ ನಿವಾಸಿ ರೇಣುಕಾ ಪ್ರಸಾದ್ (29), ಕಾರ್ಕಳ ನಿಟ್ಟೆ ನಿವಾಸಿ ರಾಜೇಶ್ ಮೋಹನ್ ನಾಯರ್ (34), ಮತ್ತು ನಿತೀನ್ ಕುಮಾರ್ (28) ಎಂದು ಗುರುತಿಸಲಾಗಿದೆ.

ದಿನಾಂಕ: 06-03-2024 ರಂದು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಹಳೆ ಪೇಟೆ ಎಂಬಲ್ಲಿರುವ ಸುರೇಶ್ ಲಾಡ್ಜ್ , ಬೋರ್ಡಿಂಗ್ & ಲಾಡ್ಜ್ಂಗ್/ ಐಶ್ವರ್ಯಾ ಲಾಡ್ಜ್ , ಬೋರ್ಡಿಂಗ್ & ಲಾಡ್ಜ್ಂಗ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಬಿ.ಜಿ.ಸುಬ್ಬಾಪೂರ ಮಠ್,ಪೊಲೀಸ್ ನಿರೀಕ್ಷಕರು, ಬೆಳ್ತಂಗಡಿ ಪೊಲೀಸ್ ಠಾಣೆರವರು ಠಾಣಾ ಸಿಬಂದಿಗಳೊಂದಿಗೆ, ಸದ್ರಿ ಸ್ಥಳಕ್ಕೆ ದಾಳಿ ನಡೆಸಿ, ವೇಶ್ಯಾವಾಟಿಕೆ ನಿರತರಾಗಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿದ್ದ ಪ್ರಕರಣದ ನೊಂದ ಮಹಿಳೆಯನ್ನು ಮಹಿಳಾ ಸಿಬ್ಬಂದಿಗಳ ಭದ್ರಿಕೆಗೆ ಕೊಟ್ಟು, ಸದ್ರಿ ಆರೋಪಿಗಳ ವಿರುದ್ದ ಹಾಗೂ ದಾಳಿಯ ವೇಳೆ ಪರಾರಿಯಾದ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 30/24 ಕಲಂ:3,4,5,5 (d) ITP ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


Spread the love

Exit mobile version