ಬೆಳ್ಳಂಬೆಳಗ್ಗೆ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮತ ಯಾಚನೆ ಮಾಡಿದ ಪ್ರಮೋದ್ ಮಧ್ವರಾಜ್
ಉಡುಪಿ : ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಬುಧವಾರ ಬೆಳ್ಳಂಬೆಳಗ್ಗೆ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರು ಈ ಬಾರಿ ತನ್ನನ್ನು ಬೆಂಬಲಿಸುವಂತೆ ಕೋರಿ ಮತ ಯಾಚನೆ ಮಾಡಿದರು.
ಮುಂಜಾನೆ 6 ಗಂಟೆಗೆ ತನ್ನ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಬಂದರಿಗೆ ಆಗಮಿಸಿದ ಪ್ರಮೋದ್ ಬಿರುಸಿನ ಮತ ಪ್ರಚಾರ ನಡೆಸಿದರು. ಮೀನುಗಾರರು ಪ್ರಮೋದ್ ಅವರು ತಮ್ಮ ಸಮುದಾಯದ ನಾಯಕ ಎಂಬ ಅಭಿಮಾನದಿಂದ ಶುಭ ಹಾರೈಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು ಒರ್ವ ಶಾಸಕನಾಗಿದ್ದುಕೊಂಡು ಉಡುಪಿಯಲ್ಲಿ ಬಡವರ ಮತ್ತು ನನ್ನದೆ ಸ್ವಂತ ಮೀನುಗಾರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಿದ್ದೇನೆ. ಮೀನುಗಾರರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವವನ್ನು ನಾನು. ಈಗಿನ ಸಂಸದೆ ಶೋಭಾ ಕರಂದ್ಲಾಜೆಯವರನ್ನು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಣಬಹುದಾಗಿದೆ. ಆದರೆ ನಾನು ಸ್ವತಃ ಮೀನುಗಾರ ಕುಟುಂಬದಲ್ಲಿ ಜನಿಸಿದ್ದು ಮೀನುಗಾರ ಸಮುದಾಯದ ಸಮಸ್ಯೆಗಳನ್ನು ಸ್ವತಃ ಅನುಭವಿಸಿದ್ದೇನೆ.
ಇಲ್ಲಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರ ಸಾಧನೆ ಕಳೆದ ಐದು ವರ್ಷಗಳಲ್ಲಿ ಶೂನ್ಯ. ಅವರು ಮತ್ತೆ ಬಂದು ಮತ ಕೇಳುವ ಯಾವುದೇ ನೈತಿಕ ಹಕ್ಕನ್ನು ಹೊಂದಿಲ್ಲ. ಮೋದಿ ಹೆಸರಿನಲ್ಲಿ ಅವರು ಮತಗಳನ್ನು ಹುಡುಕುತ್ತಿದ್ದಾರೆ ಎಂಬುದು ಒಂದು ದುರಂತ. ಮೋದಿ ಹೆಸರಿನಲ್ಲಿ ಮತಗಳನ್ನು ಪಡೆಯಲು ಅವರು ವಾರಣಾಸಿಗೆ ಹೋಗಬೇಕು
ಕರ್ನಾಟಕದ ಸಮ್ಮಿಶ್ರ ಸರ್ಕಾರ ಮೀನುಗಾರರ ಮತ್ತು ಸಾಮಾನ್ಯ ಮನುಷ್ಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ನಮ್ಮ ಸಮುದಾಯದ ಮೀನುಗಾರರ ಸಮಸ್ಯೆಗಳ ಬಗ್ಗೆ ನನಗೆ ಪರಿಚಯವಿದ್ದು ಮತ್ತು ನಾನು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೆಲಸ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡರಾದ ಪ್ರಕ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಯು. ಆರ್. ಸಭಾತಿ, ಕಿರಣ್ ಕುಮಾರ್ ಉದ್ಯಾವರ, ನಾರಾಯಣ ಕುಂದರ್, ಸ್ಟೀವನ್ ಕುಲಾಸೊ, ಯತೀಶ್ ಕರ್ಕೆರಾ ಮತ್ತಿತರರು ಉಪಸ್ಥಿತರಿದ್ದರು.