ಬೈಂದೂರಿನಲ್ಲಿ ಜ. 8ಕ್ಕೆ ರೂ. 490.97 ಕೋಟಿ ಕಾಮಗಾರಿ ಮುಖ್ಯಮಂತ್ರಿ ಶಿಲಾನ್ಯಾಸ, ಉದ್ಘಾಟನೆ

Spread the love

ಬೈಂದೂರಿನಲ್ಲಿ ಜ. 8ಕ್ಕೆ ರೂ. 490.97 ಕೋಟಿ ಕಾಮಗಾರಿ ಮುಖ್ಯಮಂತ್ರಿ ಶಿಲಾನ್ಯಾಸ, ಉದ್ಘಾಟನೆ

ಬೈಂದೂರು: ಬೈಂದೂರಿನಲ್ಲಿ 8ಕ್ಕೆ ನಡೆಯುವ ಮಖ್ಯ ಮಂತ್ರಿಗಳ ಸಾಧನಾ ಸಮಾವೇಶದಲ್ಲಿ 490.97 ಕೋಟಿ ಮೊತ್ತದ 36 ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನಡೆಯಲಿದೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಶಾಸಕ ಕೆ. ಗೋಪಾಲ ಪೂಜಾರಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರಲ್ಲದೆ ಇವುಗಳಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 11, ಶಿಕ್ಷಣ ಇಲಾಖೆಯ 7, ಯೋಜನಾ ವಿಭಾಗದ 6, ಆರೋಗ್ಯ ಇಲಾಖೆಯ 3, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯ ತಲಾ 2, ಜಲಸಂಪನ್ಮೂಲ ಇಲಾಖೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ತಲಾ 1 ಕಾಮಗಾರಿಗಳು ಸೇರಿವೆ ಎಂದರು. ಎಲ್ಲ ಸೇರಿ ? 381.91 ಕೋಟಿ ಮೊತ್ತದ ವೆಚ್ಚದಲ್ಲಿ ಪೂರ್ಣಗೊಂಡ 21 ಕಾಮಗಾರಿಗಳ ಉದ್ಘಾಟನೆ, ರೂ. 109.06 ವೆಚ್ಚದಲ್ಲಿ ನಿರ್ಮಾಣವಾಗಲಿರುವ 15 ಕಾಮಗಾರಿಗಳ ಶಿಲಾನ್ಯಾಸ ನೆರವೇರಲಿವೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಮಾಜಿ ಸದಸ್ಯ ಎಸ್. ಮದನ್‍ಕುಮಾರ್ ಇದ್ದರು.

ಚಾಲನೆ ಪಡೆಯುವ ಅಭಿವೃದ್ಧಿ ಕಾಮಗಾರಿಗಳು : ಬೆಳ್ಳಾಲ ಗ್ರಾಮದ ಮೆರ್ಟು ಮಾಕಾಡಿ ಜೆಡ್ಡು ಸೇತುವೆ, ಮೊವಾಡಿ-ನಾಡ-ತ್ರಾಸಿ ಸೇತುವೆ, ಶಂಕರನಾರಾಯಣ ಗ್ರಾಮದ ಸೌಡ ಸೇತುವೆ, ಕಬ್ಬಿನಾಲೆ ಸೇತುವೆ, ಆಲೂರು, ರಾಗಿಹಕ್ಲು ಸೇತುವೆ; ವಂಡ್ಸೆ, ಕಟ್‍ಬೆಲ್ತೂರು, ಉಪ್ಪಿನಕುದ್ರು, ಹೊಸಾಡು, ಗಂಗೊಳ್ಳಿ, ಉಪ್ಪುಂದ, ಕೊಡೇರಿ, ಯಡ್ತರೆ, ಪಡುವರಿ, ಶಿರೂರು, ಜಡ್ಕಲ್, ಚಿತ್ತೂರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ; ಕೊಲ್ಲೂರು ಪ್ರವಾಸಿ ಮಂದಿರ ಅಭಿವೃದ್ಧಿ; ಬಿಜೂರು, ಉಳ್ಳೂರು ಗ್ರಾಮಗಳಲ್ಲಿ ಕಿಂಡಿ ಅಣೆಕಟ್ಟು; ಉದ್ಘಾಟನೆಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು : ಮಚ್ಚಟ್ಟು ಗ್ರಾಮದ ತೊಂಬಟ್ಟು ಬಾಗಿಮನೆ ಸೇತುವೆ, ಮರವಂತೆ ಮಾರಸ್ವಾಮಿ -ಹಡವು ಸೇತುವೆ, ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಸೇತುವೆ; ಹಟ್ಟಿಯಂಗಡಿ, ಕಮಲಶಿಲೆ, ಕಟ್‍ಬೆಲ್ತೂರು, ಹೊಸಾಡು, ತ್ರಾಸಿ ಗ್ರಾಮಗಳಲ್ಲಿ ಅಭಿವೃದ್ಧಿಗೊಂಡ ರಸ್ತೆಗಳು; ವಂಡ್ಸೆ ರೈತ ಸಂಪರ್ಕ ಕೇಂದ್ರ, ಗಂಗೊಳ್ಳಿ, ಕಿರಿಮಂಜೇಶ್ವರ, ಹಕ್ಲಾಡಿ ಆರೋಗ್ಯ ಕೇಂದ್ರ, ಸಿದ್ಧಾಪುರ, ಚಿತ್ತೂರು, ಆಲೂರು, ಕಿರಿಮಂಜೇಶ್ವರ, ಖಂಬದಕೋಣೆ, ನಾವುಂದ, ಶಿರೂರ ಸರ್ಕಾರಿ ಪ್ರೌಢಶಾಲೆ ಕಟ್ಟಡಗಳು, ಶಿರೂರು ಮೀನುಮಾರುಕಟ್ಟೆ, ಶಿರೂರು, ನಾವುಂದ, ಉಪ್ಪುಂದ, ಗಂಗೊಳ್ಳಿ ಕಡಲ್ಕೊರೆತ ತಡೆಗೋಡೆ, ಸಮಾಜ ಕಲ್ಯಾಣ ಸಚಿವರ ಮೂರೂರು ಗ್ರಾಮ ವಾಸ್ತವ್ಯ ಸಂದರ್ಭ ಘೋಷಿಸಿದ ಪ್ಯಾಕೇಜ್ ಕಾಮಗಾರಿಗಳಿಗೆ ವಿವಿಧ ಗ್ರಾಮಗಳ ಎಸ್‍ಟಿ, ಎಸ್‍ಸಿ ಕಾಲನಿ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆಯುವುದು. ರೂ 350 ಕೋಟಿ ವೆಚ್ಚದಲ್ಲಿ ವಾರಾಹಿ ಮೂಲ ನೀರಾವರಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಏತ ನೀರಾವರಿ ಕಾಮಗಾರಿಗೂ ಚಾಲನೆ ದೊರೆಯುವುದು.


Spread the love