ಬೈಂದೂರು: ಕಂಪ್ರೆಸರ್ ಯಂತ್ರದಿಂದ ವಿದ್ಯುತ್ ಹರಿದು ಪೇಂಟರ್ ಸಾವು

Spread the love

ಬೈಂದೂರು: ಕಂಪ್ರೆಸರ್ ಯಂತ್ರದಿಂದ ವಿದ್ಯುತ್ ಹರಿದು ಪೇಂಟರ್ ಸಾವು

ಕುಂದಾಪುರ: ಲಾರಿ ಚಾಸಿಸ್ ಪೇಂಟ್ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ಶುಕ್ರವಾರ ಸಂಭವಿಸಿದೆ.

ಮೃತ ಪೈಂಟರ್ ಗಂಗೊಳ್ಳಿ ನಿವಾಸಿ ಸಂದೀಪ್ ( 40 ) ಎಂದು ಗುರುತಿಸಲಾಗಿದೆ.

ಸಂದೀಪ್ ಶುಕ್ರವಾರ ನಾವುಂದ ಸಮೀಪದಲ್ಲಿ ಟ್ರಾನ್ಸ್ಪೋರ್ಟ್ ಸಂಸ್ಥೆಯೊಂದರ ಲಾರಿಗಳ ಪೇಂಟಿಂಗ್ ಮಾಡಲು ಆಗಮಿಸಿದ್ದರು. ಈ ವೇಳೆ ಪೇಂಟಿಂಗ್ ಕಂಪ್ರೆಸರ್ ಯಂತ್ರದಲ್ಲಿ ವಿದ್ಯುತ್ ಹರಿಯುತ್ತಿರುವುದು ಗಮನಕ್ಕೆ ಬಾರದೇ ಕಂಪ್ರೆಸರ್ ಯಂತ್ರ ಕೈಗಳಿಂದ ದೂಡುವ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

ತನ್ನದೇ ಪೇಂಟಿಂಗ್ ಕಂಪ್ರೆಸರ್ ಮೆಶಿನ್ ಹೊಂದಿರುವ ಸಂದೀಪ್ ಮಳೆಗಾಲದಲ್ಲಿ ಅಲ್ಲಲ್ಲಿ ಶೆಡ್ ಗಳಲ್ಲಿ ನಿಲ್ಲಿಸಿರುವ ಲಾರಿಗಳ ಚಾಸಿಸ್ ಪೇ‌ಂಟಿಂಗ್ ಮಾಡುವ‌ ಕೆಲಸ ಮಾಡುತ್ತಿದ್ದರು.

ಘಟನಾ ಸ್ಥಳಕ್ಕೆ ಬೈಂದೂರು ಸಿಪಿಐ ಸವಿತ್ರ ತೇಜ್, ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love