Home Mangalorean News Kannada News ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಪಾರಾದ ಸವಾರರು

ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಪಾರಾದ ಸವಾರರು

Spread the love

ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಪಾರಾದ ಸವಾರರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಂಬಳಬೆಟ್ಟು ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸವಾರರು ಸಾವಿನಿಂದ ಪಾರಾಗಿದ್ದಾರೆ.

ಬೈಕ್ ಸವಾರ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದಾಗ ವೇಗವಾಗಿ ಬಂದ ಕಾರಿನ ಚಾಲಕ ಬೈಕ್​​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಆದರೂ ಪ್ರಯೋಜನವಾಗದೆ, ನಿಯಂತ್ರಣ ಕಳೆದುಕೊಂಡು ಕಾರು ಬೈಕ್​ಗೆ ಡಿಕ್ಕಿಯಾಗಿದೆ. ಮತ್ತೊಂದು ಭಾಗದಲ್ಲಿ ನಿಲ್ಲಿಸಿದ್ದ ಮತ್ತೊಂದು ಬೈಕ್​​ಗೂ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ. ಬಳಿಕ ಮಣ್ಣಿನ‌ ದಿಬ್ಬದ ಮೇಲೆ ಮಗುಚಿ ಬಿದ್ದಿದೆ. ಘಟನೆಯಲ್ಲಿ

ಕಾರು ಚಾಲಕ ಸನತ್ ಪವಾಡ ಸದೃಶವಾಗಿ ಪಾರಾಗಿದ್ದು, ಬೈಕ್ ಸವಾರ ಯತೀಶ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.


Spread the love

Exit mobile version