Home Mangalorean News Kannada News ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

Spread the love

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

ಮಂಗಳೂರು / ಮುಂಬಯಿ : ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು – ಅಳಿಕೆ ಬಂಟ್ವಾಳ ತಾಲೂಕು ಇದರ ಸಂಪೂರ್ಣ ಜೀರ್ಣೋದ್ದಾರ ಕಾರ್ಯವು ಅಂತಿಮ ಹಂತದಲ್ಲಿದ್ದು ಮೇ. ೧೦ ರಂದು ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆಯು ನಡೆಯಿತು.

ಮುಂಬಯಿಯ ಉದ್ಯಮಿ, ಕೊಡುಗೈ ದಾನಿ, ತೀಯಾ ಸಮಾಜ ಮುಂಬಯಿಯ ಅಧ್ಯಕ್ಷ, ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿಯ ಆಡಳಿತ ಮೊಕ್ತೇಸರರಾದ ಕೃಷ್ಣ ಎನ್. ಉಚ್ಚಿಲ್ ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ದ ಜೀರ್ಣೋದ್ದಾರ ಕಾರ್ಯವು ನಡೆಯುತ್ತಿದ್ದು ಇವರ ನೇತೃತ್ವದಲ್ಲಿ ಬ್ರಹ್ಮಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ರರ ಮಾರ್ಗದರ್ಶನದಲ್ಲಿ ತೀಯಾ ಸಮುದಾಯದ ವಿವಿಧ ಕ್ಷೇತ್ರಗಳ ಆಚಾರಪಟ್ಟವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಮೇ. ೧೦ ರಂದು ಪೂರ್ವಾಹ್ನ ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆಯು ನಡೆಯಿತು.

ಕಾರ್ಯಕ್ರಮದ ಯಶಸ್ಸಿಗೆ ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ, ಬೊಳ್ನಾಡು ಶ್ರೀ ಭಗವತೀ ಯುವಜನ ಸಂಘ, ಬೊಳ್ನಾಡು ಶ್ರೀ ಭಗವತೀ ಮಹಿಳಾ ಸಂಘ, ಬೊಳ್ನಾಡು ಶ್ರೀ ಭಗವತೀ ಭಜನಾ ಸಂಘ, ತೀಯಾ ಲಿಟಲ್ ಟೈಗರ್ಸ್ ಬೊಳ್ನಾಡು ನ ಎಲ್ಲಾ ಸದಸ್ಯರು ಹಾಗೂ ಭಕ್ತರು ಸಹಕರಿಸಿದರು.


Spread the love

Exit mobile version