Home Mangalorean News Kannada News ಬೊಳ್ಳಾಯಿ ಜಮಾತ್ ಗೆ ಒಳಪಟ್ಟ 110 ಕುಟುಂಬಗಳಿಗೆ “ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ನಿಂದ...

ಬೊಳ್ಳಾಯಿ ಜಮಾತ್ ಗೆ ಒಳಪಟ್ಟ 110 ಕುಟುಂಬಗಳಿಗೆ “ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ನಿಂದ “ ರಂಜಾನ್ ಕಿಟ್ ವಿತರಣೆ 

Spread the love

ಬೊಳ್ಳಾಯಿ ಜಮಾತ್ ಗೆ ಒಳಪಟ್ಟ 110 ಕುಟುಂಬಗಳಿಗೆ “ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ನಿಂದ “ ರಂಜಾನ್ ಕಿಟ್ ವಿತರಣೆ 

ಬಂಟ್ವಾಳ: ಯಾವುದೆಲ್ಲ ಕುಟುಂಬಗಳು ಸಂಕಷ್ಟದಲ್ಲಿದೆಯೋ ಮತ್ತು ಯಾವ ಜಮಾತ್ ನಲ್ಲಿ ರಂಜಾನ್ ಕಿಟ್ ವಿತರಣೆ ಕಾರ್ಯ ನಡೆದಿಲ್ಲವೋ ಅದನ್ನು ಪರಿಗಣಿಸಿ, ಈಗಾಗಲೇ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಜಮಾತ್ ನ ಎಲ್ಲಾ ಅರ್ಹ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ನಡೆಸಿದ “ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್,” “ಜಿಲ್ಲಾ NGO ಕಾರ್ಡಿನೇಷನ್ ಕಮಿಟಿ” ಸಹಯೋಗದೊಂದಿಗೆ ಇಂದು ಬಂಟ್ವಾಳ ತಾಲೂಕಿನ ಬೊಳ್ಳಾಯಿ ಜಮಾತಿನ 110 ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ಕಾರ್ಯ ನಡೆಸಿತು.

ಬದ್ರಿಯಾ ಜುಮಾ ಮಸ್ಜಿದ್ ಬೊಳ್ಳಾಯಿ ಇದರ ಸಭಾಂಗಣದಲ್ಲಿ ನಡೆದ ಈ ಕಿಟ್ ವಿತರಣಾ ಕಾರ್ಯಕ್ರಮವನ್ನು ಮಸೀದಿ ಖತೀಬರಾದ ಅಬ್ಬಾಸ್ ಸಹದಿರವರು ದುಆ ನೆರವೇರಿಸಿ ಚಾಲನೆ ನೀಡಿದರು.

ಸಂಘಟನೆಯ ಕಾರ್ಯ ಪ್ರವೃತ್ತಿಯನ್ನು ವಿವರಿಸುತ್ತಾ ಮಾತನಾಡಿದ ಬಿ-ಹ್ಯೂಮನ್ ಗೌರವಾನ್ವಿತ ಸದಸ್ಯರಾದ ಯು.ಬಿ ಸಲೀಂ ಮಾತನಾಡಿ, ಬಿ-ಹ್ಯೂಮನ್ ಎಂದರೆ ಮಾನವನಾಗಿರಿ ಎಂಬ ಅರ್ಥವಾಗಿದೆ. ಒಬ್ಬ ಮನುಷ್ಯನು, ಸಂಕಷ್ಟದಲ್ಲಿರುವ ಇನ್ನೊಬ್ಬನಿಗೆ ಸ್ಪಂದಿಸಿದರೆ ಅಥವಾ ನೆರವಾದರೆ ಮಾತ್ರ ಒಬ್ಬ ಮಾನವನಾಗಿರಲು ಸಾಧ್ಯ. ಬಿ-ಹ್ಯೂಮನ್ ಸಂಘಟನೆಯು ಹಲವಾರು ಕುಟುಂಬಗಳಿಗೆ ನೇರವಾಗಿ ಇದೆ ದಾರಿಯನ್ನು ಅನುಸರಿಸುತ್ತಾ ಬಂದಿದೆ. ಆರ್ಥಿಕ ಸಂಕಷ್ಟದ ಕುಟುಂಬಗಳಿಗೆ ಆರ್ಥಿಕ ನೆರವು, ಶಿಕ್ಷಣಕ್ಕೆ ನೆರವು, ಬಡವರ ವಸತಿ ಸೌಕರ್ಯಕ್ಕೆ ನೆರವು, ಹಲವು ರೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಭೇಟಿ ನೀಡಿ ನೆರವುಗಳನ್ನು ನೀಡುತ್ತಾ , ಆಸೀಫ್ ಡೀಲ್ಸ್ ನೇತೃತ್ವದ ಟೀಮ್ ಬಿ-ಹ್ಯೂಮನ್ ಹಲವಾರು ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಹಲವು ವಿದೇಶಿ ಉದ್ಯಮಿಗಳು, ನಾಡಿನ ಉದ್ಯಮಿಗಳು ಮತ್ತು ಸ್ನೇಹಿತರು ಕಾಣದ ಕೈಗಳ ರೂಪದಲ್ಲಿ ಎಲ್ಲಾ ಕಾರ್ಯ ಯೋಜನೆಗೂ ಅಪಾರ ಧನ ಸಹಾಯದ ಮೂಲಕ ನೆರವಾಗುತ್ತಿದ್ದಾರೆ. ಅಲ್ಲಾಹನ ಅಪಾರ ಅನುಗ್ರಹದಿಂದ ಸಂಸ್ಥೆಗೆ ಇದೇ ದೊಡ್ಡ ಶಕ್ತಿಯಾಗಿದೆ ಎಂದು ಸಂಸ್ಥೆಯ ಬಗ್ಗೆ ವಿವರಿಸುತ್ತಾ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಟೀಮ್ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ಬೊಳ್ಳಾಯಿ ಜುಮಾ ಮಸ್ಜಿದ್ ಅಧ್ಯಕ್ಷ ಬಿ.ಎಸ್ ಮಹಮ್ಮದ್, ಶಕೂರ್ ಹಾಜಿ ಹಿದಾಯ, ಟೀಮ್ ಬಿ-ಹ್ಯೂಮನ್ ಗೌರವಾನ್ವಿತ ಸದಸ್ಯರಾದ ಅಶ್ರಫ್ ಐನಾ, ಅಲ್ತಾಫ್, ಇಮ್ತಿಯಾಜ್ ಪಾರ್ಲೆ, ಶಿಯಾ ಡೀಲ್ಸ್, ಅಹ್ನಫ್ ಡೀಲ್ಸ್, ಬೊಳ್ಳಾಯಿಯ ಹನೀಫ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಿ.ಜೆ ಅಬ್ದುಲ್ ಸಲೀಂ ಸ್ವಾಗತಿಸಿ, ಮುಸ್ತಫಾ ಬೊಳ್ಳಾಯಿ ವಂದಿಸಿದರು.


Spread the love

Exit mobile version