ಬ್ಯಾಂಕಿಗೆ ವಂಚನೆ ಆರೋಪ: ಟಿ. ಜೆ. ಅಬ್ರಾಹಾಂ ವಿರುದ್ದ ಸಚಿವ ಪ್ರಮೋದ್ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ, ಕ್ಷಮೆಗೆ ಆಗ್ರಹ

Spread the love

ಬ್ಯಾಂಕಿಗೆ ವಂಚನೆ ಆರೋಪ: ಟಿ. ಜೆ. ಅಬ್ರಾಹಾಂ ವಿರುದ್ದ ಸಚಿವ ಪ್ರಮೋದ್ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ, ಕ್ಷಮೆಗೆ ಆಗ್ರಹ

ಉಡುಪಿ: ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಾಂ ಅವರು ನನ್ನ ವಿರುದ್ದ ಬ್ಯಾಂಕ್ ವಂಚನೆ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದ್ದು ಮೂರು ದಿನಗಳ ಒಳಗೆ ಮಾಧ್ಯಮಗಳ ಮುಂದೆ ಬಹಿರಂಗ ಕ್ಷಮೆಯಾಚಿಸದಿದ್ದರೆ 10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲಿಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದ್ದಾರೆ.

ಅವರು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ ಉಡುಪಿಯ ವಕೀಲ ಶಾಂತರಾಮ್ ಶೆಟ್ಟಿ ಮೂಲಕ ನ್ಯಾಯಲಯದ ನೋಟಿಸ್ ಜಾರಿಗೆಗೊಳಿಸಿದ್ದು, ನಾನು ಕಷ್ಟಪಟ್ಟು ಗಳಿಸಿದ ವ್ಯಕ್ತಿತ್ವಕ್ಕೆ ಕುಂದು ತರಲು ಕೆಲವೊಂದು ವ್ಯಕ್ತಿಗಳು ಅಬ್ರಾಹಾಂ ಅವರ ಮೂಲಕ ಮಾಡುತ್ತಿದ್ದ ಅಬ್ರಾಹಾಂ ಅವರು ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದರು.

ಮಲ್ಪೆಯ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 1.1ಕೋಟಿ ಆಸ್ತಿ ಮೌಲ್ಯ ತೋರಿಸಿ 193 ಕೋಟಿ ಸಾಲ ಪಡೆದಿದ್ದಾರೆ ಎಂದು ಮಾಧ್ಯಮದ ಮುಂದೆ ಆರೋಪಿಸಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಮೇಲೆ ಸಚಿವರು 10 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ.

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಕೀಲ ಶಾಂತರಾಮ ಶೆಟ್ಟಿ ಅವರ ಮೂಲಕ ದೂರು ದಾಖಲಿಸಿದ್ದೇನೆ. ಮೂರು ದಿನದೊಳಗೆ ಕ್ಷಮೆ ಕೇಳದಿದ್ದಲ್ಲಿ ಕೇಸು ಮುಂದುವರೆಸುತ್ತೇನೆ. ಟಿ.ಜೆ ಅಬ್ರಹಾಂ ಅವರ ಆರೋಪದಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನನ್ನ ಮಾನಹಾನಿಯಾಗಿದೆ. ಎಂದು ಹೇಳಿದರು.

ನಾನು ಬ್ಯಾಂಕಿಗೆ ಸಲ್ಲಿಸಿದ್ದ ಆಸ್ತಿ ವಿವರ ಸಮರ್ಪಕವಾಗಿದೆ. ಎಲ್ಲಾ ವ್ಯವಹಾರಗಳನ್ನು ಕಾನೂನು ಬದ್ದವಾಗಿ ನಡೆಸುತ್ತಿದ್ದೇನೆ. ಚುನಾವಣಾ ಆಯೋಗಕ್ಕೆ ಚುನಾವಣೆ ಸಮಯ ಆಸ್ತಿ ವಿವರ ಸಲ್ಲಿಸುತ್ತೇನೆ ಎಂದರು.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸವ್ರ್ ಬ್ಯಾಂಕ್ಗೆ ದೂರು ಸಲ್ಲಿಸಿದ್ದು, ಸಿಂಡಿಕೇಟ್ ಬ್ಯಾಂಕ್ನಲ್ಲಿ ಕಡಿಮೆ ಮೌಲ್ಯದ ಆಸ್ತಿಯ ಮೇಲೆ ಭಾರಿ ಮೊತ್ತದ ಸಾಲ ಪಡೆದಿದ್ದಾರೆ. ಉಡುಪಿ ನಗರದ ಹೊರವಲಯದಲ್ಲಿರುವ ಜಾಗವೊಂದಕ್ಕೆ ಚದರಡಿ ಜಮೀನಿಗೆ .19,000 ಗಳಷ್ಟುಸಾಲವನ್ನು ಸಚಿವರಿಗೆ ನೀಡಲಾಗಿದೆ. ಈ ಅವ್ಯವಹಾರದಲ್ಲಿ ಮಲ್ಪೆಯ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಈ ಅವ್ಯವಹಾರಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯ 107, 112, 403, 412, 420, 225 ಸೆಕ್ಷನ್ಗಳಡಿ ಮೊಕದ್ದಮೆ ಹೂಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಆರ್ಬಿಐ ಗವರ್ನರ್ಗೆ ಬರೆದಿರುವ ಪತ್ರದಲ್ಲಿ ಅಬ್ರಹಾಂ ದೂರು ನೀಡಿದ್ದರು.

ನಾನು ಬಿಜೆಪಿಗೆ ಬರಬಾರದು ಎಂದು ಬಿಜೆಪಿಯ ಇಬ್ಬರು ಮಾಜಿ ನಾಯಕರು ನನ್ನನ್ನು ಅಡ್ಡಗಾಲಾಗಿದ್ದಾರೆ ಎಂದು ಸಚಿವ ಪ್ರಮೋದ ಮಧ್ವರಾಜ್, ನಾನು ಬೇಡಿಕೆ ಇರುವ ರಾಜ್ಯದ ನಂ.1 ಶಾಸಕನಾಗಿದ್ದು, ನಾನು ಕಾಂಗ್ರೇಸ್ ಪಕ್ಷದಿಂದ ಉಡುಪಿ ಕ್ಷೇತ್ರದ ಆಕಾಂಕ್ಷಿ ಯಾಗಿದ್ದು, ಇದಕ್ಕಾಗಿ ಒಂದು ಲಕ್ಷ ರೂಪಾಯಿ ಪಾವತಿಸಿ ಅರ್ಜಿ ಹಾಕಿದ್ದೇನೆ. ದುಡಿದ ಹಣವನ್ನು ನಷ್ಟ ಮಾಡಿಕೊಳ್ಳಲ್ಲ. ಬಿಜೆಪಿಯಿಂದ ತಡೆ ಬಂದ್ರೆ ಹೋಗುವ ಪ್ರಶ್ನೆಯೇ ಬರಲ್ಲ ಎಂದು ತಿಳಿಸಿದರು.

ಗೇಟು ಓಪನಿದ್ರೆ ಹೋಗಬಹುದು, ಗೇಟೇ ಬಂದ್ ಆಗಿದ್ರೆ ಹೋಗುವುದರಿಂದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದರು.


Spread the love