Home Mangalorean News Kannada News ಬ್ಯಾಂಕಿನಲ್ಲಿ ಕಡಿಮೆ ಮೌಲ್ಯದ ಆಸ್ತಿ ದಾಖಲೆ ಇಟ್ಟು ಹೆಚ್ಚು ಸಾಲ ಪಡೆದ ಆರೋಪ ಸುಳ್ಳು; ಪ್ರಮೋದ್...

ಬ್ಯಾಂಕಿನಲ್ಲಿ ಕಡಿಮೆ ಮೌಲ್ಯದ ಆಸ್ತಿ ದಾಖಲೆ ಇಟ್ಟು ಹೆಚ್ಚು ಸಾಲ ಪಡೆದ ಆರೋಪ ಸುಳ್ಳು; ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

Byndoor Police arrests person for illegal liquor sale
Spread the love

ಬ್ಯಾಂಕಿನಲ್ಲಿ ಕಡಿಮೆ ಮೌಲ್ಯದ ಆಸ್ತಿ ದಾಖಲೆ ಇಟ್ಟು ಹೆಚ್ಚು ಸಾಲ ಪಡೆದ ಆರೋಪ ಸುಳ್ಳು; ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

ಉಡುಪಿ: ಚುನಾವಣೆ ಹೊಸ್ತಿಲಲ್ಲಿ ಕ್ರೀಡಾ ಮತ್ತು ಯುವಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರ ಜನಪ್ರಿಯತೆಯನ್ನು ಸಹಿಸದೆ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನವೆಂಬಂತೆ ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಈ ಬಗ್ಗೆ ದೂರು ದಾಖಲಿಸಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ಬುಧವಾರ ಸುದ್ದಿ ಪ್ರಸಾರ ಮಾಡಿದೆ.

ಸಚಿವ ಪ್ರಮೋದ್ ಮಧ್ವರಾಜ್, ಮಲ್ಪೆಯ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಕೇವಲ 1.1 ಕೋಟಿ ಮೌಲ್ಯದ ಸ್ವತ್ತಿನ ದಾಖಲೆ ನೀಡಿ 193 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆನ್ನಲಾಗಿದ್ದು ಈ ಅಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಮೋಸದಿಂದ ಕೋಟಿ ಕೋಟಿ ಹಣವನ್ನು ಸಾಲವಾಗಿ ಪಡೆದಿದ್ದಾರೆಂದು ವಂಚನೆ ಆರೋಪದಡಿ ಸೆಕ್ಷನ್ 120ಬಿ, 415, 420, 403 ಅಡಿಯಲ್ಲಿ ದೂರು ದಾಖಲಾಗಿದೆ ಎಂಬ ಕುರಿತು ಸುದ್ದಿ ವಾಹಿನಿ ವರದಿ ಮಾಡಿತ್ತು.

ಇದರ ಕುರಿತು ನಗರದಲ್ಲಿ ಸ್ಪಷ್ಟನೆ ನೀಡಿದ ಪ್ರಮೋದ್ ಮಧ್ವರಾಜ್ ಅವರು ತನ್ನ ವಿರುದ್ದ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಇದರಲ್ಲಿ ಯಾವುದೇ ಸತ್ಯವಿಲ್ಲ. ನನ್ನ ಮೇಲೆ 193ಕೋಟಿ ವಂಚನೆ ಆರೋಪ ಸುಳ್ಳು. ವಂಚನೆ ಮಾಡಿದ್ದರೆ ನಾನು ಇಷ್ಟು ಸಂತೋಷವಾಗಿ ತಿರುಗುತ್ತಿರಲಿಲ್ಲ . ಈ ಬಗ್ಗೆ ಸಿಂಡಿಕೇಟ್ ಬ್ಯಾಂಕಿನಲ್ಲೇ ಕೇಳಿ. ಬ್ಯಾಂಕಿನಲ್ಲಿ ಎಷ್ಟು ಆಸ್ತಿ ಇಡಬೇಕು ಅಷ್ಟು ಇಟ್ಟಿದ್ದೇನೆ. ಬ್ಯಾಂಕಿನ ಸಾಲ ನಾನು ಕೊಟ್ಟ ಆಸ್ತಿ ಮೇಲೆ ನೀಡಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಯಾವ ತನಿಖೆ ನಡೆಸಬಹುದು ಇಲ್ಲಿ ಯಾವ ವಂಚನೆಯೂ ಆಗಿಲ್ಲ. ಸುಳ್ಳು ಆರೋಪವನ್ನು ನಂಬುತ್ತಾರೆ ಅಂದ್ರೆ ಐ ಆಮ್ ಹೆಲ್ಪಲೆಸ್. ಮಲ್ಪೆ ಬ್ರಾಂಚ್ ನಲ್ಲಿ ನನ್ನ ಖಾತೆ ಇದೆ ಯಾರೂ ಬೇಕಾದರೂ ಪರೀಕ್ಷಿಸಬಹುದು ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ ಉಡುಪಿಯಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ದಿನಕ್ಕೊಂದು ಸ್ಪೋಟಕ ಸುದ್ದಿಗಳ ಬಾಂಬ್ ಸಿಡಿಯುತ್ತಿರುವುದಂತೂ ಸತ್ಯ.


Spread the love

Exit mobile version