Home Mangalorean News Kannada News ಬ್ಯಾಟರಿ ಕಳವು ಪ್ರಕರಣದ ಆರೋಪಿಗಳ ಬಂಧನ

ಬ್ಯಾಟರಿ ಕಳವು ಪ್ರಕರಣದ ಆರೋಪಿಗಳ ಬಂಧನ

Spread the love

ಬ್ಯಾಟರಿ ಕಳವು  ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು : ಮಂಗಳೂರು ದಕ್ಷಿಣ  ಪೊಲೀಸ್  ಠಾಣೆಯಲ್ಲಿ ವರದಿಯಾದ ಬ್ಯಾಟರಿ ಕಳವು ಪ್ರಕರಣ  ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಕುಕ್ಕಾಜೆಯ ಮಹಮ್ಮದ್ ಆಸೀಫ್ ಮತ್ತು ತುಂಬೆ ಗ್ರಾಮದ ಹಬೀಬ್ ರೆಹಮಾನ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ  ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ 3 ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 12  ಬ್ಯಾಟರಿ ಹಾಗೂ ಒಂದು ದ್ವಿಚಕ್ರ ವಾಹನವನ್ನು ಹಾಗೂ  ಪುತ್ತೂರು ನಗರ ಠಾಣೆಯಲ್ಲಿ ದಾಖಲಾದ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿ 2 ಬ್ಯಾಟರಿಗಳನ್ನು ಹಾಗೂ ಕಾವೂರು ಠಾಣೆಯಲ್ಲಿ ದಾಖಲಾದ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿ 6 ಬ್ಯಾಟರಿಗಳನ್ನು ಹಾಗೂ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಒಂದು ಸ್ಕೂಟರ್ ಒಟ್ಟು 6 ಪ್ರಕರಣಕ್ಕೆ ಸಂಬಂಧಿಸಿ 20 ಬ್ಯಾಟರಿಗಳನ್ನು ಹಾಗೂ 2 ದ್ವಿಚಕ್ರ ವಾಹನವನ್ನು ಆರೋಪಿಗಳ ವಶದಿಂದ ಸ್ವಾಧೀನಪಡಿಸಿಕೊಂಡಿದ್ದು ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,20,000/-ಅಂದಾಜಿಸಲಾಗಿದೆ.

ಪ್ರಕರಣದ ವಿವರ

ದಿನಾಂಕ 18-10-2017 ರಂದು ರಾತ್ರಿ ವೇಳೆ ಮಂಗಳೂರು ನಗರ ಅತ್ತಾವರದಲ್ಲಿರುವ ಅಯ್ಯಪ್ಪ ಗುಡಿಯ ಎದುರು ಗ್ರೌಂಡಿನಲ್ಲಿ ನಿಲ್ಲಿಸಿದ ಲಾರಿ ಹಾಗೂ ಜೆಸಿಬಿಗಳ  ಒಟ್ಟು 6 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ  ಪಿರ್ಯಾದಿದಾರರಾದ ಅಕ್ಷಿತ್ ರವರು ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಈ ದಿನ ದಿನಾಂಕ 27-10-2017  ರಂದು ಈ ಪ್ರಕರಣದ ಆರೋಪಿಗಳು ಮಂಗಳೂರು ನಗರದ ಸೂಟರ್ ಪೇಟೆ ಎಂಬಲ್ಲಿರುವುದಾಗಿ ಖಚಿತ ವರ್ತಮಾನ ಪಡೆದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆದು  ಠಾಣೆಯಲ್ಲಿ ದಾಖಲಾದ 3 ಪ್ರಕರಣಗಳಿಗೆ  ಸಂಬಂಧಿಸಿ  ಹಾಗೂ  ಇತರ ಠಾಣೆಯಲ್ಲಿ ದಾಖಲಾದ 3 ಪ್ರಕರಣಕ್ಕೆ ಸಂಬಂಧಿಸಿ ಒಟ್ಟು  20 ಬ್ಯಾಟರಿಗಳನ್ನು ಹಾಗೂ 2 ದ್ವಿಚಕ್ರ ವಾಹನವನ್ನು   ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಆರೋಪಿಗಳ ಪೈಕಿ ಮಹಮ್ಮದ್ ಆಸೀಫ್ ಯಾನೆ ಅಸೀಫ್ ಎಂಬಾತನು ಠಾಣಾ ಹಳೆ ಆರೋಪಿಯಾಗಿದ್ದು  ಈತನು ಮೇಲೆ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ, ಪೂರ್ವ ಪೊಲೀಸ್  ಠಾಣೆಯಲ್ಲಿ  ಹಾಗೂ ಉತ್ತರ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಕಳವು ಪ್ರಕರಣಗಳು ದಾಖಲಾಗಿರುತ್ತದೆ. ಈತನು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯ ಈತನ ವಿರುದ್ದ ಜಾಮೀನು ರಹಿತ ವಾರೆಂಟ್ ಹೊರಡಿಸಿರುತ್ತದೆ.

ಆರೋಪಿಗಳ ಪೈಕಿ ಹಬೀಬ್ ರೆಹಮಾನ್, @ ಹಬೀಬ್, ಎಂಬಾತನು ಮೇಲೆ  ಈ ಹಿಂದೆ ಒಟ್ಟು 3 ಕಳವು ಪ್ರಕರಣ ದಾಖಲಾಗಿದ್ದು  ಈತನು ಠಾಣಾ ಹಳೆಯ ಶಿಕ್ಷಾರ್ಹ ಅಪರಾಧಿಯಾಗಿರುತ್ತಾನೆ.

ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್ ,ಐಪಿಎಸ್  ಮಾನ್ಯ ಉಪ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ)  ಹನುಮಂತರಾಯ,  ಮಾನ್ಯ ಉಪ ಪೊಲೀಸ್ ಆಯುಕ್ತರಾದ (ಅಪರಾಧ ಮತ್ತು ಸಂಚಾರ )   ಉಮಾಪ್ರಶಾಂತ್,  ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮ್ ರಾವ್  ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ರವರು   ಮಂಗಳೂರು ದಕ್ಷಿಣ ಪೊಲೀಸ್  ಠಾಣಾ ಪೊಲೀಸ್ ಉಪ ನಿರೀಕ್ಷಕರ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳ ಸಹಕಾರದಿಂದ ಆರೋಪಿಗಳನ್ನು. ದಸ್ತಗಿರಿ ಮಾಡಿ ಕಳವು ಮಾಡಿದ ಬ್ಯಾಟರಿ ದ್ವಿಚಕ್ರ ವಾಹನಗಳನ್ನು  ಸ್ವಾಧೀನಪಡಿಸಿಕೊಂಡಿರುತ್ತಾರೆ


Spread the love

Exit mobile version