Home Mangalorean News Kannada News ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚಾಂಪಿಯನ್ ಪಟ್ಟಕ್ಕೆ ಒಂದೇ ಹೆಸರು ನ್ಯಾಶನಲ್ ಸ್ಮ್ಯಾಶರ್ಸ್ ತೀರ್ಥಹಳ್ಳಿ

ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚಾಂಪಿಯನ್ ಪಟ್ಟಕ್ಕೆ ಒಂದೇ ಹೆಸರು ನ್ಯಾಶನಲ್ ಸ್ಮ್ಯಾಶರ್ಸ್ ತೀರ್ಥಹಳ್ಳಿ

Spread the love

ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚಾಂಪಿಯನ್ ಪಟ್ಟಕ್ಕೆ ಒಂದೇ ಹೆಸರು ನ್ಯಾಶನಲ್ ಸ್ಮ್ಯಾಶರ್ಸ್ ತೀರ್ಥಹಳ್ಳಿ

ಉಡುಪಿ: ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ತೀರ್ಥಹಳ್ಳೀಯ ನ್ಯಾಶನಲ್ ಸ್ಮ್ಯಾಶರ್ಸ್ ತಂಡವು ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ನಡೆದ ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಮಲ್ಪೆ ಇವರ ವತಿಯಿಂದ ಉಡುಪಿ ಅಜ್ಜರಕಾಡು ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟದ ಚಾಂಪಿಯನ್ ಶಿಪ್ ಪಡೆದುಕೊಳ್ಳುವ ಮೂಲಕ ತನ್ನ ಕೀರಿಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ.

ತೀರ್ಥಹಳ್ಳೀಯ ಹೆಸರಾಂತ ಉದ್ಯಮಿ, ನ್ಯಾಶನಲ್ ಗ್ರೂಪ್ ಇದರ ನಿರ್ದೇಶಕರು ಹಾಗೂ ನ್ಯಾಶನಲ್ ಗೋಲ್ಡ್ & ಡೈಮಂಡ್ಸ್ ಇದರ ಪಾಲುದಾರರಾಗಿರುವ ಡಿ ಎಸ್ ಅಬ್ದುಲ್ ರೆಹಮಾನ್ ಮ್ಹಾಲಕತ್ವದ ನ್ಯಾಶನಲ್ ಸ್ಮ್ಯಾಶರ್ಸ್ ತಂಡ ಇಂದು ತನ್ನ ಕ್ರೀಡಾಸ್ಪೂರ್ತಿಯ ಆಟಗಾರರನ್ನು ಹೊಂದಿದ್ದು ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಯನ್ನು ತೋರಿಕೊಂಡು ಬಂದಿದ್ದು ಇಡೀ ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿ ಕೂಡ ತನ್ನ ಕ್ರೀಡಾ ಹಿರಿಮೆಯನ್ನು ಮೆರೆದಿದೆ. ತಂಡದ ಕೋಚ್ ರಾಹುಲ್ ಜಿ ದಾಸ್ ಹಾಗೂ ಮುಖ್ಯಸ್ಥ ಪುನೀತ್ ಅವರ ಸತತ ಬೆಂಬಲ, ಪ್ರೋತ್ಸಾಹ, ಹಾಗೂ ತರಬೇತಿಯ ಪರಿಣಾಮ ತಂಡ ಎಲ್ಲಿಯೇ ಪಂದ್ಯಾಟದಲ್ಲಿ ಭಾಗವಹಿಸಿದರೂ ಕೂಡ ವಿನ್ನರ್ಸ್ ಟ್ರೋಫಿ ತನ್ನ ಮಡಿಲಿಗೆ ಹಾಕಿಸಿಕೊಳ್ಳುವುದು ಶತ ಸಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂಡದ ಸದಸ್ಯ ಸಾಯಿ ಅವರ ಸಹಕಾರ ಕ್ರೀಡಾಪಟುಗಳಲ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡಿದೆ.

ಇತ್ತೀಚೆಗೆ ಉಡುಪಿಯಲ್ಲಿ ಜರುಗಿದ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟದಲ್ಲಿ ತಂಡದ ಆಟಗಾರರ ಸಾಧನೆ ಅದ್ಭುತವಾಗಿತ್ತು. ಆರಂಭದಿಂದಲ್ಲೇ ತಂಡದ ಪ್ರತಿಯೊಬ್ಬ ಆಟಗಾರರು ತಮ್ಮ ರೋಮಾಂಚಕ ಆಟದ ಮೂಲಕ ಎದುರಾಳಿ ಆಟಗಾರರ ದಾಳಿಯನ್ನು ಎದುರಿಸಿದ್ದಲ್ಲದೆ ನೆರೆದ ಕ್ರೀಡಾ ಪ್ರೇಮಿಗಳ ಮನಗೆದ್ದರು.

ತಂಡದಲ್ಲಿ ಎಲ್ಲಾ ವಯೋಮಿತಿಯ ಆಟಗಾರರಿದ್ದು ಇದೊಂದು ಸರ್ವ ಸನ್ನದ್ದವಾದ ತಂಡವಾಗಿದೆ ಭಾರತದ ಯಾವುದೇ ರಾಜ್ಯದಲ್ಲಿ ಪುರುಷರ ಒಪನ್ ಡಬಲ್ಸ್ ವಿಭಾಗದಲ್ಲಿ ಆಡಲು ವರುಣ್ ರೆಡ್ಡಿ, ರೋಹಿತ್ ಜಯ ಕುಮಾರ್ ಆಟವಾಡಿದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ವಿಭಾಗದಲ್ಲಿ ಪುರುಷರ ಒಪನ್ ಡಬಲ್ಸ್ ನಲ್ಲಿ ಮೋಹಿತ್, ವಿಮಲೇಶ್, ಶಾಶ್ವತ್ ತಮ್ಮ ಸಾಧನೆಯನ್ನು ಮೆರೆದರು. 30 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ರಶ್ಮೀ ಪ್ರದೀಪ್, ಸ್ಮಾರಿಕಾ ಮನಸ್, ವಿಜೇತ, 40 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಗುರು ಗಡಿಯಾರ್, ಅಜಯ್ ಶೆಟ್ಟಿ, ಜಯರಾಮ್ ಶೆಟ್ಟಿ, ತಮ್ಮ ರೋಮಾಂಚಕಾರಿ ಆಟವನ್ನು ಪ್ರದರ್ಶಿಸಿದ್ದಾರೆ.

30 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಸುನೀಲ್ ಗ್ಲಾಡ್ಸ್ನ್, ಪ್ರವೀಣ್ ಚೋಟು, ಓಪನ್ ಮಿಕ್ಸಡ್ ಡಬಲ್ಸ್ ನಲ್ಲಿ ಆಸೀಫ್, ರಕ್ಷೀತಾ ಶೆಟ್ಟಿ, ಉಡುಪಿ ಮತ್ತು ದಕ ಜಿಲ್ಲಾ ವಿಭಾಗದ 30ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ನಲ್ಲಿ ಚೇತನ್, ದೀಕ್ಷಿತ್ ಮತ್ತು ದೀಪಕ್ ತಮ್ಮ ಆಟದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

ತಂಡವು ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟದ ಮೊದಲ ಸೀಸನ್ ನಲ್ಲಿ ಕೂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ತನ್ನ ದಾಖಲೆಯನ್ನು ಈ ಬಾರಿ ಕೂಡ ಮುಂದುವರೆಸಿಕೊಂಡು ಹೋಗಿರುವುದು ತಂಡದ ಬಲಾಡ್ಯತೆಯನ್ನು ತೋರಿಸುತ್ತದೆ. ಇದಲ್ಲದೆ ಇತರ ಹಲವಾರು ರಾಜ್ಯ, ಜಿಲ್ಲಾ ಮಟ್ಟದ ಲೀಗ್ ಪಂದ್ಯಾಟಗಳಲ್ಲಿ ತಮ್ಮ ಸಾಧನೆಯನ್ನು ತೋರಿ ಚಾಂಪಿಯನ್ ಪಟ್ಟದ ಕಿರೀಟ ತನ್ನದಾಗಿಸಿಕೊಂಡಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.

ಬ್ಯಾಂಡ್ಮಿಂಟನ್ ಪಂದ್ಯಾಟದಲ್ಲಿ ಎಲ್ಲಾ ವಯೋಮಿತಿಯ ಆಟಗಾರರನ್ನು ಹೊಂದಿರುವ ತಂಡ ಉತ್ತಮ ತರಬೇತಿ ಹಾಗೂ ಪ್ರೋತ್ಸಾಹದ ಮೂಲಕ ಭಾರತದ ನಾಳಿನ ಆಟಗಾರರನ್ನು ಸಜ್ಜುಗೊಳಿಸುವತ್ತ ಮುನ್ನುಗ್ಗುತಿದೆ. ಇಂದು ಭಾರತ ತಂಡದಲ್ಲಿ ಆಡುತ್ತಿರುವ ಪಿವಿ ಸಿಂಧು,ಸಾತ್ವಿಕ್ ಸಾಯಿರಾಜ್, ಚಿರಾಗ್ ಶೆಟ್ಟಿ, ತನಿಶಾ ಕ್ರಾಸ್ಟೊ, ಅಶ್ವಿನಿ ಪೊನ್ನಪ್ಪ ಆಟಗಾರರು ತಮ್ಮ ಆರಂಭಿಕ ಜೀವನವನ್ನು ಚಿಕ್ಕ ಚಿಕ್ಕ ಪಂದ್ಯಾಟಗಳ ಮೂಲಕ ಆರಂಭಿಸಿ ಇಂದು ರಾಷ್ಟ್ರೀಯ ಕ್ರೀಡಾಪಟುಗಳಾಗಿ ಗುರುತಿಸಿಕೊಂಡಿದ್ದರೆ ಮುಂದೊಂದು ದಿನ ನ್ಯಾಶನಲ್ ಸ್ಮ್ಯಾಶರ್ಸ್ ತಂಡದ ಆಟಗಾರರು ಕೂಡ ಇವರುಗಳ ಸ್ಥಾನದಲ್ಲಿ ಬ್ಯಾಡ್ಮಿಂಟನ್ ಪ್ರತಿಭೆಗಳಾಗಿ ಗುರುತಿಸಲು ಬೇಕಾದ ಎಲ್ಲಾ ಅರ್ಹತೆಯನ್ನು ಪಡೆಯುವಲ್ಲಿ ತನ್ನ ಪ್ರಯತ್ನವನ್ನು ನೀಡುತ್ತಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ಯಶಸ್ಸು ನ್ಯಾಶನಲ್ ಸ್ಮ್ಯಾಶರ್ಸ್ ತಂಡಕ್ಕೆ ಲಭಿಸಲಿ ಎನ್ನುವುದು ಓದುಗರ ಹಾರೈಕೆಯಾಗಿದೆ.


Spread the love

Exit mobile version