ಬ್ರಹ್ಮಾವರ :ಧರ್ಮದ ನೆಲೆಯಲ್ಲಿ ಒಂದಾಗುವ ಜನತೆ, ಮಂದಾರ್ತಿ ಗ್ರಾಮಾಭಿವೃದ್ಧಿ ಯೋಜನೆ ಪದಗ್ರಹಣದಲ್ಲಿ;ವಾಸುದೇವ ಭಟ್

Spread the love

ಬ್ರಹ್ಮಾವರ: ಭಾರತದ ಜನತೆ ಧರ್ಮದ ನೆಲೆಯಲ್ಲಿ ಒಂದಾಗುತ್ತಾರೆ ಎನ್ನುವ ಕಲ್ಪನೆಯಲ್ಲಿ ಪೂಜೆ ಪುರಸ್ಕಾರಗಳನ್ನು ಮಾಡುವ ಕ್ರಮವನ್ನು ಹಿರಿಯರು ಆರಂಭಿಸಿ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಸಂಸ್ಕಾರ ಭಾರತಿ ಉಡುಪಿಯ ಸಂಚಾಲಕ ವಾಸುದೇವ ಭಟ್ ಹೇಳಿದರು.

ಮಂದಾತರ್ಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಠಾರದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮಂದಾತರ್ಿ ವಲಯದ 13ಒಕ್ಕೂಟಗಳ ಪದಗ್ರಹಣ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

YASHICA Digital Camera YASHICA Digital Camera

ಸಂಭ್ರಮವನ್ನು ಸಂಕಲ್ಪವನ್ನಾಗಿಸುವ ಮತ್ತು ಭಕ್ತಿಯನ್ನು ಶಕ್ತಿಯನ್ನಾಗಿ ಮಾಡುವ ಕಾರ್ಯ ಎಲ್ಲೆಡೆ ಆಗಬೇಕು. ಕಾನೂನಿನ ಬಗ್ಗೆ ಇಲ್ಲದ ನಂಬಿಕೆ ಧರ್ಮ ಸಂಸ್ಕೃತಿಯ ಮೇಲೆ ಇರುತ್ತದೆ. ನಮ್ಮ ಪೂವರ್ಿಕರು ಅದೆಷ್ಟೋ ವರ್ಶಗಳ ಹಿಂದೆ ಕಂಡುಕೊಂಡ ಪೂಜಾ ಕ್ರಮ, ಧಮ, ದೇವಾಲಯಗಳ ಮೂಲಕ ಮನಸ್ಸಿಗೆ ನೆಮ್ಮದಿ, ಸಮಾಜದಲ್ಲಿ ಶಾಂತಿ ನೆಲೆಸಿದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಮಂದಾರಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್.ಧನಂಜಯ ಶೆಟ್ಟಿ ಉದ್ಘಾಟಿಸಿದರು.

ಸಾಮೂಹಿಕ ಸತ್ಯ ನಾರಾಯಣ ಪೂಜಾ ಸಮಿತಿಯ ರಾಘವೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಯೋಜನಾಧಿಕಾರಿ ಮಾಲತಿ ದಿನೇಶ್, ಸಾಹಿತಿ ಹಾಗೂ ಅಧ್ಯಾಪಕ ನರೇಂದ್ರ ಕುಮಾರ್ ಕೋಟ, ಶಿಕ್ಷಣ ಇಲಾಕೆಯ ಮಂಜುಳಾ ಜಯಕರ್, ಮಂದಾರ್ತಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರತ್ನಾಕರ ಶೆಟ್ಟಿ, ಕೂಡ್ಲಿ ಜನಾರ್ಥನ ದೇವಸ್ಥಾನದ ಧರ್ಮದರ್ಶಿ ಕೂಡ್ಲಿ ಸತ್ಯನಾರಾಯಣ ಉಡುಪ ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಯಡ್ತಾಡಿ, ಶಿರಿಯಾರ, ಬಾರ್ಕೂರು, ಹನೆಹಳ್ಳಿ, ಹಿಲಿಯಾಣ, ಹೆಗ್ಗುಂಜೆ, ಆವರ್ಶೆ, ಶಿರೂರು, ಹೇರಾಡಿ ಮತ್ತು ಒಕ್ಕೂಟಗಳ ಪದಗ್ರಹಣ ನಡೆಯಿತು.

ಕುಸುಮ ಸ್ವಾಗತಿಸಿದರು. ಭಾರತಿ ವರದಿ ವಾಚಿಸಿದರು. ಜಯಲಕ್ಷ್ಮೀ ಪದಾಧಿಕಾರಿಗಳನ್ನು ಪರಿಚಯಿಸಿದರು. ಅಣ್ಣಪ್ಪ ಪೂಜಾರಿ ವಂದಿಸಿದರು. ಮೇಲ್ವಿಚಾರಕಿ ಶುಭವತಿ ಕಾರ್ಯಕ್ರಮ ನಿರೂಪಿಸಿದರು.


Spread the love