ಬ್ರಹ್ಮಾವರ: ವೃದ್ಧ ಮಹಿಳೆಯ ಚಿನ್ನದ ಸರ ಕಳ್ಳತನ : ಮೂವರ ಅಂತರ್ ರಾಜ್ಯ ಕಳ್ಳರ ಸೆರೆ

Spread the love

ಬ್ರಹ್ಮಾವರ: ವೃದ್ಧ ಮಹಿಳೆಯ ಚಿನ್ನದ ಸರ ಕಳ್ಳತನ : ಮೂವರ ಅಂತರ್ ರಾಜ್ಯ ಕಳ್ಳರ ಸೆರೆ

ಬ್ರಹ್ಮಾವರ: ಹೂ ಕೀಳುತ್ತಿದ್ದ ವೃದ್ಧ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದು ಮೂವರು ಅಂತರ್ ರಾಜ್ಯ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗೋವಾ ನಿವಾಸಿ ಗೌರೀಶ ರೋಹಿದಾಸ್ ಕೆರ್ಕರ್, (37), ಬಿಜಾಪುರ ಜಿಲ್ಲೆ ಸಿಂಧಗಿ ನಿವಾಸಿ ಮೈನುದ್ದೀನ್ ಬಾಗಲಕೋಟ್ (31) ಮತ್ತು ಮಹಾರಾಷ್ಟ್ರದ ವಿಲೆಪಾರ್ಲೆ ನಿವಾಸಿ ಸುರ್ಜಿತ್ ಗೌತಮ್ ಕಾರ್(27) ಎಂದು ಗುರುತಿಸಲಾಗಿದೆ.

ಎಪ್ರಿಲ್ 26 ರಂದು ಬೆಳಿಗ್ಗೆ ಬ್ರಹ್ಮಾವರ ವಾರಂಬಳ್ಳೀ ಆದರ್ಶ ನಗರದ ಮನೆಯಲ್ಲಿ ವಾಸವಾಗಿದ್ದು ವೃದ್ಧ ಮಹಿಳೆ ಪದ್ಮ ಎಂಬವರು ತನ್ನ ಮನೆಯ ಕಂಪೌಂಡಿನ ಹೊರಗಡೆ ಕಾಂಕ್ರೀಟ್ ರಸ್ತೆಯಲ್ಲಿ ಹೂವುಗಳನ್ನು ಕೊಯ್ಯುತ್ತಿರುವಾಗ ಒಂದು ಬಿಳಿ ಬಣ್ಣದ ಕಾರು ಅವರ ಬಳಿ ಬಂದು ನಿಂತು, ಅದರರಿಂದ ಕೇಸರಿ ಬಣ್ಣದ ಟೀ ಶರ್ಟ್ ಅನ್ನು ಧರಿಸಿದ ಆರೋಪಿತನು ಕೆಳಗೆ ಇಳಿದಿದ್ದು, ಕಾರಿನಲ್ಲಿದ್ದ ಉಳಿದ 2 ರಿಂದ 3 ಜನ ಕಾರಿನಲ್ಲಿ ಸ್ವಲ ದೂರ ದೂಪದಕಟ್ಟೆ ಕಡೆಗೆ ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡಿರುತ್ತಾರೆ.

ಆಗ ಮಹಿಳೆ ಪದ್ಮ ಅವರಿಗೆ ಬೆನ್ನು ಹಾಕಿ ಹೂವುಗಳನ್ನು ಕೀಳುತ್ತಿರುವಾಗ ಶಬ್ದ ಕೇಳಿ ಹಿಂದೆ ತಿರುಗಿದಾಗ ಕಾರಿನಿಂದ ಮೊದಲೇ ಇಳಿದಿದ್ದ ಆರೋಪಿಯೋರ್ವ ಮಹಿಳೆಯ ಹತ್ತಿರ ಬಂದು ಕೈಯಿಂದ ಅವರ ತಲೆಯ ಹಿಂಭಾಗಕ್ಕೆ ಗುದ್ದಿದ್ದು, ಆಗ ಪದ್ಮ ಅವರು ರಸ್ತೆಗೆ ಬಿದ್ದಾಗ ಅವರ ಕೈಯನ್ನು ಆರೋಪಿ ಹಿಡಿದು ರಸ್ತೆಯಲ್ಲಿ ಎಳೆದಾಡಿ ಅವರ ತುಟಿಯ ಮೇಲ್ಬಾಗಕ್ಕೆ ಹಾಗೂ ಮುಖದ ಬಲ ಭಾಗಕ್ಕೂ ಗುದ್ದಿ ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಮ್ ತೂಕದ ರೂ. 2,50,000/- ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಹಿಡಿದೆಳೆದು ಬಲವಂತವಾಗಿ ಕಸಿದುಕೊಂಡು ಕಾರಿನ ಕಡೆಗೆ ಓಡಿ ಹೋಗಿ ಕಾರನ್ನು ಹತ್ತಿ ಪರಾರಿಯಾಗಿದ್ದರು.

ಆರೋಪಿಗಳು ವೃದ್ಧ ಮಹಿಳೆಗೆ ಮಾಡಿದ ಹಲ್ಲೆಯಿಂದ ಅವರ ತುಟಿಯ ಮೇಲ್ಗಡೆ, ಬಲ ಕಣ್ಣಿನ ಕೆಳಗಡೆ ರಕ್ತಗಾಯ ವಾಗಿ ತಲೆಯ ಹಿಂಭಾಗಕ್ಕೆ ಗುದ್ದಿದ ಒಳನೋವು ಉಂಟಾಗಿದ್ದು, ಕಾರಿನಲ್ಲಿ ಬಂದು ದರೋಡೆ ಮಾಡಿದ ಆರೋಪಿಗಳ ವಿರುದ್ಧ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 96/2025 U/S. 309(4), 115(2) BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು

ಈ ಪ್ರಕರಣದಲ್ಲಿ ಆರೋಪಿಗಳು ಮತ್ತು ಸ್ವತ್ತು ಪತ್ತೆಗಾಗಿ ಗೋಪಿಕೃಷ್ಣ ಕೆ.ಆರ್. ಸಿ.ಪಿ.ಐ ಬ್ರಹ್ಮಾವರ, ಬ್ರಹ್ಮಾವರ ಠಾಣಾ ಪಿ.ಎಸ್ ಐ ಸುದರ್ಶನ್ ದೊಡ್ಡಮನಿ, ಮಹಾಂತೇಶ ಜಾಬಗೌಡ, ಹಿರಿಯಡ್ಕ ಠಾಣಾ ಪಿ.ಎಸ್.ಐ ಪುನೀತ್ ಬಿ.ಇ. ಅಪರಾಧ ಪತ್ತೆ ಸಿಬ್ಬಂದಿಗಳಾದ ಬ್ರಹ್ಮಾವರ ಠಾಣಾ ಸಿಹೆಚ್.ಸಿ ಇಮ್ರಾನ್, ಸಿಪಿಸಿ ಮಹಮ್ಮದ್ ಅಜ್ಮಲ್, ಸಿಪಿಸಿ ಕಿರಣ್, ಕೋಟ ಠಾಣಾ ಸಿಪಿಸಿ ರಾಘವೇಂದ್ರ, ಸಿಪಿಸಿ ವಿಜಯೇಂದ್ರ, ಹಿರಿಯಡ್ಕ ಠಾಣಾ ಸಿಪಿಸಿ ಕಾರ್ತಿಕ್, ಸಿಪಿಸಿ ಹೇಮಂತ್, ಬ್ರಹ್ಮಾವರ ವೃತ್ತ ಕಛೇರಿಯ ಎ.ಎಸ್ಐ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ ತಂಡ ರಚಿಸಲಾಗಿದ್ದು ಆರೋಪಿಗಳನ್ನು, ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರದಲ್ಲಿ ಯಲ್ಲಾಪುರ ಸಿಪಿಐ ರಮೇಶ ಹಾನಾಪುರ, ಯಲ್ಲಾಪುರ ಠಾಣಾ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರ, ಸಿಹೆಚ್.ಸಿ ಮಹಮ್ಮದ್ ಶಫಿ ಎ.ಶೇಖ್, ಸಿ.ಪಿ.ಸಿ ಗಿರೀಶ ಲಮಾಣಿ, ಮಪಿಸಿ ಶೋಭಾರವರ ಸಹಕಾರದೊಂದಿಗೆ ಮೂವರು ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು


Spread the love
Subscribe
Notify of

0 Comments
Inline Feedbacks
View all comments