ಬ್ರಹ್ಮಾವರ: ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ(ನಿ), ಬ್ರಹ್ಮಾವರ ಇದರ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಗಾಗಿ ದಿನಾಂಕ:14-05-2015ರಂದು ಚುನಾವಣಾಧಿಕಾರಿಗಳಾದ ಕುಂದಾಪುರ ಉಪವಿಭಾಗಾಧಿಕಾರಿಗಳು ಕಾರ್ಖಾನೆಯ ಆಡಳಿತ ಕಛೇರಿಯಲ್ಲಿ ಚುನಾವಣೆ ಜರುಗಿಸಿದ್ದು, ಅಡಳಿತ ಮಂಡಳಿಯ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಶ್ರೀ ಜಯಶೀಲ ಶೆಟ್ಟಿ ಎಚ್. ಮತ್ತು ಉಪಾಧ್ಯಕ್ಷರಾಗಿ ಕು|ಶ್ಯಾಮಲಾ ಭಂಡಾರಿಯವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂಬುದಾಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು(ಪ್ರಭಾರ) ಆಗಿರುವ ಶ್ರೀ ಪ್ರವೀಣ್ ಬಿ. ನಾಯಕ್, ಸಹಕಾರ ಸಂಘಗಳ ಉಪನಿಬಂಧಕರು, ಉಡುಪಿ ಇವರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.