ಬ್ರಹ್ಮಾವರ: ಹನೆಹಳ್ಳಿ, ಬಂಡೀಮಠದಲ್ಲಿ ಅಕ್ರಮ ಶಿಲೆಕಲ್ಲು ಗಣಿಗಾರಿಕೆ ಸ್ಥಗಿತ
ಉಡುಪಿ: ಸಾರ್ವಜನಿಕರ ದೂರಿನನ್ವಯ ಬಾರ್ಕೂರು ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಶಿಲೆಕಲ್ಲು ಗಣಿಕಾರಿಕೆಯನ್ನು ಬ್ರಹ್ಮಾವರ ತಹಶೀಲ್ದಾರ್, ಜಿಲ್ಲಾ ಗಣಿ ಅಧಿಕಾರಿಗಳು, ಬ್ರಹ್ಮಾವರ ಅರಕ್ಷಕ ಠಾಣೆಯವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ಥಳ ಮಹಜರು ನಡೆಸಿ ಸ್ಥಗಿತಗೊಳಿಸಿರುತ್ತಾರೆ.
ಬಾರ್ಕೂರು ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗೆ 30 ಮೀ ದೂರದಲ್ಲಿ ಅಕ್ರಮವಾಗಿ ಸ್ಪೋಟಕ ಬಳಸಿ ನಡೆಸುತ್ತಿದ್ದ ಕಲ್ಲುಕೋರೆಯಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲತೆಗಳ ಬಗ್ಗೆ ಹನೇಹಳ್ಳಿ, ಬಂಡಿಮಠ ಗ್ರಾಮಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬ್ರಹ್ಮಾವರ ತಹಶೀಲ್ದಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಬಾರಕೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರು ಕಾವಡಿ ಉಲ್ಲಾಸ್ ಶೆಟ್ಟಿ ಇವರಿಗೆ ನೀಡಿದ ದೂರಿನ ಮೇರೆಗೆ ಸಪ್ಟೆಂಬರ್ 28ರಂದು ಬ್ರಹ್ಮಾವರ ತಹಶೀಲ್ದಾರ್, ಜಿಲ್ಲಾ ಗಣಿ ಅಧಿಕಾರಿಗಳು, ಬ್ರಹ್ಮಾವರ ಅರಕ್ಷಕ ಠಾಣೆಯವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ಥಳ ಮಹಜರು ನಡೆಸಿ ಶಾಶ್ವತವಾಗಿ ಸ್ಥಗಿತಗೊಳಿಸಿರುತ್ತಾರೆ ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.