ಬ್ರಾಂಡ್ ವ್ಯಾಲ್ಯೂ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ
ಮೂಡಬಿದಿರೆ: “ಸವಾಲುಗಳಿಗೆ ಸದಾ ತೆರೆದುಕೊಂಡಿದ್ದಾಗ ಮಾತ್ರ, ನಮ್ಮ ನಿಜವಾದ ಸಾಮಥ್ರ್ಯದ ದರ್ಶನವಾಗುವುದು. ಹಾಗಾಗಿ ಸವಾಲುಗಳನ್ನು ಸ್ವೀಕರಿಸಿ ಮುನ್ನುಗುವುದನ್ನು ರೂಢಿಸಿಕೊಳ್ಳಿ” ಎಂದು ಬೆಂಗಳೂರು ಐಬಿಎಮ್‍ನ ಬ್ರ್ಯಾಂಡ್ ಮ್ಯಾನೇಜರ್‍ಅರುಣ್ ಹೇಳಿದರು.
ಆಳ್ವಾಸ್ ಕಾಲೇಜಿನ ಪದವಿ ಮ್ಯಾನೇಜ್‍ಮೆಂಟ್ ವಿಭಾಗದ ವತಿಯಿಂದ ಕುವೆಂಪ್ ಸಭಾಂಗಣದಲ್ಲಿ “ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬ್ರ್ಯಾಂಡ್ ವ್ಯಾಲ್ಯೂನ ಪ್ರಾಮುಖ್ಯತೆ” ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬ್ರ್ಯಾಂಡ್ ವ್ಯಾಲ್ಯೂ ಎಂಬುದು ಒಂದು ಕಂಪನಿಯ ಸೂಚಕವಲ್ಲ. ಅದು ಪ್ರತಿಯೊಬ್ಬನ ವೈಯಕ್ತಿಕ ಬೆಳವಣಿಗೆಯಿಂದ ಸಾಧ್ಯವಾಗುವಂಥದ್ದು. ಹಾಗಾಗಿ ನಮ್ಮನ್ನು ನಾವು ಬ್ರ್ಯಾಂಡ್ ಆಗಿ ರೂಪಿಸಿಕೊಳ್ಳುವುದು ಅಗತ್ಯ. ಈ ವೈಯಕ್ತಿಕ ಬ್ರ್ಯಾಂಡಿಂಗ್‍ನಲ್ಲಿ ಮೂರು ವಿಷಯಗಳು ಮುಖ್ಯ ಪಾತ್ರ ವಹಿಸುತ್ತವೆ. ಅದುವೇ ನಮ್ಮನ್ನು ನಾವು ನಂಬುವುದು, ನಮ್ಮೊಳಗಿನ ಪ್ರತಿಭೆಯನ್ನು ಕಂಡುಕೊಳ್ಳುವುದು ತನ್ಮೂಲಕ ಅದನ್ನು ನಮ್ಮ ಯೋಜನೆಗಳಲ್ಲಿ ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು. ಇದರಿಂದ ಪ್ರತಿಯೊಬ್ಬರು ಬ್ರ್ಯಾಂಡ್ ಆಗಿ ನಿರ್ಮಾಣಗೊಳ್ಳುತ್ತಾರೆ” ಎಂದು ತಿಳಿಸಿದರು.
“ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬ್ರ್ಯಾಂಡ್ ವ್ಯಾಲ್ಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೇ ಜನರ ನೀರಿಕ್ಷೆಗಳು ಹೆಚ್ಚಿದಂತೆ ಬ್ರ್ಯಾಂಡ್‍ನ ಬೇಡಿಕೆಗಳು ಅಧಿಕವಾಗುತ್ತದೆ. ಹಾಗಾಗಿ ಇಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ” ಎಂದು ಹೇಳಿದ ಅವರು ಫ್ಲಿಪ್‍ಕಾರ್ಟ್‍ನಲ್ಲಿ ನೋಡಿದ ಸರಕೊಂದರ ಜಾಹೀರಾತುಗಳು ನಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರುವುದು ಹೇಗೆ ಎಂಬುದನ್ನು ಉದಾಹರಿಸಿ ತಿಳಿಸಿದರು.
ವೇಗದಜತೆಗೆ ಸ್ಪರ್ಧೆ
“ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಯನ್ನು ನಾವು ಕಾಣಬಹುದು. ಈಗ ಮತ್ತೊಬ್ಬರೊಂದಿಗೆ ಸ್ಪರ್ಧೆ ಎನ್ನುವ ಬದಲು, ತಂತ್ರಜ್ಞಾನದ ವೇಗದ ಜತೆಗೆ ಸ್ಪರ್ಧೆ ಎಂದರೆ ತಪ್ಪಾಗಲಾರದು. ಈ ಕಾರಣದಿಂದ ನಮ್ಮನ್ನು ನಾವು ಜಗತ್ತಿನ ಬೆಳವಣಿಗೆಗೆ ತಕ್ಕಂತೆ ಆಧುನೀಕರಿಸಿಕೊಳ್ಳಬೇಕು, ನಮ್ಮ ಬ್ರ್ಯಾಂಡ್ ಆಗಿ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಮನೋವೃತ್ತಿ, ನಡವಳಿಕೆ ಹಾಗೂ ಸಂವಹನ ಕೌಶಲ್ಯಗಳು ಮುಖ್ಯವಾಗುತ್ತವೆ” ಎಂದು ಹೇಳಿದರು.
ಪ್ರಾಂಶುಪಾಲ ಡಾ. ಕುರಿಯನ್, ಎಚ್‍ಆರ್‍ಡಿ ವಿಭಾಗದ ಡೀನ್ ಸುರೇಖಾ, ಪದವಿ ಮ್ಯಾನೇಜ್‍ಮೆಂಟ್ ವಿಭಾಗದ ಉಪನ್ಯಾಸಕ ಹಾಗೂ ಉಪನ್ಯಾಸ ಕಾರ್ಯಕ್ರಮದ ಸಂಯೋಜಕ ಗುರುಪ್ರಸಾದ್ ಉಪಸ್ಥಿತರಿದ್ದರು.