ಬ್ರಿಟನ್ ಸಾರ್ವತ್ರಿಕ ಚುನಾವಣೆ ಸಂಸದೀಯ ವೀಕ್ಷಕರಾಗಿ ಶೋಭಾ ಕರಂದ್ಲಾಜೆ ಆಯ್ಕೆ
ಉಡುಪಿ: ಬ್ರಿಟನ್ ದೇಶದ ಸಾರ್ವತ್ರಿಕ ಚುನಾವಣೆ -2017 ಕ್ಕೆ ಭಾರತದಿಂದ ಅಧಿಕೃತ ಸಂಸದೀಯ ವೀಕ್ಷಕರಾಗಿ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದಾರೆ.
ಜಗತ್ತಿನ ಹಳೆಯ ಪ್ರಜಾಪ್ರಭುತ್ವಗಳಲ್ಲೊಂದಾದ ಗ್ರೇಟ್ ಬ್ರಿಟನ್ ಸಾರ್ವತ್ರಿಕ ಚುನಾವಣೆ ಜೂನ್ 8 ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ಎನಿಸಿದ ಭಾರತದಿಂದ ಅಧಿಕೃತ ಸಂಸದೀಯ ವೀಕ್ಷಕರಾಗಿ ಸಂಸದೆ ಶೋಭಾ ಕರಂದ್ಲಾಜೆ ಜೂನ್ 3 ರಿಂದ 10 ರ ವರೆಗೆ ನಡೆಯಲಿರುವ ದೇಶದ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವರು.
ಯುಕೆ ಎಲೆಕ್ಷನ್ ಎಸೆಸ್ ಮೆಂಟ್ ಮಿಷನ್ ಯೋಜನೆಯಡಿ ಭಾರತದಿಂದ ಅಧಿಕೃತ ಸಂಸದೀಯ ವೀಕ್ಷಕರಾಗಿ ಸಂಸದೆ ಶೋಭಾ ಕರಂದ್ಲಾಝೆಯವರನ್ನು ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಶಿಫಾರಸ್ಸಿನಂತೆ ಆಯ್ಕೆ ಮಾಡಲಾಗಿದೆ.
ಬ್ರಿಟನ್ ಸಾರ್ವತ್ರಿಕ ಚುನಾವಣೆ ಸಂಸದೀಯ ವೀಕ್ಷಕರಾಗಿ ಶೋಭಾ ಕರಂದ್ಲಾಜೆ ಆಯ್ಕೆ
Spread the love
Spread the love