ಬ್ರೇಕ್ ವೈಫಲ್ಯಕ್ಕೀಡಾದ ಬಸ್ ನಿಯಂತ್ರಿಸಿ ಪ್ರಯಾಣಿಕರ ರಕ್ಷಿಸಿದ ಚಾಲಕ!

Spread the love

ಬ್ರೇಕ್ ವೈಫಲ್ಯಕ್ಕೀಡಾದ ಬಸ್ ನಿಯಂತ್ರಿಸಿ ಪ್ರಯಾಣಿಕರ ರಕ್ಷಿಸಿದ ಚಾಲಕ!

ಮಂಗಳೂರು: ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ವಿಶಾಲ್ ಟ್ರಾವೆಲ್ಸ್ ಬಸ್ ಗುರುವಾರ ಬೆಳಗ್ಗೆ ನಗರದ ಬಲ್ಲಾಳ್‌ಬಾಗ್ ಬಳಿ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗೆ 8 ಗಂಟೆ ವೇಳೆಗೆ ಘಟನೆ ನಡೆದಿದ್ದು, ಲಾಲ್‌ಬಾಗ್ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದುವರಿದ ಬಸ್ ಬಲ್ಲಾಳ್‌ ಬಾಗ್ ತಂಗುದಾಣದತ್ತ ಬಂದಿದೆ. ಈ ವೇಳೆ ಚಾಲಕ ಸಿದ್ದಿಕ್ ಎರ್ಮಾಳ್ ಅವರಿಗೆ ಬಸ್ಸಿನ ಬ್ರೇಕ್ ವೈಫಲ್ಯ ಆಗಿರುವುದು ಗೊತ್ತಾಯಿತು. ಕೂಡಲೇ ಬಸ್ಸನ್ನು ರಸ್ತೆಯ ಎಡಕ್ಕೆ ತಿರುಗಿಸಿದ್ದಾರೆ. ಅಲ್ಲಿ ಫುಟ್‌ಪಾತ್ ಮಟ್ಟ ರಸ್ತೆಗಿಂತ ಎತ್ತರದಲ್ಲಿದ್ದು, ಆದರೂ ಬಸ್ಸು ಅದರ ಮೇಲೆ ಹತ್ತಿದೆ.

ಆದರೆ ಹಿಂದಿನ ಚಕ್ರಗಳು ಫುಟ್‌ಪಾತ್ ಮೇಲಕ್ಕೆ ಬರಲು ಸಾಧ್ಯವಾಗದೆ, ಬಸ್ಸು ಮುಂದಕ್ಕೆ ಚಲಿಸದೆ ಅಲ್ಲೇ ನಿಂತಿದೆ. ಬೆಳಗ್ಗಿನ ವೇಳೆಯಾಗಿದ್ದರಿಂದ ಬಸ್ಸಿನಲ್ಲಿ ಸಾಕಷ್ಟು ಮಂದಿ ಪ್ರಯಾಣಿಕರಿದ್ದರು. ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments