Home Mangalorean News Kannada News ಬ್ಲಾಸಮ್ ಯಾವುದೇ ಅನೈತಿಕ ಸಂಬಂಧ ಹೊಂದಿರಲಿಲ್ಲ; ಕುಟುಂಬ ವರ್ಗ

ಬ್ಲಾಸಮ್ ಯಾವುದೇ ಅನೈತಿಕ ಸಂಬಂಧ ಹೊಂದಿರಲಿಲ್ಲ; ಕುಟುಂಬ ವರ್ಗ

Spread the love

ಬ್ಲಾಸಮ್ ಯಾವುದೇ ಅನೈತಿಕ ಸಂಬಂಧ ಹೊಂದಿರಲಿಲ್ಲ; ಕುಟುಂಬ ವರ್ಗ

ಮಂಗಳೂರು: ಅನೈತಿಕ ಸಂಬಂಧದ ಆರೋಪದಡಿಯಲ್ಲಿ ತನ್ನ ಗಂಡನಿಂದಲೇ ಕೊಲೆಯಾದ ಪತ್ನಿ ಬ್ಲಾಸಮ್ ಲೋಬೊ ಅವರಿಗೆ ಯಾವುದೇ ರೀತಿಯ ಅನೈತಿಕ ಸಂಬಂಧ ಇರಲಿಲ್ಲ ಬದಲಾಗಿ ಆಕೆ ಶ್ರಮ ಜೀವಿಯಾಗಿದ್ದಳು ಎಂದು ಆಕೆಯ ಕುಟುಂಬವರ್ಗ ಹೇಳಿದೆ.

ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಬ್ಲಾಸಮ್ ಸಂಬಂಧಿಕರು, ಬ್ಲಾಸಮ್ ಮತ್ತು ವಿಲ್ಯಮ್ ಅವರ ವಿವಾಹವು ನಾಲ್ಕು ವರೆ ವರ್ಷದ ಹಿಂದೆ ನಡೆದಿದ್ದು, ಮೂರುವರೆ ವರ್ಷದ ಒಂದು ಗಂಡು ಮಗುವನ್ನು ಅವರು ಹೊಂದಿದ್ದಾರೆ. ಮದುವೆಯ ಬಳಿಕ ದಂಪತಿಗಳು ಯಾವಾಗಲೂ ಜಗಳ ಮಾಡಿಕೊಳ್ಳುತ್ತಿದ್ದು, ಬ್ಲಾಸಮ್ ಐಟಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ಧರು. ಆಕೆ ಒರ್ವ ಶ್ರಮಜೀವಿಯಾಗಿದ್ದು, ಬಾಡಿಗೆ ಮನೆಯಲ್ಲಿ ತನ್ನ ಮಗುವಿನೊಂದಿಗೆ ವಾಸಿಸುತ್ತಿದ್ಧಳು. ವಿಲ್ಯಮ್ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದು, ವಾರಕ್ಕೊಮ್ಮೆ ಮಂಗಳೂರಿಗೆ ಬರುತ್ತಿದ್ದು ಪ್ರತಿಬಾರಿ ಬಂದಾಗ ಇಬ್ಬರಲ್ಲಿ ಜಗಳವಾಗುತ್ತಿತ್ತು.

ಐದು ದಿನಗಳ ಹಿಂದೆ ವಿಲಿಯಂ ಯಾರಿಗೂ ತಿಳಿಸದೆ ತನ್ನ ಮಗನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದು, ಎರಡು ದಿನಗಳ ಹಿಂದೆ ತನ್ನ ಅತ್ತೆಗೆ ಫೋನ್ ಮಾಡಿ ಮಗು ಬೆಂಗಳೂರಿನಲ್ಲಿದೆ ಎಂದು ತಿಳಿಸಿದ್ದ. ಶುಕ್ರವಾರ ರಾತ್ರಿ ಬ್ಲಾಸಂ ತನ್ನ ತಾಯಿಗೆ 9.30 ಹೊತ್ತಿಗೆ ಫೋನ್ ಮಾಡಿ ತನ್ನ ಜೀವಕ್ಕೆ ಅಪಾಯ ಇದೆ ಎಂದು ಹೇಳಿದ್ದಳು ಅಲ್ಲದೆ ತನ್ನ ತಾಯಿಗೆ ಮಂಗಳೂರಿಗೆ ಬರುವಂತೆ ತಿಳಿಸಿದ್ದಳು. ಮಗಳ ಆತಂಕವನ್ನು ಗಮನಿಸಿದ ತಾಯಿ ಮಡಿಕೇರಿಯ ಸಿದ್ದಾಪುರದಿಂದ ಮಂಗಳೂರಿಗೆ ಹೊರಟಿದ್ದು ಅವರು ಇಲ್ಲಿಗೆ ತಲುಪುವ ಮೊದಲೆ ಬ್ಲಾಸಮ್ ಕೊಲೆಯಾಗಿದ್ದಾಳೆ. ಬ್ಲಾಸ್ಂ ಯಾವುದೇ ರೀತಿಯ ಅನೈತಿಕ ಸಂಬಂಧ ಹೊಂದಿರಲಿಲ್ಲ ಮತ್ತು ಆಕೆಯ ಪತಿ ಹೇಳಿರುವುದು ಸಂಪೂರ್ಣ ಸುಳ್ಳು. ವಿಲ್ಯಮ್ ಆಕೆಯೊಂದಿಗೆ ಯಾವಾಗಲೂ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನುತ್ತಾರೆ ಆಕೆಯ ಸಂಬಂಧಿಕರು.

ಶುಕ್ರವಾರ ರಾತ್ರಿ ಅಟೋದಲ್ಲಿ ಆಗಮಿಸಿದ ವಿಲ್ಯಮ್ ಪತ್ನಿ ಬ್ಲಾಸಂಳನ್ನು ಕಡಿದು ಕೊಲೆಮಾಡಿ ನಾಪತ್ತೆಯಾಗಿದ್ದನ್ನು ಬಳಿಕ ಮಧ್ಯರಾತ್ರಿ ಪೋಲಿಸರಿಗೆ ಶರಣಾಗಿ, ತನ್ನ ಪತ್ನಿಯ ಅನೈತಿಕ ಸಂಬಂಧದ ಕಾರಣ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದ.


Spread the love

Exit mobile version