ಭಗವಂತನ ಭಕ್ತಿಯಿಂದ ಮಾನಸಿಕ ಮಾಲಿನ್ಯ ನಿವಾರಣೆ : ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ

Spread the love

ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದಾಗ ಎಲ್ಲಾ ಪಾಪಗಳು ನಾಶವಾಗುತ್ತವೆ. ಭಗವಂತನ ಭಕ್ತಿಯಿಂದ ಮಾನಸಿಕ ಮಾಲಿನ್ಯ ನಿವಾರಣೆಯಾಗಿ ಮನದಲ್ಲಿ ಭಗವಂತನ ಸಾನ್ನಿಧ್ಯ ನೆಲೆಯಾಗುತ್ತದೆ. ಮನಸ್ಸು ಪವಿತ್ರವಾಗುತ್ತದೆ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.

BhajanaKammata_dharmastala 11-10-2015 22-41-22 BhajanaKammata_dharmastala 11-10-2015 22-41-33 BhajanaKammata_dharmastala 11-10-2015 22-41-38 BhajanaKammata_dharmastala 11-10-2015 22-41-57 BhajanaKammata_dharmastala 11-10-2015 22-42-11 BhajanaKammata_dharmastala 11-10-2015 22-42-24 BhajanaKammata_dharmastala 11-10-2015 22-42-40 BhajanaKammata_dharmastala 11-10-2015 22-42-50

ಧರ್ಮಸ್ಥಳದಲ್ಲಿ ಭಾನುವಾರ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಾನಸಿಕ ಮಾಲಿನ್ಯ ತಡೆಯಲು ಪ್ರತಿಕ್ಷಣವೂ ಭಗವಂತನ ನಾಮಸ್ಮರಣೆ ಮಾಡಬೇಕು. ಭಗವಂತನ ಭಕ್ತಿ ಮಾಡದ ಮನಸ್ಸು ಆವರಣ ಇಲ್ಲದ ಖಾಲಿ ನಿವೇಶನ ಒತ್ತುವರಿಯಾದಂತೆ ಮನಸ್ಸು ಅರಿಷಡ್ವರ್ಗಗಳಿಂದ ಒತ್ತುವರಿಯಾಗಿ ಮಾನಸಿಕ ಮಾಲಿನ್ಯ ಉಂಟಾಗುತ್ತದೆ. ಮನಸ್ಸು ತನ್ನ ಸ್ವಂತಿಕೆ ಕಳೆದುಕೊಂಡು ಚಂಚಲವಾಗುತ್ತದೆ. ನಿತ್ಯವೂ ಭಗವಂತನ ನಾಮಸ್ಮರಣೆ ಮಾಡುವುದರಿಂದ ಮನಸ್ಸು ಪವಿತ್ರವಾಗಿ ಜೀವನ ಪಾವನವಾಗುತ್ತದೆ ಎಂದು ಅವರು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖಿ ಸಮಾಜ ಸೇವೆಯನ್ನು ಶ್ಲಾಘಿಸಿ ಅವರು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಕ್ತರಲ್ಲಿ ದೃಢವಾದ ಭಕ್ತಿ ಮತ್ತು ನಂಬಿಕೆ ಬೆಳೆಸುವುದೇ ಭಜನಾ ತರಬೇತಿ ಕಮ್ಮಟದ ಉದ್ದೇಶವಾಗಿದೆ. ಏಕಾಗ್ರತೆಯಿಂದ, ಶ್ರದ್ಧಾ-ಭಕ್ತಿಯಿಂದ ಭಗವಂತನ ಮತ್ತು ಗುರುಗಳ ಆರಾಧನೆ ಮಾಡಿದರೆ ಅವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಅವರು ಹೇಳಿದರು.
ಈ ವರ್ಷ ಪ್ರತಿ ಭಜನಾ ಮಂಡಳಿಯವರು 50 ಮನೆಯವರಿಗೆ ಭಜನಾ ತರಬೇತಿ ನೀಡಿ ಜಾಗೃತಿ ಮೂಡಿಸಲಿದ್ದಾರೆ ಎಂದು ಪ್ರಕಟಿಸಿದರು.
ಶಂಕರ ಟಿ.ವಿಯ ಆಡಳಿತ ನಿರ್ದೇಶಕ ಹರಿಕೃಷ್ಣ ಶುಭಾಶಂಸನೆ ಮಾಡಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.
ಒಂದು ವಾರ ನಡೆದ ಭಜನಾ ತರಬೇತಿ ಕಮ್ಮಟದಲ್ಲಿ 109 ಭಜನ ಮಂಡಳಿಗಳ 154 ಮಂದಿ ಪುರುಷರು ಮತ್ತು 55 ಮಂದಿ ಮಹಿಳೆಯರು ಭಾಗವಹಿಸಿದರು.


Spread the love