Home Mangalorean News Kannada News ಭಟ್ಕಳ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

ಭಟ್ಕಳ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

Spread the love

ಭಟ್ಕಳ: ಕೊಂಕಣಿ ಭಾಷೆ ಮಾತನಾಡುವ 41 ಸಮುದಾಯದ ಜನ ತಮ್ಮ ತಮ್ಮಲ್ಲಿ ಧರ್ಮ, ರಾಜಕೀಯ, ಜಾತಿ ವಿಷಯದಲ್ಲಿ ವೈಷಮ್ಯ ತೋರಬಾರದು. ಹಾಗದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಭಾಷೆಗೆ ಮಾತ್ರವಲ್ಲ ನಮ್ಮ ಉಳಿವಿಗೂ ಸಂಚಕಾರ ಬರುವದರಲ್ಲಿ ಸಂದೇಹವಿಲ್ಲ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಹೇಳಿದರು.

06-03-2016-konkani-acadamy-award

ಅವರು ಭಾನುವಾರ ಇಲ್ಲಿನ ನಾಗಯಕ್ಷೇ ಸಭಾಭವನದಲ್ಲಿ ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುಸ್ತಕ ಬಹುಮಾನ ಯುವ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಅಂದಿನ ಬ್ರೀಟಿಷರ ಒಡೆದು ಆಳುವ ನೀತಿ ಇಂದು ನಮ್ಮನ್ನು ಜಾತಿ, ಧರ್ಮ, ರಾಜಕೀಯವಾಗಿ ಬೆರ್ಪಡಿಸುತ್ತಿದೆ. ಇದರಿಂದ ನಮ್ಮಲ್ಲೆ ಬಿನ್ನಾಭಿಪ್ರಾಯ ತಲೆದೂರಿ ಪರಸ್ಪರ ದ್ವೇಷಬಾವನೆ ಬೆಳೆಯುತ್ತಿದೆ. 41 ಸಮುದಾಯಗಳು ಒಂದಾಗಿ ಶ್ರಮಿಸಿದರೆ ಬಲಿಷ್ಠ ಭಾರತದ ಬದ್ರಬುನಾದಿಗೆ ಇದು ಒಂದು ಕೊಡುಗೆಯಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಮಂಕಾಳ ವೈದ್ಯ ಮಾತನಾಡಿ ಕೊಂಕಣಿ ಒಂದೆ ಬಾಷೆ ಮಾತನಾಡುವ 3 ಧರ್ಮದ 41 ಸಮುದಾಯಗಳು ನಮ್ಮಲಿರುವದು ವಿವಿಧತೆಯಲ್ಲಿ ಏಕತೆಯನ್ನು ತೋರುತ್ತಿದೆ. ಸರ್ಕಾರ ಭಾಷೆ ಸಂಸ್ಕøತಿ ಅಭಿವೃದ್ಧಿಗಾಗಿ ಈ ಬಾರಿ 5 ಕೋಟಿ ಬಿಡುಗಡೆ ಮಾಡಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಂಗ್ಯೋ ಐಸ್ ಕ್ರೀಮನ ನಿರ್ದೇಶಕ ಪ್ರದೀಪ ಪೈ 1992ರಲ್ಲಿ ಕೊಂಕಣಿ ಬಾಷೆಗೆ ರಾಷ್ಟ್ರೀಯ ಬಾಷೆಯ ಮಾನ್ಯತೆ ದೊರಕಿದೆ. ಕೊಂಕಣಿ ಬಾಷಿಗರ ಕೌಶಲ್ಯ ವೃದ್ಧಿಗಾಗಿ ವಿವಿಧ ಯೋಜನೆಗಳ ಕುರಿತು ತಿಳಿಸಿ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು. ಇನ್ನೋರ್ವ ಗಣ್ಯ ಸಿ.ಎ.ಕಲೀಲ್ ಮಾತನಾಡಿ ನಮ್ಮ ನಮ್ಮಲ್ಲಿ ವಿಷ ಬೀಜ ಬಿತ್ತುವವರನ್ನು ಕಡೆಗಣಿಸಿದಲ್ಲಿ ಮುಂದಿನ 10 ವರ್ಷಗಳಲ್ಲಿ ಭಾರತ ಸುಪರ್‍ಪವರ್ ರಾಷ್ಟ್ರವಾಗಲಿದೆ ಎಂದರು.
ಬೆಳಿಗ್ಗೆ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ಕಾರ್ಯಕ್ರಮ, ಸಂಜೆ 4 ಕ್ಕೆ ಅಂಜುಮನ್ ಗ್ರೌಂಡನಿಂದ ಹೊರಟು ನಾಗಯಕ್ಷೇ ಸಭಾಭವನದ ವರೆಗೆ ವೈಭವದ ಸಾಂಸ್ಕøತಿಕ ಕಾರ್ಯಕ್ರಮ ಮೆರವಣಿಗೆ ನಡೆಯಿತು. ನಂತರ ವಿವಿದ ಕಲಾಪಂಗಡದವರಿಂದ ವೈವಿದ್ಯಮಯ ಜಾನಪದ ಪ್ರದರ್ಶನ ಜನಮನಸೂರೆಗೊಂಡಿತು .
ಸನ್ಮಾನಿತರು:ಸಾಹಿತ್ಯದಲ್ಲಿ ರಾಮಚಂದ್ರ ಎಂ. ಶೇಟ್, ಕಲೆಯಲ್ಲಿ ಕಾಸಗೋಡು ಚಿನ್ನಾ, ಜಾನಪದದಲ್ಲಿ ಆಲೂ ಪೀಲೂ ಮರಾಠಿ. ಒಂ ಗಣೇಶ ಉಪ್ಪುಂದ, ರೊನಿ ಅರುಣ್, ಫಾ. ಡೆನಿಸ್ ಕ್ಯಾಸ್ತಲಿನೊ, ನೃತ್ಯ ಕು. ಅಂಜಲಿ ವಿಲ್ಸನ್ ವಾಜ್, ನಸ್ರುಲ್ಲಾ ಆಸ್ಕೇರಿ, ರಾಜರಾಮ ಪ್ರಭು, ಎಸ್.ಎಂ ಕಲೀಲ್, ಪ್ರದೀಪ್ ಜಿ.ಪೈ, ಜಾರ್ಜ ಫರ್ನಾಂಡಿಸ್ ಇವರನ್ನು ಶಾಸಕ ಮಂಕಾಳ ವೈದ್ಯ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಸನ್ಮಾನಿಸಿ ಗೌರವಿಸಿದರು.
ಝೇಂಕಾರ ಮೆಲೋಡಿಸ್‍ನ ಪ್ರಸನ್ನ ಪ್ರಭು ತಂಡದಿಂದ ನಾಡಗೀತೆ, ರಾಮಚಂದ್ರ ಶೇಟ್ ಸ್ವಾಗತ ಗೀತೆ ಹಾಡಿದರು. ಡಾ. ಅರವಿಂದ ಶ್ಯಾನಭಾಗ್, ಅಶೋಕ ಕಾಸರಕೋಡು, ಚೆತನ ಎಸ್ ನಾಯಕ, ಕಮಲಾಕ್ಷ ಶೇಟ್, ಶೇಖರ ಗೌಡ, ಶಿವಾನಂದ ಶೇಟ್, ಮಮತಾ ಕಾಮತ, ಯಾಕೂಬ್ ಅಹ್ಮದ್, ಡಾ. ವಾರಿಜ ನಿರ್ಬೈಲ್, ಲಾರೆನ್ಸ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ ಇದೆ 6ಬಿಕೆಎಲ್3 ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುಸ್ತಕ ಬಹುಮಾನ ಯುವ ಪುರಸ್ಕಾರ ಪ್ರಧಾನ ಸಮಾರಂಭವನ್ನು ಭಟ್ಕಳ ಶಾಸಕ ಮಂಕಾಳ ವೈದ್ಯ ಡೂಲು ಹೊಡೆಯುವ ಮೂಲಕ ಉದ್ಗಾಟಿಸಿದರು.


Spread the love

Exit mobile version