ಭತ್ತ ಬೆಂಬಲ ಖರೀದಿ ಅಕ್ಟೋಬರ್ 17ರಿಂದ- ಜಿಲ್ಲಾಧಿಕಾರಿ

Spread the love

ಭತ್ತ ಬೆಂಬಲ ಖರೀದಿ ಅಕ್ಟೋಬರ್ 17ರಿಂದ- ಜಿಲ್ಲಾಧಿಕಾರಿ

ಉಡುಪಿ: ರೈತರ ಹಿತವನ್ನು ಗಮನದಲ್ಲಿರಿಸಿ ಭತ್ತಕ್ಕೆ ಬೆಂಬಲ ಬೆಲೆ ನೀಡಲು ಅಕ್ಟೋಬರ್ 17 ರಿಂದ ಮೂರು ತಾಲೂಕಿನ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ ವೆಂಕಟೇಶ್ ಹೇಳಿದರು.

ಅವರಿಂದು 2016-17ನೇ ಸಾಲಿನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿರುವ ಆಧಾರದ ಮೇಲೆ ಭತ್ತ ಖರೀದಿ ಕೇಂದ್ರ ಸ್ಥಾಪನೆ ಸಂಬಂಧ ಪೂರ್ವಸಿದ್ದತೆ ಮಾಡಿಕೊಳ್ಳಲು ಜಿಲ್ಲಾ ಟಾಸ್ಕ್ ಫೋಸ್ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಸಮಿತಿ ಸಭೆಯಲ್ಲಿ ಮೇಲ್ಕಂಡಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ರೈತರು ಈ ಸೌಕರ್ಯದ ಪ್ರಯೋಜನ ಪಡೆಯುವಂತೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಉಪನಿರ್ದೇಶಕ ಯೋಗೇಶ್ವರ ಅವರು ಗೋಡೌನ್‍ಗಳನ್ನು ಒದಗಿಸಲು ಕೃಷಿ ಮಾರುಕಟ್ಟೆ ಮಂಡಳಿಯವರಿಗೆ ಸೂಚಿಸಿದರಲ್ಲದೆ, ಕೃಷಿ ಇಲಾಖೆಯವರು ಖರೀದಿ ಕೇಂದ್ರಗಳಲ್ಲಿ ತಮ್ಮ ಅಧಿಕಾರಿಗಳನ್ನು ನಿಯೋಜಿಸಲು ಸೂಚಿಸಿದರು. ರೈತರು ಭತ್ತವನ್ನು ತರುವ ವೇಳೆ ತೇವಾಂಶ 17 ಶೇಕಡ ಕ್ಕಿಂತ ಕಡಿಮೆ ಇರಬೇಕು. ಗುಣಮಟ್ಟದಲ್ಲಿ ಕಲ್ಮಶಗಳು ಒಂದು ಶೇಕಡ ಗರಿಷ್ಟವಿರಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹೇಳಿದರು. ಜೊಳ್ಳು ಗರಿಷ್ಟ 4 ಶೇಕಡವಿರಬಹುದು ಎಂಬ ಮಾಹಿತಿಯನ್ನು ನೀಡಿದರು.

ಹಾಪ್‍ಕಾಮ್ಸ್ ವ್ಯವಸ್ಥಾಪಕ ಪ್ರದೀಪ್ ಡಿ ಸೋಜಾ ಮಾತನಾಡಿ, ತೆಂಗಿನ ಬೆಂಬಲ ಬೆಲ ಖರೀದಿಯಡಿ 232 ಕ್ವಿಂಟಾಲ್ ನ್ನು ರೈತರಿಂದ ಖರೀದಿಸಲಾಗಿದೆ ಎಂಬ ಮಾಹಿತಿ ನೀಡಿದರು. ಕೆ ಎಸ್ ಎಫ್ ಸಿ ಡಿಡಿ ಜಯಪ್ಪ ಅವರು, ಮಾಯಿಸ್ಚರ್ ಮೀಟರ್‍ಗಳನ್ನು ಎಲ್ಲ ಕೇಂದ್ರಗಳಲ್ಲಿ ಒದಗಿಸುವುದಾಗಿ ತಿಳಿಸಿದರು. ಕೃಷಿ ಮಾರಾಟ ಮಂಡಳಿಯವರು ಉಪಸ್ಥಿತರಿದ್ದರು.


Spread the love