Home Mangalorean News Kannada News ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ – ಎಸ್.ಎಸ್ ದಸಿಲ್ಲ 

ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ – ಎಸ್.ಎಸ್ ದಸಿಲ್ಲ 

Spread the love

ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ – ಎಸ್.ಎಸ್ ದಸಿಲ್ಲ 

ಮೂಡುಬಿದಿರೆ: ‘ದೇಶದ ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ” ಎಂದು ಕೋಸ್ಟ್‍ಗಾರ್ಡ ಕಮಾಂಡರ್ ಡಿ.ಜಿ.ಐ ಎಸ್.ಎಸ್ ದಸಿಲ್ಲ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ರೋಷ್ಟ್ರಮ್ ವೇದಿಕೆ ಅಡಿಯಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಭದ್ರತೆ ಎನ್ನುವಂತದ್ದು ಒಂದು ದೇಶದ ಅಭಿವೃದ್ದಿಯ ಮೂಲ ತಳಹದಿ. ದೇಶದ ಭದ್ರತೆ ಪ್ರತಿಯೊಬ್ಬ ಪ್ರಜೆಯ ಭದ್ರತೆಯ ಮೇಲು ನಿಗವಹಿಸುದಾಗಿರುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ದೇಶದ ಸುಭದ್ರತೆಯನ್ನು ಹಾಳುಮಾಡಲು ಯುವಜನರನ್ನು ಉಪಕರಣವಾಗಿ ಬಳಸಿ ಇವರನ್ನು ಗಾಂಜ, ಅಫೀಮುಗಳಂತಹ ಅಮಲು ಪದಾರ್ಥಗಳ ದಾಸರನ್ನಾಗಿ ಮಾಡುತ್ತಿರುವುದು ಕಳವಳಕಾರಿ ಸಂಗತಿ. ದೇಶ ಸೇವೆಯನ್ನು ನಾವು ಸೇನೆಯ ಮೂಲಕವೇ ಮಾಡಬೇಕೆಂದಿಲ್ಲ. ಬದಲಾಗಿ ನಾವು ಮಾಡುವ ಕೆಲಸ ದೇಶದ ಹಿತಾಸಕ್ತಿಯ ಉದ್ದೇಶವನ್ನು ಹೊಂದಿದ್ದರೆ ಸಾಕು. ಅಲ್ಲದೆ ದೇಶದ ಬಾಹ್ಯ ಭದ್ರತೆ ಎಷ್ಟು ಮುಖ್ಯವೋ ಹಾಗೆಯೆ ಆಂತರಿಕ ಭದ್ರತೆಯು ಅಷ್ಟೇ ಮುಖ್ಯ.

ಕಲಿಕೆ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಮಂತ್ರವಾಗಿರಬೇಕು. ನಮ್ಮಲ್ಲಿರುವ ಪ್ರತಿಭೆಯನ್ನ ಸಮಾಜಮುಖಿ ಕಾರ್ಯದಲ್ಲಿ ಉಪಯೋಗಿಸಿಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರವ್ ಶೆಟ್ಟಿ ನಿರೂಪಿಸಿದರು.


Spread the love

Exit mobile version