ಭಾರತೀಯ ಕಥೊಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯ – ಡಯಾಫರೆನ್ಸ್ – 2018
ಮಂಗಳೂರು: ಭಾರತೀಯ ಕಥೊಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯದ ಕೇಂದ್ರಿಯ ಸಮಿತಿಯು, ಐಸಿವೈಎಮ್ ಕಿನ್ನಿಗೋಳಿ ವಲಯದ ಸಹಯೋಗದೊಂದಿಗೆ 11.02.2018 ಆದಿತ್ಯವಾರದಂದು “ಡಯಾಫರೆನ್ಸ್ – 2018”ಎಂಬ ಕಾರ್ಯಕ್ರಮವನ್ನು ಪಕ್ಷಿಕೆರೆ ಧರ್ಮಕೇಂದ್ರದಲ್ಲಿ ಹಮ್ಮಿಕೊಂಡಿದೆ. “ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕ್ರಿಸ್ತನಿಗೆ ಸಾಕ್ಷಿಕೊಡುವ ಯುವಜನರು” ಎಂಬ ವಿಷಯದ ಮೇಲೆ ಅಧಿವೇಶನವನ್ನು ನಡೆಸಲಾಗುವುದು. ಮಂಗಳೂರು ಧರ್ಮಪ್ರಾಂತ್ಯದ 117 ಧರ್ಮಕೇಂದ್ರಗಳಿಂದ ಸರಿಸುಮಾರು 2000 ಯುವಜನರು ಈ ಯುವಸಮ್ಮೇಳನದಲ್ಲಿ ಭಾಗವಹಿಸುವರು. ಬೆಳಿಗ್ಗೆ 8.45 ಗಂಟೆಗೆ ಪಕ್ಷ್ಷಿಕೆರೆ ಬಸ್ಸು ತಂಗುದಾಣದಿಂದ ಪಕ್ಷಿಕೆರೆ ಚರ್ಚ್‍ಗೆ ಶಾಂತಿ ನಡಿಗೆಯು ಆರಂಭಗೊಳ್ಳುವುದು.ವಂದನೀಯ ಸ್ವಾಮಿ ಆಂಡ್ಯ್ರು ಲಿಯೊ ಡಿ’ಸೋಜ ಈ ಶಾಂತಿ ನಡಿಗೆಗೆ ಚಾಲನೆ ನೀಡುವರು.9.30 ಗಂಟೆಗೆ ಉದ್ಘಾಟನಾ ಸಮಾರಂಭವನ್ನು ನಡೆಸಲಾಗುವುದು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಡಿ’ಸೋಜರವರು ವಹಿಸುವರು. ಮುಖ್ಯ ಅತಿಥಿಯಾಗಿ ಅನಿವಾಸಿ ಉದ್ಯಮಿ ಶ್ರೀ ಜೇಮ್ಸ್ ಮೆಂಡೊನ್ಸಾರವರು ಉಪಸ್ಥಿತರಿರುವರು. ಕಿನ್ನಿಗೋಳಿ ವಲಯದ ವಂದನೀಯ ಗುರು ವಿನ್ಸೆಂಟ್ ಮೊಂತೇರೊ, ವಂದನೀಯ ಸ್ವಾಮಿ ಚೇತನ್ ಮಚಾದೊ , ವಂದನೀಯ ಸ್ವಾಮಿ ಅನಿಲ್ ಡೆಸಾ ಕರ್ನಾಟಕ ಪ್ರಾಂತ್ಯದ ಯುವ ನಿದೇಶಕರು,ರೈಮಂಡ್ ಡಿ’ಸೋಜ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸುವರು. ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶಕರಾದವಂದನೀಯ ಸ್ವಾಮಿ ರೊನಾಲ್ಡ್ ಪ್ರಕಾಶ್ ಡಿ’ಸೋಜ, ಐಸಿವೈಎಮ್ ಕೇಂದ್ರಿಯ ಸಮಿತಿಯ ಅಧ್ಯಕ್ಷ ಶ್ರೀ ಎಲ್‍ರೊಯ್ ಸಲ್ಡಾನ್ಹಾ, ಕಾರ್ಯದರ್ಶಿ ಶ್ರೀ ಜೊಯೆಲ್ ಕೊನ್ಸೆಸೊ, ಕೇಂದ್ರಿಯ ಸಮಿತಿಯ ಸದಸ್ಯರ ಮುಂದಾಳತ್ವದಲ್ಲಿ ಹಾಗೂ ಕಿನ್ನಿಗೋಳಿ ವಲಯದ ಐಸಿವೈಎಮ್ ನಿರ್ದೇಶಕರಾದ ವಂದನೀಯ ಸ್ವಾಮಿ ಕ್ಲಿಫರ್ಡ್ ಪಿಂಟೊ, ಐಸಿವೈಎಮ್ ವಲಯ ಅಧ್ಯಕ್ಷೆ ಕು|ಪ್ರೀಮಾ ಪಿಂಟೊ, ಕಾರ್ಯದರ್ಶಿ ಕು|ಜೆನಿಫರ್ ಸಲ್ಡಾನ್ಹಾಹಾಗೂ ಐಸಿವೈಎಮ್ ವಲಯ ಸಮಿತಿ ಇವರ ಸಹಯೋಗದೊಂದಿಗೆ ಪಕ್ಷಿಕೆರೆ ಧರ್ಮಕೇಂದ್ರದಲ್ಲಿ “ಡಯಾಫರೆನ್ಸ್ – 2018” ಕಾರ್ಯಕ್ರಮವು ನಡೆಯಲಿರುವುದು. ಈ ಒಂದು ದಿನದ ಕಾರ್ಯಕ್ರಮದಲ್ಲಿ, ಅಧಿವೇಶನ, ವಿಚಾರವಿನಿಮಯ, ಚರ್ಚಾಕೂಟ, ಬಲಿಪೂಜೆ, ಕೊಂಕಣಿ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿರುವುದು.