ಭಾರತೀಯ ಸಾಮಾಜಿಕ ವೇದಿಕೆ -ಕರ್ನಾಟಕ ವಿಭಾಗ ಮಸ್ಕತ್ ವತಿಯಿಂದ ಕರ್ನಾಟಕದ ರಾಜ್ಯೋತ್ಸವ

Spread the love

ಭಾರತೀಯ   ಸಾಮಾಜಿಕ  ವೇದಿಕೆ – ಕರ್ನಾಟಕ ವಿಭಾಗ ಮಸ್ಕತ್  ವತಿಯಿಂದ  ಕರ್ನಾಟಕದ ರಾಜ್ಯೋತ್ಸವ

ಮಸ್ಕತ್: ಭಾರತೀಯ   ಸಾಮಾಜಿಕ  ವೇದಿಕೆ -ಕರ್ನಾಟಕ ವಿಭಾಗದ  ವತಿಯಿಂದ  ಕರ್ನಾಟಕದ ರಾಜ್ಯೋತ್ಸವ ಸಮಾರಂಭಕ್ಕೆ  ದಿನಗಣನೆ    ಆರಂಭವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ತಮ್ಮ  ನಾಡಿನಿಂದ ದೂರವಿರುವ  ಕನ್ನಡಿಗರೆಲ್ಲರೂ  ಒಟ್ಟಾಗಿ ಒಗ್ಗಟ್ಟಿನಿಂದ   ಕರ್ನಾಟಕ ಉತ್ಸವವನ್ನು  ಇಲ್ಲಿನ ಅಲ್  ಫಲಾಜ್  ಸಭಾಂಗಣದಲ್ಲಿ    ಆಚರಿಸುವುದೆಂದು ನಿರ್ಧರಿಸಲಾಗಿದೆ.  ಅದಲ್ಲದೆ    ಕರ್ನಾಟಕದ    ಹೆಸರಾಂತ  ವ್ಯಕ್ತಿಯೋರ್ವರನ್ನು ಮಸ್ಕತ್   ಕರ್ನಾಟಕದ ಸಂಘದ  ಪರವಾಗಿ  ಸನ್ಮಾನಿಸುವ   ಹೆಗ್ಗಳಿಕೆಯೂ ಕೂಡ ಕರ್ನಾಟಕದ ಸಂಘದ  ಪಾಲಾಗಲಿದೆ.

ಕನ್ನಡ ರಾಜ್ಯೋತ್ಸವ ಎಲ್ಲ ಕನ್ನಡಿಗರಿಗೂ ಒಂದು ಸಂತಸದ ಸಂದರ್ಭ. ತಮ್ಮ ದೇಶ ಹಾಗೂ ರಾಜ್ಯದಿಂದ ದೂರದಲ್ಲಿರುವ  ಕನ್ನಡಿಗರೆಲ್ಲರಿಗೂ  ಇದು ತಮ್ಮ ನಾಡು   ಕರ್ನಾಟಕ  ರಾಜ್ಯ  ರೂಪುಗೊಂಡ ಸಂತಸ  ಹಾಗೂ ತಮ್ಮ ಮಕ್ಕಳಿಗೆ ನಮ್ಮ ನಾಡಿನ ಹಿರಿಮೆಯನ್ನು ತಿಳಿಸುವ ಸದವಕಾಶ.

“ಎಲ್ಲಾದರೂ ಇರು ಎಂತಾದರೂ ಎಂತಾದರೂ ಇರು ಎಂದೆಂದಿಗೂ  ನೀ ಕನ್ನಡಿಗನಾಗಿರು ” ಎನ್ನುವ ಕವಿವಾಣಿಯಂತೆ  ಮಸ್ಕಿತ್ತಿನಲ್ಲಿದ್ದೂ ಇಲ್ಲಿನ ಕನ್ನಡಿಗರಿಗೆ ಕನ್ನಡಮಯ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮಸ್ಕತ್ ಕರ್ನಾಟಕ ಸಂಘವು 61ನೆಯ ಕನ್ನಡ ರಾಜ್ಯೋತ್ಸವ ವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ‘ಕರ್ನಾಟಕ ಉತ್ಸವ – 2017’ ಕಾರ್ಯಕ್ರಮವನ್ನು ಇದೇ ನವೆಂಬರ್ ತಿಂಗಳ 24ರಂದು  ಮಸ್ಕತ್ತಿನ ಅಲ್ ಫಲಾಜ್ ಸಭಾಂಗಣದಲ್ಲಿ ಮಸ್ಕತ್ ಕನ್ನಡಿಗರಿಗಾಗಿ ಆಯೋಜಿಸಿದೆ.

ನಾಡಿನ ಹೆಸರಾಂತ ಬಹುಮುಖ ಪ್ರತಿಭೆಯ ಹಾಸ್ಯ ಕಲಾವಿದ, ಶ್ರೀ ಕೃಷ್ಣೇಗೌಡ, ಶ್ರೀ ನಾಗರಾಜ ಕೋಟೆ, ಸುಗಮ ಸಂಗೀತ ಸಾಮ್ರಾಜ್ನಿ ಎನಿಸಿದ ಶ್ರೀಮತಿ ರತ್ನಮಾಲ ಪ್ರಕಾಶ, ತಮ್ಮ ಇಂಪಾದ ಗಾಯನದಿಂದ ದೇಶ ವಿದೇಶಗಳ ಕನ್ನಡಿಗರ ಮನಗೆದ್ದ ಸೀಮಾ ರಾಯ್ಕರ್ ಹಾಗೂ ಶ್ರೀ ಪಂಚಮ ಹಳಿಬಂಡಿ,  ಕೀ ಬೋರ್ಡ್ ವಾದಕ ಶ್ರೀ ಕೃಷ್ಣ ಉಡುಪ, ತಬಲಾ ವಾದಕ ಮಧುಸೂದನ್ ಮತ್ತು ಪ್ರದ್ಯುಮ್ನ ಸೊರಬ- ಇವರೆಲ್ಲ ಕರ್ನಾಟಕ  ಉತ್ಸವವನ್ನು ಆಚರಿಸಲು ಮಸ್ಕತ್ತಿಗೆ ಕರ್ನಾಟಕದಿಂದ ಆಗಮಿಸುವ ಕಲಾವಿದರು.

 ಹಾಸ್ಯದ ಮತ್ತು ಸಂಗೀತದ ರಸದೌತಣ ಮಸ್ಕತ್ ಕನ್ನಡಿಗರಿಗಾಗಿ ಕಾಯುತ್ತಿದೆ.  ಈ ಕಾರ್ಯಕ್ರಮದ ಮುಖಾಂತರ ಕನ್ನಡ ರಾಜ್ಯೋತ್ಸವ ವನ್ನು ಅದ್ದೂರಿಯಾಗಿ ಆಚರಿಸಿ ಮಸ್ಕತ್ತಿನಲ್ಲಿ ಕನ್ನಡದ ತೇರನ್ನು ಯಶಸ್ವಿಯಾಗಿ ಎಳೆಯಲು  ಮಸ್ಕತ್ ಕರ್ನಾಟಕ ಸಂಘ   ಯಾವಾಗಲೂ  ಶ್ರಮಿಸಲಿದೆ  ಎನ್ನುವುದು ಇಲ್ಲಿನ ಎಲ್ಲ ಕನ್ನಡಿಗರ ಆಶಯ.


Spread the love
2 Comments
Inline Feedbacks
View all comments
Koni Prakash Naik, Muscat
7 years ago

ಮಸ್ಕತ್ತಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಕರ್ನಾಟಕ ಸಂಘ ಹಮ್ಮಿ ಕೊಂಡಿರುವ ಸಾಂಸ್ಕ್ರತಿಕ ಕಾರ್ಯಕ್ರಮ “ಕರ್ನಾಟಕ ಉತ್ಸವ” ಬಹಳ ಯಶಸ್ಸನ್ನ ಕಾಣಲಿ. ತಾಯ್ನಾಡಿನಿಂದ ಬಹುದೂರ ಈ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಸಹಸ್ರಾರು ಕನ್ನಡಿಗರಿಗೆ ಕನ್ನಡ ನಾಡಿನ ಸೊಂಪು, ತಂಪು, ಕಂಪು, ಇಂಪಿನ ಸೊಭಗನ್ನು ಆನಂದಿಸುವ ಸದವಕಾಶವಿದು. ಕರ್ನಾಟಕ ಸಂಘದ ಸದಸ್ಯರೆಲ್ಲರೂ ತುಂಬಾ ಕಾತರದಿಂದ ಈ ವೈವಿಧ್ಯಮಯ ಸೊಭಗಿನ ಸವಿಯನ್ನು ಸವಿಯಲು ದಿನ ಗಣನೆ ಮಾಡುತ್ತಾ ಬಹಳ ಕಾತರದಿಂದ ಕುತೂಹಲದಿಂದ ಕಾಯುತ್ತಾ ಇದ್ದಾರೆ. ಈ ಕರ್ನಾಟಕ ಉತ್ಸವಕ್ಕೆ ನಾನೊಬ್ಬ ಕನ್ನಡಿಗ ಮಾಡುವ ತುಂಬು ಹೃದಯದ ಶುಭ ಕಾಮನೆಗಳು ಹಾಗು ಇದನ್ನು ಆಯೋಜಿಸುತ್ತಿರುವ ಸಂಘದ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು. ಇದೆ ಸಮಯದಲ್ಲಿ ಒಮಾನ್ ಕೂಡ ತನ್ನ ರಾಷ್ಟ್ರೀಯ ದಿನವನ್ನು ಇದೆ ತಿಂಗಳ ದಿನಾಂಕ ೧೮ ರಂದು ವಿಜೃಂಭಣೆಯಿಂದ ಆಚರಿಸಲು ಸಿದ್ಧವಾಗಿದೆ. ಒಮಾನಿನಲ್ಲಿ ಒಟ್ಟಾರೆ ಈಗ ಹಬ್ಬದ ವಾತಾವರಣ. ಹಾಗಾಗಿ ಕರ್ನಾಟಕ ಸಂಘಕ್ಕೆ ಕನ್ನಡಿಗರಿಗೆ ಈ ಸಮಯದಲ್ಲಿ ಹಿಂದಿಯಲ್ಲಿ ಹೇಳಿದ ಹಾಗೆ ಇದೊಂದು “ಸೋನೇ ಪೆ… Read more »

Jaya Chabbi
7 years ago

ಮಸ್ಕತ್ ನ ಹೆಮ್ಮೆಯ ಕನ್ನಡಿಗರು ಕಾತುರದಿಂದ ಕಾಯುತ್ತಿರುವಂತಹ ಈ ” ಕನ್ನಡ ರಾಜ್ಯೋತ್ಸವ”ದ ಅದ್ದೂರಿ ಆಚರಣೆಯನ್ನು ನಾವೆಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಲು ಅಣಿಯಾಗಿದ್ದೇವೆ.