ಭಾರತ್ ಬಂದ್ ಜೆಡಿಎಸ್ ಸಂಪೂರ್ಣ ಬೆಂಬಲ
ಕೇಂದ್ರ ಸರಕಾರವು ದಿನನಿತ್ಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ದಿನನಿತ್ಯ ಹೆಚ್ಚಳ ಮಾಡುತ್ತಾ ಬಂದಿದ್ದು, ದಿನ ನಿತ್ಯ ಅಗತ್ಯ ಸಾಮಾಗ್ರಿಗಳ ಬೆಲೆ ಗಗನಕ್ಕೇರಿತ್ತಿದ್ದು ವಾಹನ ಮಾಲೀಕರು ಹಾಗೂ ಜನ ಸಾಮಾನ್ಯರು ಬದುಕಲು ಅಸಾಧ್ಯವಾಗಿದೆ. ಈ ಪ್ರಯುಕ್ತ ಸೆಪ್ಟೆಂಬರ್ 10 ರಂದು ಪ್ರಗತಿ ಪರ ಸಂಘಟನೆಗಳು ನೀಡಿರುವ ಭಾರತ ಬಂದ್ಗೆ ಸಂಪೂರ್ಣ ಸಹಕಾರ ನೀಡಿ ಅ ದಿನ ಬೆಳಿಗ್ಗೆ 10.00 ರಿಂದ ಸಂಜೆ 5.00 ರ ತನಕ ನಡೆಯುವ ಹಂಪನಕಟ್ಟೆ ಸಿಗ್ನಲ್ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಗೆ ನಡೆಯುವ ಜಾಥಾ ಹಾಗೂ ಪ್ರತಿಭಟನೆಗೆ ಜಿಲ್ಲಾ ಜೆಡಿಎಸ್ ಸಂಪೂರ್ಣ ಬೆಂಬಲ ಘೋಷಿಸಿದೆ.
ಜಿಲ್ಲೆಯ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ಜೆಡಿಎಸ್ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞ, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ರಾಜ್ಯ ಉಪಾಧ್ಯಕ್ಷರಾದ ಎಂ.ಬಿ ಸದಾಶಿವ, ಜಿಲ್ಲಾ ವಕ್ತಾರರಾದ ಸುಶೀಲ್ ನೊರೊನ್ಹಾ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ