ಭಾರತ ಪ್ರಕಾಶಿಸಲು ರಾಜೀವ್ ಗಾಂಧಿಯವರ ದೂರದೃಷ್ಟಿತ್ವ ಕಾರಣ: ಸತೀಶ್ ಅಮೀನ್
ಉಡುಪಿ: ರಾಜೀವ್ ಗಾಂಧಿಯವರು ಅಕಾಲಿಕವಾಗಿ ಪ್ರಧಾನಿ ಪಟ್ಟವನ್ನು ಗಳಿಸಿದ್ದರೂ ಅವರ ದೂದೃಷ್ಟಿತ್ವದ ಯೋಜನೆಗಳಿಂದ ಭಾರತ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಕಾರಣವಾಗಿದೆ ಎಂದು ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿಯ ಸಂದರ್ಭ ಉಡುಪಿ ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆಯವರು ಹೇಳಿದರು.
ರಾಜೀವ್ ಗಾಂಧಿಯವರು 18 ವರ್ಷದ ಯುವ ಜನತೆಗೆ ಮತದಾನದ ಹಕ್ಕನ್ನು ನೀಡುವ ಮೂಲಕ ದೇಶವನ್ನು ಕಟ್ಟುವ ಪ್ರಜ್ಞೆಯನ್ನು ಮೂಡಿಸಿದ್ದರು. ಹಾಗೆಯೇ ದೇಶದ ಅಭಿವೃದ್ಧಿಗೆ ಪೂರಕವಾದ ಮಾಹಿತಿ ತಂತ್ರಜ್ಞಾನವನ್ನು ಪರಿಚಯಿಸಿದ ಕೀರ್ತಿ ರಾಜೀವ್ ಗಾಂಧಿಯವರಿಗೆ ಸಲ್ಲಬೇಕು. ಪಂಚಾಯತ್ ರಾಜ್ ತಿದ್ದುಪಡಿಯೊಂದಿಗೆ ಅಧಿಕಾರ ವಿಕೇಂದ್ರಿಕರಣಗೊಳಿಸಿ ತಳಮಟ್ಟದ ಸ್ಥಳಿಯ ಸಂಸ್ಥಗೆ ಹೆಚ್ಚಿನ ಅನುದಾನವನ್ನು ನೀಡುವಂತೆ ಮಾಡಿ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಕಾರಣೀಭೂತರಾದರು ಎಂದು ಕಾಂಗ್ರೆಸ್ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್‍ರವರು ರಾಜೀವ್ ಗಾಂಧಿಯವರ ದೂರದೃಷ್ಟಿತ್ವವನ್ನು ನೆನಪಿಸಿಕೊಂಡರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹರೀಶ್ ಕಿಣಿ, ಮೀನಾಕ್ಷಿ ಮಾಧವ ಬನ್ನಂಜೆ, ಭಾಸ್ಕರ್ ರಾವ್ ಕಿದಿಯೂರು, ಶಬ್ಬೀರ್ ಅಹ್ಮದ್, ಅಣ್ಣಯ್ಯ ಶೇರಿಗಾರ್, ಪೃಥ್ವಿರಾಜ್ ಶೆಟ್ಟಿ, ಹಬೀಬ್ ಆಲಿ, ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಸುಜಯ ಪೂಜಾರಿ, ಲೂಯಿಸ್ ಲೋಬೋ, ನವೀನ್ ಶೆಟ್ಟಿ, ಗಣಪತಿ ಶೆಟ್ಟಿಗಾರ್, ನಾರಾಯಣ್ ಕುಂದರ್, ನೀರಜ್ ಪಾಟೀಲ್, ಲಕ್ಷ್ಮಣ ಪೂಜಾರಿ, ಬಿ.ಕೆ. ಸೋಮನಾಥ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಧನ್ಯವಾದ ಸಲ್ಲಿಸಿದರು.