Home Mangalorean News Kannada News ಭಾರತ ಸೇವಾದಳದ ವತಿಯಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ

ಭಾರತ ಸೇವಾದಳದ ವತಿಯಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ

Spread the love

ಭಾರತ ಸೇವಾದಳದ ವತಿಯಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ

ಮಂಗಳೂರು : ಭಾರತ ಸೇವಾದಳ ಜಿಲ್ಲಾ ಸಮಿತಿ, ಮಂಗಳೂರು ತಾಲೂಕು ಸಮಿತಿ, ಜಿ.ಪಂ. ಶಾಲೆ ಮಲ್ಲಿಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಕ ಆಂದೋಲನ ಕಾರ್ಯಕ್ರಮವನ್ನು ಮಲ್ಲಿಕಟ್ಟೆಯಲ್ಲಿರುವ ಜಿ.ಪಂ. ಶಾಲೆಯಲ್ಲಿ ನಡೆಸಲಾಯಿತು.

 

ಈ ಸಂದರ್ಭದಲ್ಲಿ ಭಾರತ ಸೇವಾದಳದ ಅಧ್ಯಕ್ಷ ಶ್ರೀ ಬಶೀರ್ ಬೈಕಂಪಾಡಿಯವರು ಮಾತನಾಡುತ್ತಾ ಈಗಾಗಲೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿರುವುದರಿಂದ ಇದನ್ನು ಹೆಚ್ಚಿಸಲು ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಕೆಲವೊಂದು ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ ಪ್ರಾರಂಭಿಸಲಾಗಿದೆ. ಸರಕಾರಿ ಶಾಲೆಗಳಲ್ಲಿ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಅಕ್ಷರ ದಾಸೋಹ ಕಾರ್ಯಕ್ರಮ, ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ ಸಹಿತ ಹಲವಾರು ಕಾರ್ಯಕ್ರಮಗಳನ್ನು ಸರಕಾರ ನೀಡಿದೆ. ಇದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಭಾರತ ಸೇವಾದಳದ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಲ್ಲಿಕಟ್ಟೆ ಪ್ರದೇಶದ ಮುಖ್ಯ ರಸ್ತೆಗಳಲ್ಲಿರುವ ಅಂಗಡಿಗಳಿಗೆ ತರಳಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಪ್ರಚಾರ ನಡೆಸಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಸೇವಾದಳದ ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ತಾಲೂಕು ಉಪಾಧ್ಯಕ್ಷ ಪ್ರದೀಪ್ ಬೇಕಲ್, ಪ್ರೇಮ್ ಚಂದ್, ಮುಖ್ಯ ಸಂಘಟಕ ಮಂಜೇಗೌಡ, ಶಾಲೆಯ ಮುಖ್ಯೋಪಾಧ್ಯಾಯರಾದ ವಿನೋಲ ಸಿಲ್ವಿಯಾ ಪಿಂಟೋ ಶಿಕ್ಷಕಿಯರಾದ ಕುಮುಧಿನಿ, ಸುಚಿತಾ ನಾಯಕ್, ಅನ್ಸಿಲಾ ಮೀನಾ ಡೇಸಾ, ಡೋರಾ ಕಾರ್ಮಿಕ್ ಡಿ.ಸಿಲ್ವ, ಮಮತಾ ಎ, ಸವಿತಾ ಕೆ., ಪುಷ್ಪಾವತಿ, ಡೋರ್ತಿ ಜೆ.ಜೆ.ಪಾಯಸ್, ಜಯಂತಿ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.


Spread the love

Exit mobile version