Home Mangalorean News Kannada News ಭಾರತ ಸೇವಾದಳ ವತಿಯಿಂದ ಮಕ್ಕಳ ಭಾವೈಕ್ಯತಾ ಮೇಳ

ಭಾರತ ಸೇವಾದಳ ವತಿಯಿಂದ ಮಕ್ಕಳ ಭಾವೈಕ್ಯತಾ ಮೇಳ

Spread the love

ಭಾರತ ಸೇವಾದಳ ವತಿಯಿಂದ ಮಕ್ಕಳ ಭಾವೈಕ್ಯತಾ ಮೇಳ

ಮಂಗಳೂರು ತಾಲೂಕು ಭಾರತ ಸೇವಾ ದಳ ವತಿಯಿಂದ ನಗರದ ಕಪಿತಾನಿಯೋ ಶಾಲಾ ಮೈದಾನದಲ್ಲಿ ಮಕ್ಕಳ ಭಾವೈಕ್ಯತಾ ಮೇಳ ಜರಗಿತು.

ಸುಮಾರು 500 ಶಾಲಾ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಮೇಳವನ್ನು ಉದ್ಫಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರವೀಣಚಂದ್ರ ಆಳ್ವರವರು ಸೇವಾದಳದ ಸ್ಥಾಪಕರಾದ ಡಾ. ನಾ. ಸು. ಹರ್ಡೀಕರ್ ರವರು ಮಹಾತ್ಮಾ ಗಾಂಧೀಜಿಯವರ ಒಡನಾಡಿಯಾಗಿದ್ದರು. ಮಕ್ಕಳಿಗೆ ಹಾಗೂ ಯುವಕರಿಗೆ ಶಿಸ್ತು ಮೂಡಿಸುವ ಸಲುವಾಗಿ ಹರ್ಡೀಕರ್ ರವರು ಪ್ರಾರಂಭಿಸಿದ ಸೇವಾದಳವು, ರಾಜ್ಯಾದ್ಯಂತ ಹೆಚ್ಚಿನ ಶಾಲೆಯಲ್ಲಿ ಶಾಖೆಗಳನ್ನು ಹೊಂದಿದೆ. ಅವರ ಶಿಸ್ತಿನ ಜೀವನ ಎಲ್ಲಾ ಮಕ್ಕಳಿಗೆ ಆದರ್ಶವಾಗಲಿ ಎಂದರು.

ವಿಧಾನಪರಿಷತ್ ಸದಸ್ಯ ಹಾಗೂ ಸಂಸದೀಯ ಕಾರ್ಯದರ್ಶಿ ಐವನ್ ಡಿ.ಸೋಜ ರವರು ಭೇಟಿ ನೀಡಿ ಡಾ ಹರ್ಡಿಕರ್ ರವರು ದೇಶದ ಆದರ್ಶ ವ್ಯಕ್ತಿ. ಅವರು ಕಲಿಸಿದ ಶಿಸ್ತಿನ ಪಾಠ ಮಕ್ಕಳಿಗೆ ಮಾತ್ರವಲ್ಲದೆ, ದೇಶದ ಜನತೆಗೆ ದಾರಿದೀಪವಾಗಲಿ. ಎಲ್ಲಾ ವರ್ಗದ ಮಕ್ಕಳು ಒಟ್ಟು ಸೇರಿ ನಡೆಯುವಂತಹ ಈ ಒಂದು ಭಾವೈಕ್ಯತಾ ಮೇಳ ನಿಜವಾಗಿಯೂ ಅರ್ಥಪೂರ್ಣವಾಗಿದೆ. ಇಂದಿನ ಸಮಾಜಕ್ಕೆ ಅದು ಅತ್ಯಮೂಲ್ಯವಾಗಿದೆ ಎಂದರು.

ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿಯವರು ಧ್ವಜಾರೋಹಣಗೈದರು. ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್ ರವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಮೊಕ್ತೇಸರ ಸುರೇಶ್ ಕದ್ರಿ, ಬೋಳಾರ ಮುಖ್ಯಪ್ರಾಣ ದೇವಸ್ಥಾನದ ಅಧ್ಯಕ್ಷ ನವೀನ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗುರುಪ್ರವೀಣ್ ಭಟ್, ಶಾಲೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಸೆಲೀನಾ, ಸೇವಾದಳ ಕೇಂದ್ರೀಯ ಸಮಿತಿ ಸದಸ್ಯ ವಿ.ವಿ. ಪ್ರಾನ್ಸಿಸ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಸೇವಾದಳ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ತಾಲೂಕು ಉಪಾಧ್ಯಕ್ಷ ಉದಯ ಕುಂದರ್, ಜಿಲ್ಲಾ ಸಂಘಟಕ ಮಂಜೇಗೌಡ, ಕಾರ್ಪೊರೇಟರ್‍ಗಳಾದ ಆಶಾ ಡಿ.ಸಿಲ್ವ, ಕೇಶವ ಮರೋಳಿ, ಸುಮಯ್ಯ ಅಶ್ರಫ್, ಶಿಕ್ಷಣ ಪರಿವೀಕ್ಷPಗಳಾದÀ ವಿಷ್ಣು ಹೆಬ್ಬಾರ್, ಶ್ರೀಮತಿ ಆಶಾ, ಸಂಚಾರಿ ಪೊಲೀಸ್ ನಿರೀಕ್ಷಕ ಗುರುದತ್ ಕಾಮತ್, ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥ ದೇವೇಂದ್ರ, ತಾಲೂಕು ಕಾರ್ಯದರ್ಶಿ ಶ್ರೀಮತಿ ರೆಹನಾ ಬಜಾಲ್ ಮುಂತಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಮಾಧವ ಮಯ್ಯ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version