ಭಾವನೆಗಳ ಸಂವೇದನಾಶೀಲ ಅಭಿವ್ಯಕ್ತಿಗೆ ಭಾಷೆ ಅಗತ್ಯ : ಎಚ್.ಎಂ. ಮಹೇಶ್ವರಯ್ಯ
ಮಂಗಳೂರು: ಸ್ತಬ್ದವಾದ ಮೌಖಿಕತೆ ದೇಶಕ್ಕೆ ಬೌದ್ಧಿಕ ಬರ ತರುತ್ತದೆ. ಭಾಷೆಯ ನಾಶದಿಂದ ಬುದ್ದಿಶಕ್ತಿಯ ದಾಸ್ತಾನು ದುರ್ಬಲಗೊಳ್ಳುತ್ತದೆ. ಭವನೆಗಳ ಸಂವೇದನಾಶೀಲ ಅಭಿವ್ಯಕ್ತಿಗೆ ಭಾಷೆ ಅಗತ್ಯ. ಭಾಷಾ ಸಂವರ್ಧನೆ ಮೂಲಕ ಮುಂದಿನ ಪೀಳಿಗೆಗೆ ನಮ ಭಾಷೆಗಳನ್ನು ಉಳಿಸಬೇಕಿದೆ ಎಂದು ಕಲಬುರ್ಗಿಯ ಕರ್ನಾಟಕ ರಾಜ್ಯ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಎಚ್.ಎಂ. ಮಹೇಶ್ವರಯ್ಯ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ವಿಭಾಗ ವತಿಯಿಂದ ನಗರದ ಕೆನರಾ ಪದವಿ ಕಾಲೇಜು ಸೆಮಿನಾರ್ ಹಾಲ್ನಲ್ಲಿ ಭಾನುವಾರ ನಡೆದ ` ಭಾಷಾ ಸಂವರ್ಧನೆ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲದೆ ಇರುವ ಭಾಷಾ ವೈವಿಧ್ಯತೆ ನಮ್ಮ ದೇಶದಲ್ಲಿದೆ. ಭಾರತದಲ್ಲಿ 1650 ಭಾಷೆಗಳಿದ್ದವು ಎಂದು ಅಧ್ಯಯನವೊಂದು ಗುರುತಿಸಿತ್ತು. ಕಳೆದ 50 ವರ್ಷಗಳಲ್ಲಿ ದೇಶದ ಐದನೇ ಒಂದರಷ್ಟು ಭಾಷೆಗಳು ನಾಶ ಹೊಂದಿವೆ. ಪ್ರಸ್ತುತ 750 ಭಾಷೆಗಳು ಮಾತ್ರ ಜೀವಂತವಾಗಿವೆ. ಭಾಷೆಯ ಉಳಿವಿಗೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು, ಕೇಂದ್ರೀಯ ವಿದ್ಯಾಲಯ ಮೂಲಕ ಭಾಷೆಗಳ ದಾಖಲೀಕರಣ ಮಾಡಲಾಗುತ್ತಿದೆ. ಕರಾವಳಿಯ ಕೊರಗ, ಬೆಳಾರಿ ಭಾಷೆಗಳ ದಾಖಲೀಕರಣ ಮಾಡುತ್ತಿz್ದÉೀವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ನಮ್ಮದು ಬಹುಭಾಷಾ, ಸಂಸ್ಕøತಿಯ ದೇಶ. ಬಹುತ್ವದ ಆಚಾರ ವಿಚಾರಗಳು ವಿಶ್ವದಲ್ಲಿ ನಮ್ಮ ದೇಶಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿದೆ. ಸಂಸ್ಕøತ ನಮ್ಮ ದೇಶದ ಪ್ರಾಚೀನ ಮತ್ತು ಸನಾತನ ಭಾಷೆ. ಭಾರತದ ಎಲ್ಲ ಭಾಷೆಗಳ ಮೇಲೆ ಸಂಸ್ಕøತದ ಪ್ರಭಾವ ಇದೆ. ಭಾಷೆ ಜನಾನುರಾಗಿಯಾಗಲು, ಉಳಿಯಲು ಮಾಧ್ಯಮಗಳ ಪಾತ್ರವಿದೆ. ಆದರೆ, ಇಂದಿನ ಮಾಧ್ಯಮಗಳು ಭಾಷೆಯನ್ನು ಕೊಲ್ಲುತ್ತಿವೆ. ಪ್ರತಿ ವಾಕ್ಯದಲ್ಲೂ ಇಂಗ್ಲಿಷ್ ಬಳಕೆ ಮೂಲಕ ಕನ್ನಡಕ್ಕೆ ತೊಡಕುಂಟುಮಾಡುತ್ತಿವೆ. ಇವೆಂmõï ಮ್ಯಾನೇಜರ್ಗಳು, ಆ್ಯಂಕರ್ಗಳು ನಮ್ಮ ಭಾಷೆಯನ್ನು ಹಾಳು ಮಾಡುತ್ತಿದ್ದಾರೆ. ಕೆಲ ಸಿನೆಮಾಗಳೂ ಭಾಷೆಯನ್ನು ಕುಲಗೆಡಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಯಕ್ಷಗಾನ ಕನ್ನಡ ಭಾಷೆಯನ್ನು ಉಳಿಸುತ್ತಿದೆ. ಸಾಮರಸ್ಯದ ಬದುಕಿಗೆ ತುಳು ಭಾಷೆ ದೊಡ್ಡ ಕೊಡುಗೆ ನೀಡುತ್ತಿದೆ. ಶೈಕ್ಷಣಿಕ ಸಂಸ್ಥೆಗಳು ಹಣ ಮೀಸಲಿಟ್ಟು ದೇಶಿಯ ಭಾಷೆಗಳ ಉಳಿವಿಗೆ ಶ್ರಮಿಸಬೇಕು. ನ.15ರಿಂದ 18ರವರೆಗೆ ನಡೆಯುವ ಆಳ್ವಾಸ್ ನುಡಿಸಿರಿಯಲ್ಲಿ `ಕರ್ನಾಟಕ ದರ್ಶನ’ ಎಂಬ ಪರಿಕಲ್ಪನೆಯೊಂದಿಗೆ ಭಾಷೆಯನ್ನು ಪ್ರಮುಖ ವಿಚಾರವಾಗಿ ಇಟ್ಟುಕೊಂಡು ಚಿಂತನ ಮಂಥನ ನಡೆಸಲಾಗುವುದು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಅಖೀಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಭಾಷೆ ನಮಗೆ ಮಾತಸ್ಥಾನದಲ್ಲಿದೆ. ಸಾಮ್ರಾಜ್ಯಶಾಹಿ ಆಕ್ರಮಣದಿಂದ ನಮ್ಮ ಭಾಷೆಗಳು ಅಪಾಯದಂಚಿನಲ್ಲಿವೆ. ಮತಾಂತರ ಆದಾಗಲೂ ಭಾಷೆ ಸತ್ತು ಹೋಗುತ್ತದೆ. ಅಚ್ಚ ಕನ್ನಡ ಮಾತನಾಡುವ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಗೋಮಾಂಸ ತಿಂದು, ಭಯೋತ್ಪಾದಕರಿಗೆ ಬೆಂಬಲ ನೀಡಿದರೆ ಆತನಿಂದ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ಭಾರತೀಯ ಪ್ರಜ್ಞೆ ನಮ್ಮಲ್ಲಿ ಇದ್ದರೆ ದೇಶದ ಭಾಷೆಗಳು ಉಳಿಯುತ್ತವೆ ಎಂದರು.
ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ರಘುನಂದನ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭmõï ಉಪಸ್ಥಿತರಿದ್ದರು.
ಕಾರ್ಯಾಗಾರ ಸಂಚಾಲನಾ ಸಮಿತಿ ಅಧ್ಯಕ್ಷ ರಮೇಶ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಶೈಲೇಶ್ ವಂದಿಸಿದರು. ಉಪನ್ಯಾಸಕ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಗೋಷ್ಠಿ ನಡೆಯಿತು.