Home Mangalorean News Local News ಮಂಗಳಾದೇವಿ ದೇವಸ್ಥಾನದ ಜಾತ್ರೆ: ಮರುಂ ಏಲಂ ಪ್ರಕ್ರಿಯೆಗೆ ಹಿಂದೂ ಸಂಘಟನೆಗಳ ಆಕ್ರೋಶ

ಮಂಗಳಾದೇವಿ ದೇವಸ್ಥಾನದ ಜಾತ್ರೆ: ಮರುಂ ಏಲಂ ಪ್ರಕ್ರಿಯೆಗೆ ಹಿಂದೂ ಸಂಘಟನೆಗಳ ಆಕ್ರೋಶ

Spread the love

ಮಂಗಳಾದೇವಿ ದೇವಸ್ಥಾನದ ಜಾತ್ರೆ: ಮರುಂ ಏಲಂ ಪ್ರಕ್ರಿಯೆಗೆ ಹಿಂದೂ ಸಂಘಟನೆಗಳ ಆಕ್ರೋಶ

ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತೀ ವರ್ಷ ನಡೆಯುವ ಜಾತ್ರಾ ಸಂಧರ್ಭದಲ್ಲಿ, ದೇವಸ್ಥಾನ ಮುಂಭಾಗ ರಸ್ತೆಯ ಎರಡು ಬದಿಯಲ್ಲಿ ಸಂತೆ ವ್ಯಾಪಾರಕ್ಕ್ಕೆ ಅಂಗಡಿಗಳನ್ನು ನೂರಾರು ವರ್ಷಗಳಿಂದ ದೇವಸ್ಥಾನವೇ ಏಲಂ ಮೂಲಕ ವ್ಯಾಪಾರಸ್ಥರಿಗೆ ನೀಡಿಕೊಂಡು ಬರುವ ಸಂಪ್ರದಾಯ. ಅದರಂತೆ ಈ ಬಾರಿಯೂ ಕೂಡ ಏಲಂ ನಡೆದು ಸುಮಾರು 80 ವ್ಯಾಪಾರಸ್ಥರು ಅಂಗಡಿ ಪಡೆದಿರುತ್ತಾರೆ. ಆದರೆ ಇವತ್ತು ಬೀದಿ ಬದಿ ವ್ಯಾಪಾರಸ್ಥರ ಸಂಘ ಮರು ಏಲಂ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಇದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡಿಸುತ್ತದೆ.

ಸಂಪ್ರದಾಯ ಮುರಿದು ಮರು ಏಲಂ ನಡೆಸದಂತೆ ಹಾಗು ಹೆಚ್ಚುವರಿ ಅಂಗಡಿ ನೀಡದಂತೆ  ವಿಶ್ವ ಹಿಂದೂ ಪರಿಷತ್ ಬಜರಂಗದಳ ಮನವಿ ಮಾಡುತ್ತದೆ. ಒಂದು ವೇಳೆ ಸಂಪ್ರದಾಯ ಮುರಿದು  ಮರು ಏಲಂ ನಡೆಸಿ ಅಥವಾ ಹೆಚ್ಚುವರಿ ಅಂಗಡಿ ನೀಡಿದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆ ಎಂದು ಎಚ್ಚರಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version