ಮಂಗಳೂರಲ್ಲಿ ರಂಗಚಟುವಟಿಕೆ ನಿರಂತರವಾಗಿರಲಿ ಅರೆಹೊಳೆ ರಂಗಹಬ್ಬ ಸಮಾರೋಪದಲ್ಲಿ ಸದಾನಂದ ಸುವರ್ಣ

Spread the love

ಮಂಗಳೂರಲ್ಲಿ ರಂಗಚಟುವಟಿಕೆ ನಿರಂತರವಾಗಿರಲಿ ಅರೆಹೊಳೆ ರಂಗಹಬ್ಬ ಸಮಾರೋಪದಲ್ಲಿ ಸದಾನಂದ ಸುವರ್ಣ

ರಂಗಭೂಮಿ ಚಟುವಟಿಕೆಗಳು ಮಂಗಳೂರಿನಲ್ಲಿ ಗರಿಗೆದರುವ ಮೂಲಕ ಹೊಸತೊಂದು ಶಕೆ ಆರಂಭವಾಗಿದ್ದು ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪ್ರೇಕ್ಷಕರಿಗೂ ಇದೆ ಎಂದು ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಹೇಳಿದರು. ಅವರು ಅರೆಹೊಳೆ ಪೃತಿಷ್ಠಾನ ಮತ್ತು ಸುಮನಸಾ ಕೊಡವೂರು ಜಂಟಿಯಾಗಿ,  ಅವರ ಗೌರವಾರ್ಥ ಆಯೋಜಿಸಿದ್ದ ಅರೆಹೊಳೆ ರಂಗಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತಾಡುತ್ತಿದ್ದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರು ರಂಗಭೂಮಿಯಲ್ಲಿ ಇತ್ತೀಚಿಗಿನ ದಿನಗಳಲ್ಲಿ ಗರಿಗೆದರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದ ಅವರು ಈ ಹಿನ್ನೆಲೆಯಲ್ಲಿ ಅರೆಹೊಳೆ ಪ್ರತಿಷ್ಠಾನ ಅಭಿನಂದನೀಯ ಎಂದೂ ಹೇಳಿದರು.

ಮತ್ತೋರ್ವ ಅತಿಥಿ ರಂಗಕಲಾವಿದ ವಿಜಯಕುಮಾರ್‍ಕೊಡಿಯಾಲ್ ಬೈಲ್ ಮಾತಾಡುತ್ತಾ, ಇಂತಹರಂಗ ಚಟುವಟಿಕೆಗಳು ನಿರಂತರವಾಗಲೆಂದು ಹಾರೈಸಿದರು. ಲಯನ್ಸ್‍ ಜಿಲ್ಲಾ ಕನ್ನಡಾಭಿವೃದ್ಧಿ ಸಂಯೋಜಕ ಕೇಶವ ಭಟ್, ರಂಗಾಯಣ ಕಲಾವಿದ ಮೈಮ್‍ ರಮೇಶ್, ರಂಗಕರ್ಮಿಜಗನ್ ಪವಾರ್, ಸುಮನಸಾ ಕೊಡವೂರಿನ ಪ್ರವೀಣ್ ಜಿ ಕೊಡವೂರು ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. ವಿಶಾಲಾಕ್ಷಿರಾವ್ ಸ್ವಾಗತಿಸಿ, ಪೃಥ್ವಿರಾವ್, ನಿಶ್ಚಿತಾ ನಿರೂಪಿಸಿದರು. ಸುಮನಸಾದ ಸದಸ್ಯ ದಯಾನಂದ ಕರ್ಕೇರಾ ವಂದಿಸಿದರು. ಅರೆಹೊಳೆ ಸದಾಶಿವ ರಾವ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಮೊದಲು ವಲ್ಲರಿ ಕಡೆಕಾರ್‍ ಅವರಿಂದ ಶೂರ್ಪನಖಾ ಇನ್ನೊಂದು ಮುಖ ಏಕವ್ಯಕ್ತಿ ಪ್ರದರ್ಶನ ಹಾಗೂ ಮೈಮ್‍ ರಮೇಶ್‍ ತಂಡದಿಂದ ಸಿರಿ ನಾಟಕ ಪ್ರದರ್ಶನಗೊಂಡಿತು.


Spread the love