ಮಂಗಳೂರಿಗೆ ಒಂದು ವಿಶಿಷ್ಟ ಸಾಧನೆ – ಅಲ್ಕಾ ಆಂಟೋಗೆ ಫ್ರೆಂಚ್ನಲ್ಲಿ ಪಿ.ಹೆಚ್.ಡಿ.
ಒಂದು ವಿಶಿಷ್ಟ ಸಾಧನೆಯಲ್ಲಿ, ಮಂಗಳೂರಿನ ಅಲ್ಕಾ ಆಂಟೊ ಫ್ರೆಂಚ್ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸುವ ಕ್ಷೇತ್ರದಲ್ಲಿ ಡಾಕ್ಟರೇಟ್ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. `ಕರ್ನಾಟಕದ ಹೋಟೆಲ್ ಮ್ಯಾನೇಜ್ಮೆಂಟ್ ಶಾಲೆಗಳಲ್ಲಿ ಫ್ರೆಂಚ್ ಬೋಧನೆ: ಸಮಸ್ಯೆಗಳು ಮತ್ತು ದೃಷ್ಟಿಕೋನಗಳು’ ಎಂಬ ಪ್ರಬಂಧಕ್ಕಾಗಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ.
ಅಲ್ಕಾ ಆಂಟೊ ಅವರು ತಮ್ಮ ಮಹಾಪ್ರಬಂಧವನ್ನು ಡಾ. ಆರ್. ಸುಧಾ, ಪೆÇ್ರಫೆಸರ್ ಮತ್ತು ಹೆಡ್, ಫ್ರೆಂಚ್ ವಿಭಾಗ, ಸ್ಕೂಲ್ ಆಫ್ ಫಾರಿನ್ ಲಾಂಗ್ವೇಜಸ್, ಮಧುರೈ ಕಾಮರಾಜ್ ಯೂನಿವರ್ಸಿಟಿ, ಮಧುರೈ ಇವರ ಮಾರ್ಗದರ್ಶನದಲ್ಲಿ ಸಿದ್ಧ ಪಡಿಸಿದ್ದರು.
ಅಲ್ಕಾ ಚೆನ್ನೈನ ಲೊಯೊಲಾ ಕಾಲೇಜಿನಿಂದ ಫ್ರೆಂಚ್ ಭಾಷೆಯಲ್ಲಿ ಬಿ.ಎ ಮತ್ತು ಮಧುರೈನ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಫ್ರೆಂಚ್ ಭಾಷೆಯಲ್ಲಿ ಎಂ.ಎ. ಪಡೆದಿದ್ದಾರೆ.
ಶಿಕ್ಷಕಿಯಾಗಿ ವೃತ್ತಿಜೀವನದಲ್ಲಿ ಅವರು ಮಂಗಳೂರಿನಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು, ಸೇಂಟ್ ಆಗ್ನೆಸ್ ಕಾಲೇಜು, ಮಹೇಶ್ ಪಿಯು ಕಾಲೇಜು ಮತ್ತು ಪಾನಾ ಪೂರ್ವ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜು ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶ್ನಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಅಲ್ಕಾ ಆಂಟೊ ನಿವೃತ್ತ ಐಆರ್ಎಸ್ ಅಧಿಕಾರಿ ಶ್ರೀ ಆಂಟೋ ಡೇವಿಡ್ ಮತ್ತು ಡಾ. ಲೀಲಾ ಮಂಜೂರನ್ ದಂಪತಿಯ ಪುತ್ರಿ. ಅವರು ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸರ್ಜರಿ (ಎಂಸಿಒಡಿಎಸ್) ನ ಸಹಾಯಕ ಪ್ರಾಧ್ಯಾಪಕ ಡಾ. ಮ್ಯಾನುಯೆಲ್ ಎಸ್. ಥಾಮಸ್ ಅವರ ಪತ್ನಿ.