Home Mangalorean News Kannada News ಮಂಗಳೂರಿನಲ್ಲಿ ಭವ್ಯವಾದ ಹಿಂದೂ ಮೆರವಣಿಗೆ

ಮಂಗಳೂರಿನಲ್ಲಿ ಭವ್ಯವಾದ ಹಿಂದೂ ಮೆರವಣಿಗೆ

Spread the love

ಮಂಗಳೂರಿನಲ್ಲಿ ಭವ್ಯವಾದ ಹಿಂದೂ ಮೆರವಣಿಗೆ
ಧರ್ಮ, ಕಲೆ, ಭಾಷೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಮೇಲೆ ಅಪರಿಮಿತ ಗ್ರಂಥಗಳನ್ನು ಬರೆಯುವ ಜ್ಞಾನಗುರುಗಳು ಪರಾತ್ಪರ ಗುರು ಡಾ.ಜಯಂತ ಆಠವಲೆಯವರು ಆಗಿದ್ದಾರೆ. ಇವರು ವಿಶ್ವಕಲ್ಯಾಣಕ್ಕಾಗಿ ಸತ್ತ್ವಗುಣೀ ಜನರ ಈಶ್ವರೀ ರಾಜ್ಯವು (ಹಿಂದೂ ರಾಷ್ಟ್ರ, ಸನಾತನ ಧರ್ಮರಾಜ್ಯ) ಬೇಕೇಬೇಕು ಎಂದು ಮೊತ್ತಮೊದಲಿಗೆ ಘೋಷಣೆ ಮಾಡಿದ ರಾಷ್ಟ್ರಗುರುವಾಗಿದ್ದಾರೆ. ಶೀಘ್ರ ಈಶ್ವರಪ್ರಾಪ್ತಿಗಾಗಿ ಗುರುಕೃಪಾಯೋಗ ಈ ಸುಲಭ ಸಾಧನಾ ಮಾರ್ಗವನ್ನು ನಿರ್ಮಿಸಿ ಸಾಧಕರಿಗೆ ಕಾಲಾನುಸಾರ ಯೋಗ್ಯ ಸಾಧನೆಯನ್ನು ಕಲಿಸುವ ಮೋಕ್ಷಗುರುಗಳಾಗಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ತಮ್ಮಲ್ಲಿನ ಜಿಜ್ಞಾಸೆ, ಬುದ್ಧಿವಂತಿಕೆ, ಸಂಶೋಧನಾ ವೃತ್ತಿ, ಪರಿಪೂರ್ಣ ಕೃತಿ ಮಾಡುವ ಧ್ಯಾಸ ಮುಂತಾದ ಗುಣಗಳಿಂದ ಪತ್ರಿಕೋದ್ಯಮ, ಹಿಂದೂ ಸಂಘಟನೆ, ಆಧ್ಯಾತ್ಮಿಕ ಸಂಶೋಧನೆ, ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕಾರ್ಯವನ್ನು ಮಾಡಿದ್ದಾರೆ. ಇಂತಹ ಗುರುಗಳ ಅಮೃತ ಮಹೋತ್ಸವದ ಪ್ರಯುಕ್ತ ಸಮಸ್ತ ಹಿಂದೂ ಸಮಾಜವನ್ನು ಜಾತಿ, ಮತ, ಸಂಘಟನೆ, ಸಂಪ್ರದಾಯ ಇವುಗಳನ್ನು ಮೀರಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರೇರೇಪಿಸುವಂತೆ ಮಂಗಳೂರಿನ ಬಲ್ಮಠದ ಜ್ಯೂಸ್ ಜಂಕ್ಷನ್ ನಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಹಿಂದೂ ಐಕ್ಯತಾ ಮೆರವಣಿಗೆಯನ್ನು ನಡೆಸಲಾಯಿತು. ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಶ್ರೀರಾಮ ಸೇನೆ, ಹಿಂದೂ ಯುವಸೇನೆ, ಹಿಂದೂ ಮಹಾಸಭಾ ಸೇರಿದಂತೆ ವಿವಿಧ ಸ್ಥಳೀಯ ಹಿಂದುತ್ವನಿಷ್ಠ ಸಂಘಟನೆಗಳು, ಭಜನಾ ಮಂಡಳಿಗಳು ಭಾಗವಹಿಸಿದ್ದವು.
ಧರ್ಮಧ್ವಜದ ಪೂಜೆ ಮಾಡುವ ಮೂಲಕ ಮೆರವಣಿಗೆ ಆರಂಭಗೊಂಡಿತು.

ಮೆರವಣಿಗೆಯ ವಿಶೇಷ ಆಕರ್ಷಣೆ :

ರಣರಾಗಿಣಿ ಮಹಿಳಾ ಶಾಖೆಯ ಸದಸ್ಯರು ಮತ್ತು ಚಿಕ್ಕ ಮಕ್ಕಳು ಝಾನ್ಸಿ ರಾಣಿ, ಕಿತ್ತೂರು ರಾಣಿ ಜೆನ್ನಮ್ಮ ಮುಂತಾದ ವೀರ ವನಿತೆಯರ ಉಡುಪನ್ನು ಧರಿಸಿ ಕೈಯಲ್ಲಿ ಖಡ್ಗವನ್ನು ಹಿಡಿದು ಹಿಂದೂ ರಾಷ್ಟ್ರದ ಘೋಷಣೆ ಮಾಡುವುದು ಆಕರ್ಷಕವಾಗಿತ್ತು. ಅದೇ ರೀತಿ ಹಿಂದೂ ರಾಷ್ಟ್ರಸ್ಥಾಪನೆಯ ಸಂದೇಶ ನೀಡುವ ಚಿತ್ರರಥಗಳು ರಾಷ್ಟ್ರ-ಧರ್ಮಜಾಗೃತಿಯನ್ನು ಮೂಡಿಸುತ್ತಿದ್ದವು.
ಅದೇ ರೀತಿ ಹಿಂದೂ ರಾಷ್ಟ್ರ ಸ್ಥಾಪನೆಯ ವೀರ ಘೋಷಗಳು ಸಂಪೂರ್ಣ ಮೆರವಣಿಗೆಯಲ್ಲಿ ಅಲ್ಲಲ್ಲಿ ಸ್ಥಳೀಯ ಧರ್ಮಾಭಿಮಾನಿಗಳು ಅಲ್ಲಲ್ಲಿ ಧರ್ಮಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು.
ಮೆರವಣಿಗೆಯು ಸಾಗುವಾಗ ನಗರದ ಮುಖ್ಯ ವೃತ್ತಗಳಲ್ಲಿ ಪ್ರಶಿಕ್ಷಣಾರ್ಥಿಗಳು ಸಮಿತಿಯ ಪ್ರಶಿಕ್ಷಣ ವರ್ಗದಿಂದ ಪ್ರೇರಿಪಿತರಾದ ಧರ್ಮಾಭಿಮಾನಿಗಳು ಲಾಠಿ, ನಾನ್ ಚಾಕೂ, ಖಡ್ಗದ ಮೂಲಕ ಸ್ವಸಂರಕ್ಷಣೆಯನ್ನು ಮಾಡುವ ಪ್ರಾತ್ರಕ್ಷಿಕೆಯನ್ನು ಮಾಡಿ ತೋರಿಸದರು.
ಮೆರವಣಿಗೆಯ ಕೊನೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವ್ಯಾಸಪೀಠದಲ್ಲಿ ಹಿಂದೂ ಸಂಘಟಕರಾದ ಶ್ರೀ ಉದಯಶಂಕರ, ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ, ಸನಾತನ ಸಂಸ್ಥೆಯ ರಾಜ್ಯ ಪ್ರಸಾರ ಸೇವಕರಾದ ಶ್ರೀ ಕಾಶೀನಾಥ ಪ್ರಭು, ಉದ್ಯಮಿ ಅನಂತ್ ಕಾಮತ್ ಉಪಸ್ಥಿತರಿದ್ದು ಧರ್ಮಪ್ರೇಮಿಗಳಿಗೆ ಮಾರ್ಗದರ್ಶನ ನೀಡಿದರು.
ಸಭಾಕಾರ್ಯಕ್ರಮದಲ್ಲಿ ಹಿಂದೂ ಸಂಘಟಕರಾದ ಉದಯಶಂಕರ್ ಇವರು ಮಾತನಾಡುತ್ತಾ, ಇಂದು ಸನಾತನ ಸಂಸ್ಥೆ ಹಾಗೂ ಹಲವು ವಿವಿಧ ಹಿಂದುತ್ವವಾದಿ ಸಂಘಟನೆಗಳ ಕಾರ್ಯದ ಫಲವಾಗಿ ಇಂದು ಹಿಂದೂ ಸಮಾಜದ ಅಸ್ತಿತ್ವವು ಉಳಿದಿದೆ, ನಾವು ಇಂದೂ ಜಾಗೃತವಾಗದಿದ್ದರೆ ಕಾಶ್ಮೀರದಲ್ಲಿ ಹಿಂದೂಗಳ ಮೇಲಾದ ಆಕ್ರಮಣಗಳು ನಮ್ಮ ಮೇಲೆ ಆಗುವ ದಿನಗಳು ದೂರವಿಲ್ಲ. ಎಂದು ಹೇಳುತ್ತಿದ್ದರು.
ಸನಾತನ ಸಂಸ್ಥೆಯ ರಾಜ್ಯ ಪ್ರಸಾರ ಸೇವಕರಾದ ಶ್ರೀ ಕಾಶೀನಾಥ ಪ್ರಭು ಮಾತನಾಡುತ್ತಾ, ಪರಾತ್ಪರಗುರು ಡಾ ಜಯಂತ ಆಠವಲೆಯವರು ವಿಶ್ವಕಲ್ಯಾಣಕ್ಕಾಗಿ ಸತ್ತ್ವಗುಣೀ ಜನರ ಈಶ್ವರೀ ರಾಜ್ಯವು ಅಂದರೆ ಹಿಂದೂ ರಾಷ್ಟ್ರ, ಸನಾತನ ಧರ್ಮರಾಜ್ಯ ಬೇಕೇಬೇಕು ಎಂದು ಮೊತ್ತಮೊದಲಿಗೆ ಘೋಷಣೆ ಮಾಡಿದ ರಾಷ್ಟ್ರಗುರುವಾಗಿದ್ದಾರೆ. ಶೀಘ್ರ ಈಶ್ವರಪ್ರಾಪ್ತಿಗಾಗಿ ಗುರುಕೃಪಾಯೋಗ ಈ ಸುಲಭ ಸಾಧನಾ ಮಾರ್ಗವನ್ನು ನಿರ್ಮಿಸಿ ಸಾಧಕರಿಗೆ ಕಾಲಾನುಸಾರ ಯೋಗ್ಯ ಸಾಧನೆಯನ್ನು ಕಲಿಸುವ ಮೋಕ್ಷಗುರುಗಳಾಗಿದ್ದಾರೆ. ಅವರ ಆಧ್ಯಾತ್ಮ ಹಾಗೂ ಧರ್ಮಪ್ರಸಾರದ ಕಾರ್ಯ ಇಂದು ವಿಶ್ವದ 185 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಅವರ ಸಂಕಲ್ಪದಂತೆ 2023 ರಲ್ಲಿ ಹಿಂದೂರಾಷ್ಟ್ರದ ಸ್ಥಾಪನೆಯಾಗಲಿದೆ. ವಿಶ್ವಕಲ್ಯಾಣದ ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಕರೆ ನೀಡಿದರು.


Spread the love

Exit mobile version